NEWSದೇಶ-ವಿದೇಶನಮ್ಮರಾಜ್ಯ

ಮತ್ತಷ್ಟು ಕಾವು ಪಡೆದುಕೊಂಡ ಎಂಎಸ್‌ಆರ್‌ಟಿಸಿ ನೌಕರರ ಮುಷ್ಕರ: ಡ್ಯೂಟಿಗೆ ಹೋಗಿದ್ದ ಹಲವರು ಮತ್ತೆ ಮುಷ್ಕರದಲ್ಲಿ ಭಾಗಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಕೊಲ್ಹಾಪುರ: ಎಂಎಸ್‌ಆರ್‌ಟಿಸಿ ಸಿಬ್ಬಂದಿ ಕಳೆದ ಅಕ್ಟೋಬರ್‌ 28ರಿಂದ ಕರೆ ನೀಡಿರುವ ಮುಷ್ಕರ ಸರ್ಕಾರದ ಹಲವು ಬೇಡಿಕೆ ಈಡೇರಿಕೆಯ ನಡುವೆಯೂ ಇನ್ನಷ್ಟು ಕಾವು ಪಡೆದುಕೊಳ್ಳುತ್ತಿದ್ದು, ಶನಿವಾರ ಮತ್ತೆ ಬಸ್‌ಗಳ ಕಾರ್ಯಾಚರಣೆ ನಿಲ್ಲಿಸಿ ನಿಗಮವನ್ನು ಸರ್ಕಾರದೊಂದಿಗೆ ವಿಲೀನ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಹೀಗಾಗಿ ಕಳೆದ ಒಂದು ವಾರದ ನಂತರ ಮತ್ತೆ ಕೊಲ್ಹಾಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಮುಷ್ಕರ ಕಾವು ಪಡೆದುಕೊಂಡಂತಾಗಿದೆ. ಇದಿಷ್ಟೇ ಅಲ್ಲದೆ ಔರಂಗಾಬಾದ್‌ ವಿಭಾಗದ ಡಿಪೋಗಳಲ್ಲಿ ನೌಕರರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆ ಮಾಡುತ್ತಿದ್ದು, ಕೂಡಲೇ ವರ್ಗಾವಣೆಗೊಂಡ ಡಿಪೋಗಳಿಗೆ ಹಾಜರಾಗಿ ಡ್ಯೂಟಿಗೆ ವರದಿ ಮಾಡಿಕೊಳ್ಳುವಂತೆ ತಾಕೀರು ಮಾಡಲಾಗುತ್ತಿದೆ.

MSRTC ನೌಕರರ ಸಂಘ ಮುಷ್ಕರದ ತೀವ್ರತೆಯನ್ನು ಸ್ವಲ್ಪ ಕಡೆಇಮೆಗೊಳಿಸಿತ್ತಾದರೂ ಸಹ, MSRTC ಅನ್ನು ವಿಲೀನಗೊಳಿಸುವ ಬೇಡಿಕೆಯೊಂದಿಗೆ ಸಾವಿರಾರತು ನೌಕರರು ತಮ್ಮ ಮುಷ್ಕರವನ್ನು ಮುಂದುವರೆಸಿದ್ದಾರೆ.

ಇದರಿಂದ ಮತ್ತೆ ಸಂಘಟನೆಗಳು ನೌಕರರ ಪರವಾಗಿ ನಿಲ್ಲುತ್ತಿದ್ದು, ಮುಷ್ಕರಕ್ಕೆ ಇನ್ನಷ್ಟು ಬೆಂಬಲ ಸೂಚಿಸುವ ಮೂಲಕ ನಿಗಮವು ಸರ್ಕಾರದೊಂದಿಗೆ ವಿಲೀನವಾಗುವವರೆಗೂ ಮುಷ್ಕರವನ್ನು ಕೈಬಿಡುವುದಿಲ್ಲ ಎಂದು ಮತ್ತೆ ಪಟ್ಟುಹಿಡಿದು ಕುಳಿತ್ತಿದ್ದಾರೆ.

ಶನಿವಾರ ಬೆಳಗ್ಗೆ ಕೊಲ್ಹಾಪುರ ಎಂಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ ಸಂಭಾಜಿನಗರ ಬಸ್‌ ನಿಲ್ದಾಣದಲದಲ್ಲೇ ನೌಕರರು ಪ್ರತಿಭಟನೆ ನಡೆಸಿದರು. ಪರಿಣಾಮ ಕಾರ್ಯಾಚರಣೆಯ ಮಾರ್ಗಗಳ ಸಂಖ್ಯೆ 230 ರಿಂದ 80ಕ್ಕೆ ಇಳಿಯಿತು. ಗದಿಂಗ್ಲಾಜ್‌ಗೆ ಪ್ರಯಾಣಿಸುವ ಮುಖೇಶ್ ರಾವುತ್ ಎಂಬ ಪ್ರಯಾಣಿರೊಬ್ಬರು ಸರ್ಕಾರ ಮತ್ತು ನಿಗಮಗಳ ನೌಕರರ ನಡುವಿನ ಗೊಂದಲ ಇನ್ನೂ ನಿವಾರಣೆಯಾದಿರುವುದರಿಂದ ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದಾರೆ.

ಇನ್ನಾದರೂ ಸರ್ಕಾರ ನೌಕರರ ನ್ಯಾಯಯುತ ಬೇಡಿಕಗಳನ್ನು ಈಡೇರಿಸುವ ಮೂಲಕ ನೌಕರರು ಮತ್ತೆ ಕೆಲಸಕ್ಕೆ ಮರಳುವಂತೆ ಮಾಡಬೇಕು. ಆ ಮೂಲಕ ತಮ್ಮಲ್ಲಿನ ಗೊಂದಲವನ್ನು ನಿವಾರಿಸಿಕೊಂಡು ಮಹಾರಾಷ್ಟ್ರದ ಜನತೆಗೆ ಅನುಕೂಲ ಮಾಡಿಕೊಂಡಬೇಕು ಎಂದು ಹೇಳಿದ್ದಾರೆ.

ಇನ್ನು ಕೊಲ್ಹಾಪುರ ಜಿಲ್ಲೆಯಲ್ಲಿ 131 ನೌಕರರನ್ನು ಅಮಾನತುಗೊಳಿಸಲಾಗಿದ್ದು, 28 ಗುತ್ತಿಗೆ ಆಧಾರಿತ ಸಿಬ್ಬಂದಿಯನ್ನು ಇದುವರೆಗೆ ಸೇವೆಯಿಂದ ತೆಗೆದುಹಾಕಲಾಗಿದೆ. ರಾಜ್ಯ ಸಾರಿಗೆ ಸಚಿವ ಅನಿಲ್ ಪರಬ್ ಅವರು ಮುಷ್ಕರವನ್ನು ಹಿಂತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮಹಾರಾಷ್ಟ್ರ ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆಯಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು.

ಆದರೂ ಅವರ ಎಚ್ಚರಿಕೆಗೆ ಕ್ಯಾರೆ ಎನ್ನದ ನೌಕರರು ಬಸ್ ನಿಲ್ದಾಣದಲ್ಲಿ ಧರಣಿ ಮುಂದುವರಿಸಿದ್ದಾರೆ. ಅಲ್ಲದ ಈ ವೇಳೆ ಮಾತನಾಡಿದ ಎಂಎಸ್‌ಆರ್‌ಟಿಸಿ ನೌಕರ ಅನಿಲ್ ಪಾಟೀಲ್, ನೌಕರರು ದುಡಿದರೂ ತಿಂಗಳಿಗೆ ಸರಿಯಾಗಿ ವೇತನಪಾವತಿಯಾಗುತ್ತಿಲ್ಲ, ಕೇಳಿದರೆ ಲಾಸ್‌ ಎಂದು ಸಬೂಬು ಹೇಳುತ್ತಾರೆ. ಹೀಗಾಗಿ ನಮಗೆ ಶಾಶ್ವತಪರಿಹಾರ ಸಿಗಲೇ ಬೇಕು ಅಲ್ಲಿಯವರೆಗೂ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇನ್ನು ನೌಕರರು ಇಂದಿನ ಬೆಲೆ ಏರಿಕೆ ನಡುವೆ ನಿಗಮವು ಕೊಡುತ್ತಿರುವ ವೇತನದಿಂದ ಜೀವನ ನಡೆಸುವುದು ತುಂಬ ಕಷ್ಟಕರವಾಗಿದೆ ಹಾಗಾಗಿ ನಮಗೂ ಇತರ ನೌಕರರಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೌಲಭ್ಯಗಳು ಸಿಗಬೇಕು. ಅದಕ್ಕಾಗಿ ಕಳೆದ 25 ದಿನಗಳಿಂದ ಮುಷ್ಕರ ನಡೆಸುತ್ತಿದ್ದೇವೆ. ಆದರೆ ಸರ್ಕಾರ ಮಾತ್ರ ಇನ್ನು ತಾರತಮ್ಯತೆ ಮಾಡುತ್ತಲೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಟ್ಟಾರೆ, ನೌಕರರನ್ನು ಅಮಾನತು, ವಜಾ, ವರ್ಗಾವಣೆ ಮಾಡುತ್ತಿರುವ ನಿಗಮವು ಈವರೆಗೆ ಸುಮಾರು 4 ಸಾವಿರ ನೌಕರರನ್ನು ಅಮಾನತು ಮಾಡಿದ್ದು, 150ಕ್ಕೂ ಹೆಚ್ಚು ಕಾಯಂ ನೌಕರರನ್ನು ಸೇವೆಯಿಂದ ವಜಾ ಮಾಡಿದೆ, ಅಲ್ಲದೆ 2 ಸಾವಿರಕ್ಕೂ ಹೆಚ್ಚು ದಿನಗೂಲಿ ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡಿದೆ. ಈ ಎಲ್ಲದರ ನಡುವೆ ನಿನ್ನೆಯಿಂದ ವರ್ಗಾವಣೆ ಮಾಡುತ್ತಿದ್ದು, ಈವರೆಗೆ 50ಕ್ಕೂ ಹೆಚ್ಚು ನೌಕರರನ್ನು ವರ್ಗಾವಣೆ ಮಾಡಿದೆ.

ಇದರ ಜತೆಗೆ ಮೆಸ್ಮಾ ಜಾರಿ ಮಾಡುವ ಎಚ್ಚರಿಕೆಯನ್ನು ಸಾರಿಗೆ ಸಚಿವರು ನೀಡಿದ್ದಾರೆ. ಆದರೂ ನೌಕರರು ಮಾತ್ರ ತಮ್ಮ ನಿಲುವಿಗೆ ಅಚ್ಚಲವಾಗಿದ್ದು, ಸರ್ಕಾರದೊಂದಿಗೆ ನಿಗಮವನ್ನು ವಿಲೀನ ಮಾಡಲೇ ಬೇಕು ಎಂದು ಪಟ್ಟು ಹಿಡಿದು ಮುಷ್ಕರವನ್ನು ಮುಂದುವರಿಸಿದ್ದಾರೆ.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC