Please assign a menu to the primary menu location under menu

NEWSದೇಶ-ವಿದೇಶರಾಜಕೀಯ

ಮಹಿಳಾ ಸಂಸದೆಯರ ಜತೆಗೆ ಸೆಲ್ಫಿ: ನಂತರ ಕ್ಷಮೆ ಕೇಳಿದ ಸಂಸದ ಶಶಿ ತರೂರ್

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಮಹಿಳಾ ಸಂಸದೆಯರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಸತ್ತು ಆಕರ್ಷಕ ಎಂದು ಹೇಳಿದ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕೆಗೆ ಗುರಿಯಾಗಿದ್ದು, ಇದೀಗ ಟ್ವೀಟ್ ಮಾಡಿ ಕ್ಷಮೆ ಯಾಚಿಸಿದ್ದಾರೆ.

ಸೋಮವಾರದಿಂದ ಸಂಸತ್ ಚಳಿಗಾಲದ ಆಧಿವೇಶನ ಆರಂಭವಾಗಿದೆ. ಸಂಸತ್ ಭವನದಲ್ಲಿ ಆರು ಮಂದಿ ಮಹಿಳಾ ಸಂಸದರೊಂದಿಗೆ ಸೆಲ್ಫಿ ತೆಗೆದುಕೊಂಡ ಶಶಿ ತರೂರ್ ಅವರು ಅದನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದರು.

ಕೆಲಸ ಮಾಡಲು ಸಂಸತ್ತು ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರು ಯಾರು? ಎಂದು ಬರೆದುಕೊಂಡಿದ್ದರು. ಸಂಸತ್‌ನ ಆರು ಮಂದಿ ಮಹಿಳಾ ಸದಸ್ಯರೊಂದಿಗೆ ಇಂದು ಬೆಳಗ್ಗೆ ತೆಗೆಸಿಕೊಂಡು ಚಿತ್ರವಿದು ಎಂದು ಅವರು ಚಿತ್ರದೊಂದಿಗೆ ವಿವರಣೆ ನೀಡಿದ್ದರು.

ಸಂಸದೆ ಸುಪ್ರಿಯಾ ಸುಳೆ, ಪ್ರನೀತ್ ಕೌರ್, ತಮಿಳ್ಸಾಚಿ, ಮಿಮಿ ಚಕ್ರವರ್ತಿ, ನುಸ್ರತ್ ಜಯಾನ್ ರೂಹಿ, ಜ್ಯೋತಿ ಮಣಿ ಇದ್ದ ಚಿತ್ರಕ್ಕೆ ತರೂರ್ ಅವರು ನೀಡಿದ ವಿವರಣೆಗೆ ಆಕ್ಷೇಪಗಳು ವ್ಯಕ್ತವಾದವು.

ಲೋಕಸಭೆಯಲ್ಲಿರುವ ಮಹಿಳೆಯರು ನಿಮ್ಮ ಕಾರ್ಯಕ್ಷೇತ್ರವನ್ನು ಆಕರ್ಷಕವಾಗಿಸುವ ಅಲಂಕಾರಿಕ ವಸ್ತುಗಳಲ್ಲ. ಅವರು ಸಂಸದರು. ನೀವು ಅಗೌರವ ತೋರಬಾರದು. ನೀವು ಲೈಂಗಿಕ ಅಭಿರುಚಿ ಹೊಂದಿದ್ದೀರಿ, ಎಂದು ಪತ್ರಕರ್ತೆ ವಿದ್ಯಾ, ತರೂರ್ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದರು.

ಮಹಿಳೆಯರಿಂದ ಮಾತ್ರವೇ ನೀವು ಆಕರ್ಷಣೆಗೆ ಒಳಗಾಗುತ್ತೀರಾ? ನಿಮ್ಮ ಕಾರ್ಯ ಸ್ಥಳವನ್ನು ಆಕರ್ಷಕಗೊಳಿಸಲು ನಿಮ್ಮ ಜವಾಬ್ದಾರಿ ನಿಮ್ಮ ಕ್ಷೇತ್ರದ ಕಡೆಗಿರಬೇಕು ಎಂದು ನಿಮಗೆ ಅನಿಸುವುದಿಲ್ಲವೇ? ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವೀಟ್ ಟೀಕೆಗೆ ಒಳಗಾಗುತ್ತಿದೆ ಎಂಬುದು ಅರಿಯುತ್ತಲೇ, ಎಚ್ಚೆತ್ತುಕೊಂಡಿರುವ ಸಂಸದ ಶಶಿ ತರೂರ್ ಕ್ಷಮೆ ಕೋರಿದ್ದಾರೆ.

ಈ ಸೆಲ್ಫಿ ನಡೆದಿದ್ದು ಒಂದೊಳ್ಳೆ ಭಾವನೆಯಲ್ಲಿ. ಅದೂ ಮಹಿಳಾ ಸಂಸದರ ಇಚ್ಛೆಯೊಂದಿಗೆ. ಅವರ ಹೇಳಿದಂತೆಯೇ ನಾನು ಫೋಟೊವನ್ನು ಟ್ವಿಟರ್‌ಗೆ ಹಾಕಿದೆ. ಇದರಿಂದ ಕೆಲ ಮಂದಿ ಮನನೊಂದಿದ್ದಾರೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ.

ನಮ್ಮ ಕೆಲಸದ ಸ್ಥಳ ಸೌಹಾರ್ದದಿಂದ ಕೂಡಿದೆ ಎಂಬುದನ್ನು ಬಿಂಬಿಸುವ ಈ ಚಿತ್ರದಲ್ಲಿ ನಾನೂ ಸೇರಿದ್ದಕ್ಕೆ ನನಗೆ ಖುಷಿಯಿದೆ. ಅಷ್ಟೆ ಎಂದು ಶಶಿ ತರೂರ್ ಹೇಳಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ಅಧಿಕಾರಿಗಳು-ನೌಕರರ ಬೇಡಿಕೆಯಂತೆ ಸರಿ ಸಮಾನ ವೇತನ ಕೊಡಿ: BMS ತಾಕೀತು NWKRTC: ಹುಬ್ಬಳ್ಳಿ-ಧಾರವಾಡ ಹೈಕೋರ್ಟ್‌ ನಡುವೆ ಹೊಸ ಬಸ್‌ಗಳ ಸಂಚಾರ- ವಕೀಲರ ಮನವಿ ಸ್ಪಂದಿಸಿದ ಅಧಿಕಾರಿಗಳು ಡಿ.1ರಂದು ಲಾಲ್‌ಬಾಗ್‌ನಲ್ಲಿ ಇಪಿಎಸ್ ಪಿಂಚಿಣಿದಾರರ 83ನೇ ತಿಂಗಳ ಸಭೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ