ಶ್ರೀನಗರ: ಕಳೆದ 24 ಗಂಟೆಯಲ್ಲಿ ಭಾರತೀಯ ಸೈನಿಕರು ಐವರು ಉಗ್ರರನ್ನು ಸದೆ ಬಡಿಯುವ ಮೂಲಕ ಉಗ್ರರ ದಾಳಿಕೆ ಪ್ರತ್ಯುತ್ತರ ನೀಡಿದ್ದಾರೆ.
ಕುಲ್ಗಾಮಾ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಕಳೆದ 24 ತಾಸಿನಲ್ಲಿ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಐವರು ಹತರಾಗಿದ್ದಾರೆ.
ಕುಲ್ಗಾಮಾದ ಝೋಡರ್ ಕಾರ್ಡರ್ ಪ್ರದೇಶದಲ್ಲಿ ಉಗ್ರರ ಇರುವ ಬಗ್ಗೆ ದೊರೆತದ ಖಚಿತ ಮಾಹಿತಿ ಮೇರೆಗೆ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಸೈನಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು, ಅದಕ್ಕೆ ಭಾರತೀಯ ಸೈನಿಕರು ಪ್ರತ್ಯುತ್ತರವಾಗಿ ಗುಂಡಿನ ದಾಳಿ ನಡೆಸಿ, ಲಷ್ಕರ್-ಇ-ತ್ಯೋಬಾ ಸಂಘಟನೆಯ ಇಬ್ಬರನ್ನು ಹೊಡೆದುರಿಳಿಸಿತು.
ಇನ್ನು ಪುಲ್ವಾಮಾದಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮತ್ತೊಬ್ಬನನ್ನು ಹಂದ್ವಾರಾದ ಎನ್ಕೌಂಟರ್ ನಲ್ಲಿ ಹೊಡೆದುರಳಿಸಲಾಗಿದೆ. ಹಂದ್ವಾರದಲ್ಲಿ ಹತನಾದ ಉಗ್ರ ಮೆಹ್ರಜುದ್ದೀನ್ ಹಲ್ವಾಯಿ ಅಲಿಯಾಸ್ ಉಬೈದ್ ಎಂದು ತಿಳಿದು ಬಂದಿದೆ.