ಮೈಸೂರು: ರಾಜ್ಯದಲ್ಲಿ ಕೊರೊನಾ ವಿಶ್ವಮಾರಿ ದಿನದಿಂದ ದಿನಕ್ಕೆ ಹೆಚ್ಚಾಗಿ ಅಬ್ಬರಿಸುತ್ತಿದ್ದು, ಅದು ರಾಜ್ಯದ ಅರಮನೆ ನಗರಿ ಮೈಸೂರು ನಗರ ಹಾಗೂ ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4217 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, 1517 ಮಂದಿ ಗುಣಮುಖರಾಗಿದ್ದಾರೆ. ಇನ್ನು 2558 ಮಂದಿ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 142 ಸೋಂಕಿತರು ಮೃತಪಟ್ಟಿದ್ದಾರೆ.
ಇನ್ನು ಶುಕ್ರವಾರ 204 ಮಂದಿ ಹೊಸದಾಗೊ ಸೋಂಕಿಗೆ ಒಳಗಾಗಿದ್ದು, 302 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 5 ಮಂದಿಯನ್ನು ಕೊರೊನಾ ಬಲಿಪಡೆದಿದೆ.
ಜಿಲ್ಲೆಯ ನಗರ ಮತ್ತು ತಾಲೂಕುವಾರು ಸೋಂಕಿತರ ವಿವರ ಇಲ್ಲಿದೆ.
ಎಚ್ ಡಿ ಕೋಟೆ ತಾಲೂಕು: 61 ಪಾಸಿಟಿವ್ 36 ಡಿಸ್‌ಚಾರ್ಜ್ 25 ಆ್ಯಕ್ಟೀವ್ ಪ್ರಕರಣ
ಹುಣಸೂರು ತಾಲೂಕು: 81 ಪಾಸಿಟಿವ್ 38 ಡಿಸ್‌ಚಾರ್ಜ್ 01 ಸಾವು 42 ಆ್ಯಕ್ಟೀವ್ ಪ್ರಕರಣ
ಕೆ ಆರ್ ನಗರ ತಾಲೂಕು: 66 ಪಾಸಿಟಿವ್ 32 ಡಿಸ್‌ಚಾರ್ಜ್ 02 ಸಾವು 32 ಆ್ಯಕ್ಟೀವ್ ಪ್ರಕರಣ
ಮೈಸೂರು ನಗರ: 3613 ಪಾಸಿಟಿವ್ 1171 ಡಿಸ್‌ಚಾರ್ಜ್ 127 ಸಾವು 2315 ಆ್ಯಕ್ಟೀವ್ ಪ್ರಕರಣ
ಮೈಸೂರು ತಾಲೂಕು: 88 ಪಾಸಿಟಿವ್ 39 ಡಿಸ್‌ಚಾರ್ಜ್ 02 ಸಾವು 47 ಆ್ಯಕ್ಟೀವ್ ಪ್ರಕರಣ
ನಂಜನಗೂಡು ತಾಲೂಕು: 164 ಪಾಸಿಟಿವ್ 123 ಡಿಸ್‌ಚಾರ್ಜ್ 04 ಸಾವು 37 ಆ್ಯಕ್ಟೀವ್ ಪ್ರಕರಣ
ನಂಜನಗೂಡು ಗ್ರಾಮಾಂತರ: 11 ಪಾಸಿಟಿವ್ 11 ಡಿಸ್‌ಚಾರ್ಜ್
ಪಿರಿಯಾಪಟ್ಟಣ ತಾಲೂಕು: 18 ಪಾಸಿಟಿವ್ 08 ಡಿಸ್‌ಚಾರ್ಜ್ 10 ಆ್ಯಕ್ಟೀವ್ ಪ್ರಕರಣ
ಟಿ ನರಸೀಪುರ ತಾಲೂಕು: 115 ಪಾಸಿಟಿವ್ 59 ಡಿಸ್‌ಚಾರ್ಜ್ 06 ಸಾವು 50 ಆ್ಯಕ್ಟೀವ್ ಪ್ರಕರಣ