Vijayapatha – ವಿಜಯಪಥ
Friday, November 1, 2024
NEWSನಮ್ಮರಾಜ್ಯ

ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‌ ಕಾಗೆ ಹಾರಿಸುತ್ತಿದೆ ನೋಡಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾದಿಂದ ಸಂಕಷ್ಟದಲ್ಲಿರುವ ರಾಜ್ಯದ ಜನರಿಗೆ ಘೋಷಿಸಿದ 1,50 ಕೋಟಿ ರೂ. ವಿಶೇಷ ಪ್ಯಾಕೇಜ್ ಮೂರು ನಾಮದೊಂದಿಗೆ ಅಂತ್ಯವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಹೌದು! ಪ್ಯಾಕೇಜ್‌ ಘೋಷಣೆ ಮಾಡಿ 5 ದಿನಗಳು ಕಳೆದರೂ ಅದನ್ನು ಜಾರಿಗೊಳಿಸದೇ ಜನರಿಗೆ ಮತ್ತು ಇಲ್ಲಿಯವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡದೇ ರಾಜ್ಯ ಸರ್ಕಾರ ಜನರನ್ನು ಇನ್ನಷ್ಟು ಸಮಸ್ಯೆಗೆ ದೂಡುತ್ತಿದೆ.

ಜನರಿಗೆ ಸರ್ಕಾರದ ಪ್ಯಾಕೇಜ್ ಅಗತ್ಯವಿರುವುದು, ಲಾಕ್ ಡೌನ್‌ ಅವಧಿಯಲ್ಲಿ. ಆದರೆ ಸರ್ಕಾರ ಪ್ಯಾಕೇಜ್ ಘೋಷಿಸಿ ಐದು ದಿನವಾದರೂ, ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿಲ್ಲ, ಪ್ಯಾಕೇಜ್ ಘೋಷಣೆಯ ಬಳಿಕ ಆ ಪ್ಯಾಕೇಜ್ ಬಗ್ಗೆ ಆಡಳಿತ ಪಕ್ಷ ಏನು ಕೂಡ ಮಾತನಾಡುತ್ತಲೂ ಇಲ್ಲ.

ಬೇರೆ ರಾಜ್ಯಗಳು ಪ್ಯಾಕೇಜ್ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒತ್ತಡಕ್ಕೆ ಸಿಲುಕಿ ಪ್ಯಾಕೇಜ್ ಘೋಷಣೆ ಮಾಡಿದೆ. ಅಂದರೆ ನಿಜವಾಗಿಯೂ ಪ್ಯಾಕೇಜ್ ಘೋಷಣೆ ಮಾಡಲು ಸರ್ಕಾರಕ್ಕೂ ಉತ್ಸಾಹ ಇರಲಿಲ್ಲ, ಅರೆ ಮನಸ್ಸನಲ್ಲಿ ಘೋಷಣೆ ಮಾಡಿದ ಪ್ಯಾಕೇಜ್ ಊಟಕ್ಕಿಲ್ಲದ, ಉಪ್ಪಿನ ಕಾಯಿಯಾಗಿದ್ದು, ಮುಂಗೈಗೆ ಬೆಲ್ಲ ಸವರಿ ನೆಕ್ಕಿಸುವ ಪ್ರಯತ್ನವಾಗಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

ಈ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ 3.04 ಲಕ್ಷ ಮಂದಿಗೆ ನೆರವು ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಪ್ಯಾಕೇಜ್ ಘೋಷಣೆಯಾಗಿ ಐದು ದಿನಗಳಾದರೂ ಅರ್ಜಿ ಸಲ್ಲಿಕೆಗೆ ಅವಕಾಶವನ್ನೇ ನೀಡಿಲ್ಲ. ಈ ನಡುವೆ ಲಾಕ್ ಡೌನ್ ಕೂಡ ಬಿಗಿಗೊಳಿಸುತ್ತಿರುವ ಸರ್ಕಾರ ಜನರ ಕಷ್ಟವನ್ನು ಮಾತ್ರ ಆಲಿಸುತ್ತಿಲ್ಲ.

ಇನ್ನು ಜನರು ರಸ್ತೆಗೆ ಇಳಿಯದಿದ್ದರೆ, ಅರ್ಜಿಯನ್ನೂ ನೀಡುವುದಾದರೂ ಹೇಗೆ? ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೇಳಿದರೆ, ಹಳ್ಳಿಯ ಜನ ಹೇಗೆ ತಾನೆ ಸರ್ಕಾರದ ಸವಲತ್ತು ಪಡೆಯಲು ಸಾಧ್ಯ? ಎನ್ನುವ ಸಾವಿರ ಪ್ರಶ್ನೆಗಳ ನಡುವೆಯೇ, ಕೊರೊನಾ ಪ್ರಕರಣಗಳ ಇಳಿಕೆಯ ಆಧಾರದಲ್ಲಿ ಸರ್ಕಾರ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ ಎಂಬ ಗುಸುಗುಸು ಆರಂಭವಾಗಿದೆ.

ಪ್ಯಾಕೇಜ್ ಘೋಷಣೆಯ ಬಳಿಕ ಎಲ್ಲ ಇಲಾಖೆಗಳು ಕೂಡ ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಸಾಫ್ಟ್ ವೇರ್ ಲಿಂಕ್ ಅಳವಡಿಸಲು ಮುಂದಾಗಿವೆ. ಈ ನಡುವೆ ಜೂನ್ 7ರ ಬಳಿಕ ಲಾಕ್ ಡೌನ್ ಓಪನ್ ಆಗುವ ಸಾಧ್ಯತೆಗಳಿವೆ. ಲಾಕ್ ಡೌನ್ ಓಪನ್ ಆದ ಬಳಿಕ ಜನರು ತಮ್ಮ ದುಡಿಮೆಗೆ ಮರಳುತ್ತಾರೆ.

ಆ ಬಳಿಕ ಸರ್ಕಾರದ ಪ್ಯಾಕೇಜ್ ನ ಹಿಂದೆ ಹೋಗಲು ಯಾರಿಗೂ ಸಮಯ ಕೂಡ ಇರುವುದಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದ ಕೆಲವೇ ಕೆಲವು ಮಂದಿಗೆ ಪರಿಹಾರ ನೀಡಿ, ನಾವು ಕೋವಿಡ್ ಸೋಂಕಿನ ಸಂದರ್ಭದಲ್ಲಿ ಪರಿಹಾರ ನೀಡಿದ್ದೇವೆ ಎಂದು ಪೋಸ್‌ ಕೊಡುವ ಮೂಲಕ ಜನರನ್ನು ಯಾಮಾರಿಸಲು ಮುಂದಾಗುತ್ತಿದೆ ಎಂಬ ಮಾತು ಸಾರ್ವಜನಿಕರವಾಗಿ ಶುರುವಾಗಿದೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ