ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ಏ.7ರಂದು ಕರೆ ನೀಡಿರುವ ಮುಷ್ಕರಕ್ಕೆ ನೌಕರರೆಲ್ಲರೂ ಒಗ್ಗಟ್ಟಾಗಬೇಕು ಎಂದು ಮಂಗಳೂರು ವಿಭಾಗದ ನೌಕರರೊಬ್ಬರು ವಿಡಿಯೋ ಮಾಡಿ ಅರಿವು ಮೂಡಿಸುತ್ತಿದ್ದಾರೆ.
ಈ ನಡುವೆ ಕಳೆದ 20 ವರ್ಷಗಳಿಂದ ಸಾರಿಗೆ ನೌಕರರನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಂಡಿರುವ, ನೌಕರರ ಪರವಾಗಿದ್ದೇವೆ ಎಂದು ಹೇಳಿಕೊಳ್ಳುವ ಅನಂತ ಸುಬ್ಬರಾವ್ ಮಾಡಿರುವುದಾದರೂ ಏನು. ನೌಕರರ ಜೀವನ ಮಟ್ಟವನ್ನು ಅತ್ಯಂತ ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದ್ದೀರಿ. ನಿಮಗೆ ಸಾರಿಗೆ ನೌಕರರ ಕೂಟದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ನಿಮಗೆ ನೌಕರ ಬಗ್ಗೆ ಈಗಾದರೂ ಕಿಂಚಿತ್ತು ಅವರ ಹಕ್ಕುಗಳನ್ನು ರಕ್ಷಿಸಬೇಕು ಎಂಬುವುದು ಇದ್ದರೆ ಸಾರಿಗೆ ನೌಕರರ ಕೂಟದ ಜತೆ ಕೈ ಜೋಡಿಸಿ. ಇಲ್ಲ ಸುಮ್ಮನಿರಿ ಅದನ್ನು ಬಿಟ್ಟು ನೌಕರರ ದಾರಿ ತಪ್ಪಿಸುವ ಹೇಳಿಕೆ ನೀಡಬೇಡಿ ಎಂದು ಹೇಳಿದ್ದಾರೆ.
ನೀವು ಕಳೆದ 20 ವರ್ಷಗಳಿಂದ ಸಾರಿಗೆ ನೌಕರರೂ ಕೊಟ್ಟ ಹಣದ ಜತೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳ ಜತೆಗೆ ಶಾಮೀಲಾಗಿ ನೌಕರರನ್ನು ಇಲ್ಲಿಯವರೆಗೂ ತುಳಿದು ನೀವು ನಿಮ್ಮ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡಿರುವುದು ಸಾಕು. ಇನ್ನಾದರೂ ಸಾರಿಗೆ ನೌಕರರ ಋಣದಲ್ಲಿರುವ ನೀವು ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಆಗ್ರಹ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಒಂದು ವೇಳೆ ಈ ಹಿಂದಿನ ರೀತಿಯಲ್ಲೇ ಸರ್ಕಾರದ ಪರ ನೌಕರರ ವಿರುದ್ಧ ನಿಂತುಕೊಳ್ಳುವುದಾದರೆ ನಿಮ್ಮನ್ನು ಯಾವುದೇ ಒಂದು ಡಿಪೋಗೂ ಕಾಲಿಡಲು ಬಿಡುವುದಿಲ್ಲ. ಏಕೆಂದರೆ ನಿಮ್ಮ ಭಂಡತನ ನಮಗೆ ಈಗ ಗೊತ್ತಾಗಿದೆ. ನೀವು ಇನ್ನೊಬ್ಬರ ಬಗ್ಗೆ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದೀರಿ ಆ ನಿಟ್ಟಿನಲ್ಲಿ ನೌಕರರನ್ನು ಪಾತಾಳಕ್ಕೆ ತುಳಿದಿದ್ದೀರಿ. ಇನ್ನು ಕೊಳ್ಳೆ ಹೊಡೆಯುವುದಕ್ಕೆ ನಾವು ನಿಮಗೆ ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಾರೆ.
ಇನ್ನು ನಿರ್ವಾಹಕಿಯರು ಕರ್ತವ್ಯಕ್ಕೆ ಬಸ್ ಹತ್ತಿದರೆ ಕರ್ತವ್ಯದಿಂದ ಇಳಿಯುವವರೆಗೂ ಒಂದು ಲೋಟ ನೀರು ಕುಡಿಯುವುದಿಲ್ಲ. ಕಾರಣ ಆಕೆ ಎಲ್ಲಿ ಯೂರಿನ್ ಪಾಸ್ ಮಾಡಬೇಕಾಗುವುದೋ ಎಂಬ ಭಯ. ಅಂದರೆ, ಯೂರಿನ್ ಪಾಸ್ ಮಾಡುವುದಕ್ಕೂ ಸರಿಯಾದ ವ್ಯವಸ್ಥೆ ಇಲ್ಲ. ಆ ನಿರ್ವಾಹಕಿಯರಿಗೆ ದೈಹಿಕ ಬಾಧೆ ನಿವಾರಿಸಿಕೊಳ್ಳಲು ಆಗದಷ್ಟರ ಮಟ್ಟಿಗೆ ಸಂಸ್ಥೆಗಳಲ್ಲಿ ಅವ್ಯವಸ್ಥೆ ಸೃಷ್ಟಿಸಿದ್ದೀರಿ. ಇಂಥ ಪರಿಸ್ಥಿತಿ ನಿಮ್ಮ ಮನೆ ಹೆಣ್ಣು ಮಗಳು ಅನುಭವಿಸಿದ್ದಾಳ ಹೇಳಿ ಸ್ವಾಮಿ?
ಇನ್ನು ನೈಟ್ ಹಾಲ್ಟ್ ಮಾಡುವ ನೌಕರರಿಗೆ ಮಲಗಲು ಸರಿಯಾದ ವ್ಯವಸ್ಥೆ ಇಲ್ಲ. ಅವರು ರಾತ್ರಿ ಪೂರ ಬಸ್ಸಿನಲ್ಲೇ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಚಳಿಯಿಂದ ನಡುಗುತ್ತಲೇ ಯಾರು ಇಲ್ಲದ ಅನಾಥ ರೀತಿ ಮಲಗಿರಬೇಕು. ಈ ನಡುವೆ ಸೊಳ್ಳೆಗಳು ಕಚ್ಚಿದ್ದರಿಂದ ಎಷ್ಟು ನಮ್ಮ ಚಾಲಕ ನಿರ್ವಾಹಕರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೆಲವರು ಅದರಿಂದಲೇ ಮೃತಪಟ್ಟಿದ್ದಾರೆ ಎಂದರೆ ನಿಮಗೆ ಏನು ಅನಿಸುವುದಿಲ್ಲವ ಸ್ವಾಮಿ ಎಂದು ಅನಂತ ಸುಬ್ಬರಾವ್ ಅವರನ್ನು ಪ್ರಶ್ನಿಸಿದ್ದಾರೆ.
ಹೀಗೆ ಇವರು ನೌಕರರಿಗೆ ಮಾಡಿರುವ ಒಳ್ಳೆಯದಕ್ಕಿಂತು ಕೆಟ್ಟದ್ದ ಹೆಚ್ಚಾಗಿದೆ. ಹೀಗಾಗಿ ನಾವು ಇನ್ನು ಮುಂದಾದರೂ ಇಂಥ ಪರಿಸ್ಥಿತಿಯಿಂದ ಹೊರಬರಬೇಕಾದರೆ ಇಂಥ ಸಂಘಟನೆಗಳನ್ನು ಬಿಟ್ಟು ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಚಂದ್ರಶೇಖರ್ ಅವರ ಒಕ್ಕೂಟದೊಂದಿಗೆ ನಾವು ಒಬ್ಬರಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಇದಕ್ಕೆ ಎಲ್ಲರೂ ಬೆಂಬಲ ನೀಡಿ ನಮ್ಮ ನ್ಯಾಯಯುತ ಬೇಡಿಕೆ ಈಡೇರುವರೆಗೂ ಹೋರಾಡೋಣ ಎಂದು ಮನವಿ ಮಾಡಿದ್ದಾರೆ.
Super brother