ವಿಜಯಪಥ ಸಮಗ್ರ ಸುದ್ದಿ
ಕೋಲ್ಕತ್ತಾ: ನಂದಿಗ್ರಾಮದ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ವೇಳೆ ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ನಡೆದಿದ್ದು ಕೋಲ್ಕತ್ತಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬ್ಯಾನರ್ಜಿ ಅವರ ಎಡಗಾಲಿಗೆ ನೋವಾಗಿದ್ದು ಪ್ಲಾಸ್ಟರ್ ಹಾಕಲಾಗಿದೆ.
ಮಮತಾ ಬ್ಯಾನರ್ಜಿಯವರಿಗೆ ವೈದ್ಯರು ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ ಬ್ಯಾನರ್ಜಿಯವರಿಗೆ ವೈದ್ಯರು ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ ಎಸ್ಎಸ್ ಕೆಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ. ಮಮತಾ ಬ್ಯಾನರ್ಜಿಅವರು ಎದೆನೋವು ಮತ್ತು ಉಸಿರಾಟದ ತೊಂದರೆ ಯಾಗುತ್ತಿದೆ ಎಂದು ವೈದ್ಯರಿಗೆ ತಿಳಿಸಿರುವುದರಿಂದ ಆರೋಗ್ಯ ಕುರಿತು ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬ್ಯಾನರ್ಜಿ ಅವರು ಎಡಗಾಲಿನಲ್ಲಿಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡಿದ್ದು, ಪ್ಲಾಸ್ಟರ್ ಹಾಕಲಾಗಿದೆ. ಅದೇ ರೀತಿ ಬಲಭುಜ, ಕುತ್ತಿಗೆ ಭಾಗ ಮತ್ತು ಎದೆನೋವು ಕಾಣಿಸಿಕೊಂಡಿರುವ ಕಾರಣ ಮುಂದಿನ 48 ಗಂಟೆಗಳು ನಿರ್ವಹಿಸಲಾಗುವುದು ಎಂದು ಐಪಿ ಜಿಎಂಆರ್ ಮತ್ತು ಎಸ್ ಎಸ್ ಕೆ ಇಎಂ ವೈದ್ಯರಾದ ಡಾ.ಎಂ. ಬಂದೋಪಾಧ್ಯಾಯ ಮಾಹಿತಿ ನೀಡಿದ್ದಾರೆ
ದೀದಿ ಅವರ ಆರೋಗ್ಯ ಕುರಿತು 48ಗಂಟೆಗಳು ಐಸಿಯುನಲ್ಲಿ ಗಮನಿಸಿ ಇನ್ನುಳಿದ ಕೆಲವು ಆರೋಗ್ಯ ತಪಾಸಣೆಗಳನ್ನು ನಡೆಸಿ ಮುಂದಿನ ಚಿಕಿತ್ಸೆ ಕುರಿತು ನಿರ್ಧಾರ ಮಾಡಲಾಗುವುದು ಎಂದು ವೈದ್ಯರ ತಂಡದ ಸದಸ್ಯರೊಬ್ಬರು ಸ್ಥಳೀಯ ಮಾಧ್ಯಮಕ್ಕೆ ವಿವರಿಸಿದ್ದಾರೆ.
ಘಟನೆ ವಿವರಿಸಿದ ದೀದಿ
ನಾನು ಕಾರಿನಲ್ಲಿ ಸ್ಥಳೀಯ ದೇವಾಲಯಕ್ಕೆ ತೆರಳಿದೆ. ಆ ವೇಳೆ ಬಂದ ಅಪರಿಚಿರ ಗುಂಪು ಕಾರನ್ನು ಓಪನ್ ಮಾಡಿದ ತಕ್ಷಣ ಕೆಲವರು ಕಾರ್ ಡೋರ್‌ಅನ್ನು ಬಲವಂತವಾಗಿ ಹಾಕಿದರು ಇದರಿಂದ ನನ್ನ ಎಡಗಾಲಿಗೆ ನೋವಾಯಿತು. ಅಲ್ಲದೆ ನೋಕಾಡಿದ್ದರಿಂದ ನನಗೆ ನೋವಾಗಿದೆ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಆಸ್ಪತ್ರೆ ಸೇರುತ್ತಿದ್ದಂತೆ ಪಶ್ಚಿಮಬಂಗಾಳದ ಪೊಲೀಸ್ ಮಹಾನಿರ್ದೇಶಕರಾದ ಪಿ ನೀರಾಜ್ನಾಯನ್ ಮಿಡ್ನಾಪುರ ಪೊಲೀಸ್ ಠಾಣೆ ಹಿರಿಯ ಅಧಿಕಾರಿಯಿಂದ ಘಟನೆ ವಿವರ ಕೇಳಿದ್ದಾರೆ. ಘಟನೆಗೆ ಭದ್ರತಾ ವೈಫಲ್ಯ ಕಾರಣ ಎಂಬ ದೂರು ಕೂಡ ಕೇಳಿ ಬರುತ್ತಿದೆ.
ಈ ನಡುವೆ ದೀದಿ ಅವರ ಮೇಲೆ ನಡೆದ ದಾಳಿಯನ್ನು ಪಕ್ಷಾತೀತವಾಗಿ ಹಲವು ಮುಖಂಡರು ಖಂಡಿಸಿದ್ದಾರೆ. ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ನಾಯಕರು, ತಮಿಳುನಾಡಿನ ರಾಜಕಾರಣಿಗಳು ಈ ದಾಳಿಯನ್ನು ಖಂಡಿಸಿದ್ದು, ದಾಳಿಕೊರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ದೀದಿ ಬಹುಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬರಲಿ ಎಂದು ಪ್ರಾರ್ಥಿಸಿದ್ದಾರೆ.