NEWSದೇಶ-ವಿದೇಶಸಂಸ್ಕೃತಿ

ಬೆಂಗಳೂರಿನ ಅಧ್ಯಾಪಕಿ, ಲೇಖಕಿ ಶ್ರೀಕಲಾ ಪಿ. ವಿಜಯನ್‌ಗೆ ಗುಜರಾತ್ ಸಾಹಿತ್ಯ ಅಕಾಡೆಮಿಯ ‘ಗೋಲ್ಡನ್ ಬ್ಯಾಡ್ಜ್’ ಪ್ರಶಸ್ತಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಗುಜರಾತ್ ಸರ್ಕಾರದ ಅಡಿಯಲ್ಲಿ ವಿಶ್ವದ ಶ್ರೇಷ್ಠ ಬರಹಗಾರರ ವೇದಿಕೆ ಮತ್ತು ಗುಜರಾತ್ ಸಾಹಿತ್ಯ ಅಕಾಡೆಮಿ ಕೊಡಮಾಡುವ ಅತ್ಯಂತ ಪ್ರತಿಷ್ಠಿತ ‘ಗೋಲ್ಡನ್ ಬ್ಯಾಡ್ಜ್’ ಪ್ರಶಸ್ತಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಅದರಲ್ಲೂ ಬೆಂಗಳೂರಿನ ಲೇಖಕಿ, ಶಿಕ್ಷಣ ತಜ್ಞೆ ಶ್ರೀಕಲಾ ಪಿ.ವಿಜಯನ್ ಅವರಿಗೆ ಸಂದಿದೆ.

ಬೆಂಗಳೂರಿನ ಹೆಸರಘಟ್ಟ ರಸ್ತೆ ಬಾಗಲಗುಂಟೆಯ ಸೌಂದರ್ಯ ಸೆಂಟ್ರಲ್ ಸ್ಕೂಲ್ ಅಧ್ಯಾಪಕಿ, ಲೇಖಕಿ ಶ್ರೀಕಲಾ ಪಿ.ವಿಜಯನ್ ಅವರ ಇಂಗ್ಲಿಷ್ ಭಾಷೆಯ ‘ಸೋಲ್ ಇನ್ ಹೋಲ್’ ಪುಸ್ತಕದ ‘ ಅಲಿಷಾ ಜರ್ನಿ’ ಎಂಬ ಕವಿತೆಗೆ ಈ ಪ್ರಶಸ್ತಿ ನೀಡಲಾಗಿದೆ.

ಗುಜರಾತಿನ ಅಹಮದಾಬಾದ್ ನಿಂದ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ವಿಶ್ವದ ಪ್ರತಿಷ್ಠಿತ ಬರಹಗಾರರ ವೇದಿಕೆ ಸಂಸ್ಥಾಪಕ ಶಿಜು ಎಚ್. ಪಲ್ಲಿತಾಜೆತ್, ಗುಜರಾತ್ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ವಿಷ್ಣು ಪಾಂಡ್ಯ ಮತ್ತಿತರ ಗಣ್ಯರು ಲೇಖಕಿ ಶ್ರೀಕಲಾ ಪಿ. ವಿಜಯನ್ ಅವರಿಗೆ ‘ಗೋಲ್ಡನ್ ಬ್ಯಾಡ್ಜ್’ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಲೇಖಕಿ ಶ್ರೀಕಲಾ ಪಿ. ವಿಜಯನ್ ಅವರ ಸಾಹಿತ್ಯ ಕೃಷಿ ಹಾಗೂ ಅವರ ಸಾಹಿತ್ಯ ಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಲೇಖಕಿ ಶ್ರೀಕಲಾ ಪಿ.ವಿಜಯನ್ ಅವರು, ತಮ್ಮ ಬಾಲ್ಯದ ದಿನಗಳಿಂದಲೂ ಕವಿತೆ ಬರೆಯಲು ಆರಂಭಿಸಿದ ಶಿಕ್ಷಣ ತಜ್ಞೆ. ಆಂಗ್ಲಭಾಷೆಯಲ್ಲಿ ಅಪಾರ ಪ್ರಭುತ್ವದ ಹೊಂದಿರುವ ಅವರು, ಈಗಾಗಲೇ ನೂರಾರು ಕವಿತೆಗಳನ್ನು ಬರೆದಿದ್ದಾರೆ. ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ.

ಅವರ ಕಾವ್ಯಾತ್ಮಕ ಕೆಲಸಗಳಿಗಾಗಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಕೂಡ ಸಂದಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಕವನ ಸಂಕಲನಗಳು ಪ್ರಕಟಗೊಂಡಿವೆ. ಸದ್ಯ ‘ಅಮೋರಸ್ ಮ್ಯೂಸಿಂಗ್ಸ್’ ಎಂಬ ಕೃತಿ ರಚನೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ