- ವಿಜಯಪಥ ಸಮಗ್ರ ಸುದ್ದಿ
ಮೈಸೂರು: ನಮ್ಮ ಪಕ್ಷದಲ್ಲಿದ್ದ ಕೆಲವರಿಗೆ ನಾನು ಮತ್ತೆ ಮುಖ್ಯಮಂತ್ರಿ ಆಗುವುದು ಇಷ್ಟವಿರಲಿಲ್ಲ ಆದ್ದರಿಂದ ನನಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಾಯಿತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಪಕ್ಷಿಯರ ವಿರುದ್ಧವೆ ಆಕ್ರೋಶ ವ್ಯಕ್ತಡಿಸಿದ್ದಾರೆ.
ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಜೆಡಿಎಸ್ ಮತ್ತು ಬಿಜೆಪಿ ನನ್ನನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಂಡಿದ್ದವು. ಜತೆಗೆ ನಮ್ಮ ಪಕ್ಷದವರೇ ನನ್ನ ಸೋಲಿಗೆ ಪಣತೊಟ್ಟಿ ನಿಂತಿದ್ದರು. ಇದರಿಂದ ನನಗೆ ಸೋಲಾಯಿತು ಎಂದರು.
ಪಕ್ಷ ನಮಗೆ ಅನಿವಾರ್ಯ ಆದರೆ ನಾವು ಪಕ್ಷಕ್ಕೆ ಅನಿವಾರ್ಯವಲ್ಲ. ಇನ್ನು ಪಕ್ಷ ತಾಯಿ ಇದ್ದಂತೆ ದ್ರೋಹ ಮಾಡುವವರು ಪಕ್ಷ ಬಿಟ್ಟು ಹೋಗಲಿ ಎಂದು ಹೇಳಿದರು.
ಇನ್ನು ಸೋತ ಬಳಿಕ ನಾನುಕ್ಷೇತ್ರಕ್ಕೆ ಬಂದಿಲ್ಲ ಎಂಬುದು ಸತ್ಯ. ಇನ್ನು ಚಾಮುಂಡೇಶ್ವರಿಯಲ್ಲಿ ಪರ್ಯಾಯ ನಾಯಕರನ್ನು ಕೇಳಿರುವುದು ಒಳ್ಳೆಯ ಬೆಳವಣಿಗೆ. ಕೊನೆ ತನಕ ನಾನೇ ಇರಲು ಸಾಧ್ಯವಿಲ್ಲ. ಯಾರಾದರು ಒಬ್ಬರು ಕ್ಷೇತ್ರಕ್ಕೆ ಬರಬೇಕಲ್ಲವೆ ಎಂದರು.
ಇಬ್ರಾಹಿಂ ಅವರು ಜಾ.ದಳ ಸೇರುವ ಕುರಿತು ಪ್ರಶ್ನೆಗೆ ಉತ್ತರಿಸಿ, ನನ್ನ ಪ್ರಕಾರ ಸಿ.ಎಂ.ಇಬ್ರಾಹಿಂ ಜಾ.ದಳಕ್ಕೆ ಹೋಗುವುದಿಲ್ಲ. ಅವರು ಕಾಂಗ್ರೆಸ್‌ನಿಂದ ಆಯ್ಕೆಯಾದ ಪರಿಷತ್ ಸದಸ್ಯರಾಗಿದ್ದಾರೆ. ಅವರು ಪಕ್ಷ ತ್ಯಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಲಾ-ಕಾಲೇಜು ಆರಂಭ ಕುರಿತು ಪ್ರತಿಕ್ರಿಯಿಸಿ, ಈಗಿನಂತೆ ಕೊರೊನಾ ಕಡಿಮೆ ಆದರೆ ಶಾಲಾ-ಕಾಲೇಜು ಆರಂಭಿಸಲಿ. ಆದರೆ, ಕೊರೊನಾ ಹೆಚ್ಚಾದರೆ ಶಾಲಾ-ಕಾಲೇಜು ತೆರೆಯುವುದು ಬೇಡ. ಕೋವಿಡ್‌ಎರಡನೇ ಅಲೆ ಶುರುವಾಗುವ ಆತಂಕ ಇದೆ. ಅದನ್ನು ನೋಡಿಕೊಂಡು ಸರಿಯಾದ ಕ್ರಮಕೈಗೊಳ್ಳಲಿ ಎಂದು ಸಲಹೆ ನೀಡಿದರು.