NEWSನಮ್ಮರಾಜ್ಯಸಿನಿಪಥ

ರಾಕಿಂಗ್ ಸ್ಟಾರ್​ ಯಶ್ ಜನುಮದಿನ: ಸಾಧನೆ, ಬಾಲ್ಯದ ನೆನಪಿನ ಬುತ್ತಿ…!

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಿನಿಸುದ್ದಿ
ಬೆಂಗಳೂರು: ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್​ ಯಶ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯಶ್​ ಈಗ ಪ್ಯಾನ್​ ಇಂಡಿಯಾ ನಟ. ಕೆಜಿಎಫ್​ ಚಾಪ್ಟರ್ 1 ಯಶ್ ರಿಲೀಸ್ ಆದ ನಂAತರ ರಾಕಿ ಬಾಯ್​ ಆಗಿ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಪ್ರೇಕ್ಷಕರಿಗೆ ಪರಿಚಯವಾದರು. ಕೆಜಿಎಫ್​ ಸಿನಿಮಾ ಯಶ್ ಅವರಿಗೆ ಮಾತ್ರವಲ್ಲದೆ ಕನ್ನಡ ಸಿನಿಮಾಗೂ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು.

ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಈ ನಟಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ಮಾತ್ರ ಪ್ರಶಾಂತ್​ ನೀಲ್ ನಿರ್ದೇಶನದ ಕೆಜಿಎಫ್​ ಸಿನಿಮಾ. ಈ ಸಿನಿಮಾದಿಂದಾಗಿ ಯಶ್​ ಅವರಿಗಿದ್ದ ಅಭಿಮಾನಿ ಬಳಗ ಮತ್ತಷ್ಟು ವಿಸ್ತಾರವಾಯಿತು.

ಕನ್ನಡ ಸಿನಿರಂಗದತ್ತ ಇಡೀ ಭಾರತದ ಚಿತ್ರರಂಗವೇ ನೋಡುವಂತೆ ಮಾಡಿದ ಕೆಜಿಎಫ್​ ಸಿನಿಮಾದ ರಾಕಿ ಬಾಯ್​ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬದಂದು ಅವರ ಬಗ್ಗೆ ಕೆಲವು ಆಶ್ಚರ್ಯಕರ ಮತ್ತು ಖುಷಿಯ ವಿಷಯಗಳನ್ನು ತಿಳಿದುಕೊಳ್ಳೋಣ.

ಸಿನಿರಂಗಕ್ಕೆ ಬರುವ ಮೊದಲು ಜನ್ಮನಾಮ ನವೀನ್​ ಕುಮಾರ್ ಗೌಡ ಎಂದೆ ಎಲ್ಲರೂ ಇವರನ್ನು ಗುರುತಿಸುತ್ತಿದ್ದರು. 1986 ಜ. 8ರಂದು ಹಾಸನದ ಪುಟ್ಟ ಹಳ್ಳಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಯಶ್​ ಜನನ. ಯಶ್​ ಅವರ ತಂದೆ ಕೆಎಸ್​ಆರ್​ ಟಿಸಿಯಲ್ಲಿ ಚಾಲಕರಾಗಿದ್ದಾರೆ. ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಯಶ್​, ನಂತರ ಭವಿಷ್ಯವನ್ನು ಕಂಡುಕೊಳ್ಳಲು ಬೆಂಗಳೂರಿನತ್ತ ಮುಖ ಮಾಡಿದ್ದರು.

ಬೆಂಗಳೂರಿಗೆ ಬಂದ ಯಶ್​ ಬಿ.ವಿ. ಕಾರನಾಥ್​​ ಅವರ ಬೆನಕ ಥಿಯೇಟರ್​ ಗ್ರೂಪ್​ ಸೇರಿಕೊಂಡರು. ಮೊದಲು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಯಶ್​, ಕಿರುತೆರೆಯ ಮೂಲಕ ಮೊದಲು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು. ಈ ಹಿಂದೆ ಯಶ್​ ಸಂದರ್ಶನವೊಂದರಲ್ಲಿ ಹೇಳಿದಂತೆ ಕೆಜಿಎಫ್​ ಚಾಪ್ಟರ್​ 1 ರಿಲೀಸ್ ಆದಾಗಲೂ ಅವರ ತಂದೆ ಕೆಎಸ್​ಆರ್​ಟಿಸಿಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು. 2020ರ ಆರಂಭದಲ್ಲಿ ಯಶ್​ ಅವರ ತಂದೆ ನಿವೃತ್ತಿ ಹೊಂದಿದರು.

ಕೆಜಿಎಫ್​ ಚಾಪ್ಟರ್​ 1 ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮದಲ್ಲಿ ರಾಜಮೌಳಿ ಅವರೂ ಸಹ ಯಶ್​ ಅವರ ತಂದೆ ಬಗ್ಗೆ ಹೇಳಿದ್ದರು. ಯಶ್​ ಅವರು ಓರ್ವ ಬಸ್​ ಚಾಲಕನ ಮಗ ಹಾಗೂ ಅವರ ತಂದೆ ಇಂದಿಗೂ ಚಾಲಕನಾಗಿ ಕಾರ್ಯನಿರ್ವಸಹಿಸುತ್ತಿದ್ದಾರೆ ಎಂದು ತಿಳಿದು ಆಶ್ಚರ್ಯಚಕಿನತಾಗಿದ್ದೆ. ಮಗನಿಗಿಂತ ಅವರ ತಂದೆ ನಿಜವಾದ ದೊಡ್ಡ ಸ್ಟಾರ್ ಎಂದಿದ್ದರು.

ಇನ್ನು ನಂದ ಗೋಕುಲ ಧಾರಾವಾಹಿಯ ಮೂಲಕ ವೃತ್ತಿ ಜೀವನ ಆರಂಭಿಸಿದ ಯಶ್​, ಈಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಯಶ್ ಹಾಗೂ ರಾಧಿಕಾ ಕಿರುತೆರೆಯಲ್ಲಿ ನಟಿಸುವಾಗಲೇ ಇವರ ನಡುವೆ ಇದ್ದ ಪರಿಚಯ ಬೆಳೆದು ಸ್ನೇಹವಾಗಿತ್ತು. ನಂತರ ಅದೇ ಪ್ರೀತಿಯಾಗಿ ಮದುವೆಯೂ ಆಗಿ ಈಗ ಆರತಿಗೊಬ್ಬಳ್ಳು, ಕೀರ್ತಿಗೊಬ್ಬನನ್ನು ಪಡೆದು ಸುಖಿ ಸಂಸಾರ ನಡೆಸುತ್ತಿದ್ದಾರೆ.

2008ರಲ್ಲಿ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಯಶ್​, ತಮ್ಮ 12 ವರ್ಷದ ಸಿನಿ ಜೀವನದ ಅಷ್ಟು ಸುಲಭವಾಗಿರಲಿಲ್ಲ. ಪೋಷಕ ಹಾಗೂ ಅತಿಥಿ ಪಾತ್ರಗಳಲ್ಲಿ ನಟಿಸುತ್ತಾ ನಾಯಕನಾಗಿ ಬೆಳೆದ ಯಶ್​ ಈಗ ಒಂದು ಪ್ರಾಜೆಕ್ಟ್​ಗೆ 15 ಕೋಟಿ ರೂ.ಸಂಭಾವನೆ ಪಡೆಯುತ್ತಾರಂತೆ. ಅಂದರೆ, ಪ್ರಯತ್ನ ಶ್ರಮದ ಜತೆಗೆ ಅದೃಷ್ಟ ಅನ್ನೋದು ಇದ್ದರೆ ಈ ಪ್ರಪಂದಲ್ಲಿ ಎಷ್ಟು ಎತ್ತರಕ್ಕೆ ಬೇಕಾದರೂ ಏರಬಹುದು ಎಂಬುದಕ್ಕೆ ಇವರು ತಾಜಾ ನಿದರ್ಶವಾಗಿ ಕಾಣುತ್ತಾರೆ.

ಇನ್ನು ಯಶ್ ಅಭಿನಯದ ಕೆಜಿಎಫ್​ 2 ಸಿನಿಮಾ ಈಗ ಕನ್ನಡ ಸೇರಿ ಇತರೆ ಭಾಷೆಗಳ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ. ಸದ್ಯ ಟೀಸರ್​ ರಿಲೀಸ್​ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ಈ ಚಿತ್ರದ ರಿಲೀಸ್​ ದಿನಾಂಕ ಪ್ರಕಟವಾಗಬೇಕಿದೆಯಷ್ಟೆ.

ತನ್ನ ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಸುಖಗಳ ಜತೆಗೆ ಇಂದು ಸಮಾಜದಲ್ಲಿ ಜನರಿಂದ ಪಡೆದಿರುವ ಹೆಸರನ್ನು ಉಳಿಸಿಕೊಂಡು ಹೋಗುವ ಚಾಲೆಂಜ್‌ ಕೂಡ ಯಶ್‌ ಅವರಿಗೆ ನಿರಂತರವಾಗಿ ಇದ್ದೆ ಇರುತ್ತದೆ. ಅದೇನೆ ಇರಲಿ ಅವರಿಗೆ ಇಂದು ಜನ್ಮದಿನ ಅವರ ಹೆಸರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ನಾವು ಹಾರೈಸೋಣ…

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...