NEWSನಮ್ಮರಾಜ್ಯರಾಜಕೀಯ

ಹಳ್ಳಿಫೈಟ್‌: ಮೈಸೂರಿನಲ್ಲಿ ಶಾಸಕ ಜಿಟಿಡಿ ಆಪ್ತ ತಾಪಂ ಹಾಲಿ ಉಪಾಧ್ಯಕ್ಷ ಮಂಜು ಸೋಲು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಮೈಸೂರಿನಲ್ಲಿ ಶಾಸಕ ಜಿ. ಟಿ. ದೇವೇಗೌಡ ಆಪ್ತ ತಾಲೂಕು ಪಂಚಾಯಿತಿ ಹಾಲಿ ಉಪಾಧ್ಯಕ್ಷ ಎನ್. ಬಿ. ಮಂಜು ಸೋಲು ಕಂಡಿದ್ದಾರೆ. ಆನಂದೂರು ಪಂಚಾಯಿತಿಯ ಕಲ್ಲೂರು ನಾಗನಹಳ್ಳಿ ಕ್ಷೇತ್ರದಿಂದ 5ನೇ ಬಾರಿ ಕಣಕ್ಕಿಳಿದಿದ್ದ ಅವರು 312 ಮತ ಪಡೆದಿದ್ದಾರೆ. ಪ್ರತಿಸ್ಪರ್ಧಿ ತುಳಸಿರಾಮು 380 ಮತ ಪಡೆದು ಗೆದ್ದಿದ್ದಾರೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಗ್ರಾಮದ 5ನೇ ಬ್ಲಾಕ್ ನಲ್ಲಿ ಜೆಡಿಎಸ್ ಬೆಂಬಲಿತ ರವಿ ಮತ್ತು ಲಕ್ಷಮ್ಮಯ್ಯ ಗೆದ್ದಿದ್ದು, ಲಾಟರಿ ಮೂಲಕ ಆಯ್ಕೆ ಮಾಡಿದಾಗ ಲಕ್ಷ್ಮಯ್ಯನಿಗೆ ಜಯ ಸಿಕ್ಕಿದೆ.

ಚಿತ್ರದುರ್ಗ ಜಿಲ್ಲೆ ಯಳಗೋಡು ಗ್ರಾಮ ಪಂಚಾಯಿತಿ ಬಸ್ತಿಹಳ್ಳಿ ಗ್ರಾಮದಲ್ಲಿ ಶಾಂತ ಕುಮಾರ್ 1 ಮತದ ಅಂತರದಿಂದ ಗೆಲುವು ಸಾಧಿಸಿದ್ದರೆ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯ ರಾಜಾಪುರದ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಂಗಳ ಮುಖಿ ಸುಧಾ ಜಯಗಳಿಸಿದ್ದಾರೆ. 26 ವರ್ಷಗಳಿಂದ ಇಲ್ಲಿ ಅವಿರೋಧ ಆಯ್ಕೆ ನಡೆದಿತ್ತು, ಈ ಬಾರಿ ಚುನಾವಣೆ ನಡೆದಿತ್ತು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಗ್ರಾಮ ಬೂಕನಕೆರೆಯಲ್ಲಿ ಗ್ರಾಮ ಪಂಚಾಯಿತಿ ಫಲಿತಾಂಶ ಡ್ರಾ ಆಗಿದೆ. ಜೆಡಿಎಸ್ ಬೆಂಬಲಿತ ಮಂಜುಳಾ, ಕಾಂಗ್ರೆಸ್ ಬೆಂಬಲಿತ ರುಕ್ಮಿಣಮ್ಮ 183 ಮತಗಳನ್ನು ಪಡೆದಿದ್ದಾರೆ. ಲಾಟರಿ ಮೂಲಕ ವಿಜೇತ ಅಭ್ಯರ್ಥಿ ಆಯ್ಕೆ ಮಾಡಿದಾಗ ಮಂಜುಳಾ ಗೆಲುವು ಸಾಧಿಸಿದರು.

ಕರ್ಜಗಿ ಗ್ರಾಮ ಪಂಚಾಯಿತಿ ಯತ್ತಿನಹಳ್ಳಿ ಗ್ರಾಮದ ಎರಡನೇ ವಾರ್ಡ್‌ನಿಂದ ಹಿಂ “ಅ “ವರ್ಗ ಮಹಿಳಾ ಮೀಸಲು ಕ್ಷೇತ್ರದಿಂದ ಕನಕಾ ಫಕ್ಕಿರಪ್ಪ ತುಬಾಕಿ ಹಾಗೂ ಸಾಮಾನ್ಯ ಕ್ಷೇತ್ರದಿಂದ ದಾವಲ ಸಾಬ ಹು ಹುಬ್ಬಳ್ಳಿ ಆಯ್ಕೆ. ಕಾರವಾರ ತಾಲೂಕಿನ ಗ್ರಾಮ ಪಂಚಾಯತಿ ಅಖಾಡದಲ್ಲಿ ಸಹೋದರರಿಬ್ಬರು ಗೆಲುವು ಸಾಧಿಸಿದ್ದಾರೆ. ಘಾಡಸಾಯಿ‌ ಪಂಚಾಯಿತಿಗೆ ಸ್ಪರ್ಧಿಸಿದ್ದ ಅಣ್ಣ- ತಮ್ಮ ಗೆಲುವು ಸಾಧಿಸಿದ್ದು, ಬೋಳಶಿಟ್ಟಾ ವಾರ್ಡ್‌ನಿಂದ ಸ್ಪರ್ಧಿಸಿದ್ದ ಗಿರೀಶ ಕೊಠಾರಕರ್ 181 ಮತ ಪಡೆದು 61 ಮತಗಳಿಂದ, ಹಳಗೆಜೂಗದ ವಾರ್ಡ್‌ನಿಂದ ಸ್ಪರ್ಧಿಸಿದ್ದ ತಮ್ಮ ಅವಿನಾಶ ಕೊಠಾರಕರ್‌ 221 ಮತಗಳನ್ನು ಪಡೆದು 19 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಭಟ್ಕಳ ತಾಲೂಕು ಹೆಬಳೆ ಗ್ರಾಮ ಪಂಚಾಯತಿ ನೆರ್ಲೆಸರ್ ವಾರ್ಡ್ ನಲ್ಲಿ ಸಚಿನ್ ಮೊಗೇರ, ಅಲಿ ಮಲ್ಲಿಕ್ ಸಿದ್ದಿಕ್, ಕೋಣಾರ ಗ್ರಾಮ ಪಂಚಾಯತಿ ಹಡೀಲ್ ವಾರ್ಡ್ ನ ಕುಳ್ಳಿ ಗೊಂಡ, ಉದಯ ನಾಯ್ಕ, ಬೈಲೂರು ಗ್ರಾಮ ಪಂಚಾಯತಿ ದೊಡ್ಡಬಲಸೆ ವಾರ್ಡ್ ನ ಕೃಷ್ಣಾ ನಾಯ್ಕಗೆ 480 ಮತಗಳಿಂದ, ಸಾವಿತ್ರಿ ಮೊಗೇರ, ಗೀತಾ ನಾಯ್ಕಗೆ ಗೆಲುವು.

ತಾಯಿ ಮತ್ತು ಮಗ ಬಾಗಲಕೋಟೆಯ ಇಳಕಲ್ ತಾಲೂಕಿನ ಓತಗೇರಿ ಪಂಚಾಯಿತಿ ವ್ಯಾಪ್ತಿಯ ಗೋನಾಳ ಗ್ರಾಮದಲ್ಲಿ ಗೆಲುವು ಸಾಧಿಸಿದ್ದಾರೆ. ಹನಮವ್ವ ಕುರಿ ಮತ್ತು ದೊಡ್ಡಪ್ಪ ಕುರಿ ಇಬ್ಬರೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ.

ಜೈಲಿನಿಂದಲೇ ಅವರು ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ದ ಕೊಡಗು ಜಿಲ್ಲೆಯ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಎಮ್ಮೆಗುಂಡಿ ಕ್ಷೇತ್ರದ ಪುಲಿಯಂಡ ಬೋಪಣ್ಣ ಗೆಲವು ಸಾಧಿಸಿದ್ದಾರೆ. ಹಾಸನ ತಾಲೂಕಿನ ಹೆರಗು ಗ್ರಾಮ ಪಂಚಾಯಿತಿಯ ಎಚ್. ಭೈರಾಪುರ ಗ್ರಾಮದಲ್ಲಿ ಅತ್ತೆ ಸೊಂಬಮ್ಮ ಸೊಸೆ ಪವಿತ್ರಾರನ್ನು 3 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಸೊಂಬಮ್ಮ 276, ಪವಿತ್ರ 273 ಮತಗಳನ್ನು ಪಡೆದಿದ್ದಾರೆ..

ಕಾರವಾರ ತಾಲೂಕಿನ ಮುಡಿಗೇರಿ ಪಂಚಾಯಿತಿಯಲ್ಲಿ ಇಂಜಿನಿಯರ್ ಉದ್ಯೋಗಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ವೆಲಿಂಡಾ ಡಿಸೋಜಾ (28) ಗೆಲುವು ಕಂಡ ಅಭ್ಯರ್ಥಿಯಾಗಿದ್ದಾರೆ. ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯತಿ 2ನೇ ವಾರ್ಡ್‌ನಲ್ಲಿ ಇಬ್ಬರು ಅಭ್ಯರ್ಥಿಗಳು 311 ಮತಗಳನ್ನು ಪಡೆದಿದ್ದಾರೆ. ಟಾಸ್ ಮೂಲಕ ಗೆದ್ದ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ಶ್ರೀಶೈಲಪ್ಪ ಹಿಪ್ಪರಗಿ ಗೆಲುವು ಕಂಡಿದ್ದು, ರಾವುತಪ್ಪ ಆಲೂರ ಸೋಲು ಕಂಡರು.

ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗುಂಡುಮುಣು ಗ್ರಾಮ ಪಂಚಾಯಿತಿ ಕ್ಷೇತ್ರ ಸಂಖ್ಯೆ 1ರಲ್ಲಿ ಗಂಡ ಗೆಲುವು ಸಾಧಿಸಿದ್ದು, ಹೆಂಡತಿ ಸೋಲು ಕಂಡಿದ್ದಾರೆ. ಎರಡು ಸ್ಥಾನಗಳಲ್ಲಿ ಶ್ರೀಕಾಂತ್ 314 ಮತಗಳನ್ನು ಪಡೆದು ಗೆಲುವು ಕಂಡರೆ, ಲಕ್ಷ್ಮೀದೇವಿ 283 ಮತ ಪಡೆದು ಸೋತರು.

ಕೊಡಗು ಜಿಲ್ಲೆಯ ಮೂರ್ನಾಡು ಪಂಚಾಯಿತಿ ವ್ಯಾಪ್ತಿಯ ಕಾಂತೂರು ಮೂರ್ನಾಡು ಕ್ಷೇತ್ರದಿಂದ ಕಳೆದ ಬಾರಿ ಸೋತಿದ್ದ ಅಭ್ಯರ್ಥಿ ವಿಜಯಲಕ್ಷ್ಮಿ ಈ ಬಾರಿ ಗೆಲುವು ದಾಖಲಿಸಿದ್ದಾರೆ. ಕಳೆದ ಬಾರಿ 21 ಮತದಲ್ಲಿ ಸೋಲೊಪ್ಪಿಕೊಂಡಿದ್ದ ವಿಜಯಲಕ್ಷ್ಮಿ, ಈ ಬಾರಿ 249 ಮತ ಪಡೆದು 17 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕೊಡಗು ಜಿಲ್ಲೆಯ ಮಾಯಮುಡಿ ಗ್ರಾಮ ಪಂಚಾಯತಿಯಲ್ಲಿ ಚೆಪ್ಪುಡೀರ ಕೆ.ಪ್ರದೀಪ್ ವಿಜಯದ ನಗೆ ಬೀರಿದ್ದಾರೆ.

ಗಂಗಾವತಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಸಣಾಪುರ ಗ್ರಾ.ಪಂ ವ್ಯಾಪ್ತಿಯ ಅಂಜಿನಹಳ್ಳಿ ಗ್ರಾಮದ ರಾಣಿ ನಾಗೇಂದ್ರ ಎನ್ನುವವರು ಕೇವಲ ಒಂದು ಮತದಿಂದ ರೋಚಕ ಗೆಲುವು ಪಡೆದಿದ್ದಾರೆ.

ತುಮಕೂರು ತಾಲೂಕಿನ ಬುಗಡನಹಳ್ಳಿ ಗ್ರಾಮ ಪಂಚಾಯತಿಯ ಹನುಮಂತಪುರ ಕ್ಷೇತ್ರದ ಅಭ್ಯರ್ಥಿ ಟಿ.ವಿ ಶಿವಕುಮಾರ್ ಕೇವಲ ಒಂದು ಮತದ ಅಂತರದಿಂದ ತಮ್ಮ ಪ್ರತಿಸ್ಪರ್ಧಿ ಕೃಷ್ಣಪ್ಪ ಅವರನ್ನು ಸೋಲಿಸಿದ್ದಾರೆ. ಟಿ.ವಿ ಶಿವಕುಮಾರ್ ಅವರಿಗೆ 163 ಮತ ಬಂದಿದ್ದರೆ, ಪ್ರತಿಸ್ಪರ್ಧಿ ಕೃಷ್ಣಪ್ಪ ಅವರಿಗೆ 162 ಮತ ಬಂದಿದೆ.

ಭಟ್ಕಳ ತಾಲೂಕು ಶಿರಾಲಿ ಗ್ರಾಮ ಪಂಚಾಯತಿ ಕೇಸುಮನೆ ವಾರ್ಡ್ ನ ಜನಾರ್ಧನ್ ದೇವಾಡಿಗ 410 ಮತ ಪಡೆದು, 110 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮುಂಡಳ್ಳಿ ಗ್ರಾಮ ಪಂಚಾಯತಿ ಚೌಥನಿ ವಾರ್ಡ್ ನಲ್ಲಿ ಪುಣ್ಯವತಿ ದೇವಾಡಿಗ 300 ಮತ ಪಡೆದು 40 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮಂಗಲ ಸುಬ್ಬುಮನೆ 50 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಕರ್ಜಗಿ ಗ್ರಾಮ ಪಂಚಾಯಿತಿ ಯತ್ತಿನಹಳ್ಳಿ ಗ್ರಾಮದ ಎರಡನೇ ವಾರ್ಡ್‌ನಿಂದ ಹಿಂ “ಅ “ವರ್ಗ ಮಹಿಳಾ ಮೀಸಲು ಕ್ಷೇತ್ರದಿಂದ ಕನಕಾ ಫಕ್ಕಿರಪ್ಪ ತುಬಾಕಿ ಹಾಗೂ ಸಾಮಾನ್ಯ ಕ್ಷೇತ್ರದಿಂದ ದಾವಲ ಸಾಬ ಹು ಹುಬ್ಬಳ್ಳಿ ಆಯ್ಕೆ

ಚಿತ್ರದುರ್ಗ ಜಿಲ್ಲೆಯ ತಾಲೂಕಿನ ಸಾಣಿಕೆರೆಡ ಗ್ರಾಮ ಪಂಚಾಯಿತಿಯ 241 ಮತಗಟ್ಟೆಯಲ್ಲಿ ಅಂಜು ಎಂ. ಮತ್ತು ಬಿ. ಎ. ಕ್ಷಿತಿಜಾ ತಲಾ 375 ಮತಗಳನ್ನು ಪಡೆದು ಸಮಬಲ ಸಾಧಿಸಿದರು. ಲಾಟರಿ ಮೂಲಕ ಆಯ್ಕೆ ಮಾಡಿದಾಗ ಅಂಜು ಎಂ. ಗೆಲುವು ಸಾಧಿಸಿದ್ದಾರೆ.

Leave a Reply

error: Content is protected !!
LATEST
ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ