NEWSನಮ್ಮರಾಜ್ಯರಾಜಕೀಯ

ನಾನು ಉಪೇಂದ್ರ… ಈ ರಾಜ್ಯದ C M ಆಗ್ಬೇಕು… ನನಗೆ ….?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನಾನು ಉಪೇಂದ್ರ… ಈ ರಾಜ್ಯದ ಮುಖ್ಯಮಂತ್ರಿ (C M) ಆಗ್ಬೇಕು…ನಾನು ಚುನಾವಣೇಲಿ ಸ್ಪರ್ದಿಸಿದರೆ ? ನೀವು ನನ್ನನ್ನ ಗೆಲ್ಲಸ್ತೀರಾ ?

ಹೀಗೆ ನಟ ಉಪೇಂದ್ರ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ ಅದರೆ ಅದರ ಅರ್ಥ ನಿಗೆ ತಿಳಿಯೋದು ಸ್ವಲ್ಪ ಕಷ್ಟಾನೇ.

ನೋಡಿ ನಾನು ಸಮಾಜ ಸೇವೆ ಮಾಡ್ತಿದೀನಿ ! ರೈತರಿಂದ ಬೆಳೆ ಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚ್ತಿದೀನಿ,
ಚುನಾವಣೆ ಸಮಯದಲ್ಲಿ ಹೋರಾಟಾನೂ ಮಾಡ್ತೀನಿ, ಆಡಳಿತ ಪಕ್ಷ, ವಿರೋಧ ಪಕ್ಷ ಜನರಿಗೆ ಏನೂ ಮಾಡ್ದೆ ಸಂಪೂರ್ಣ ವಿಫಲ ಆಗಿದೆ ಅಂತ ಮಾಧ್ಯಮದಲ್ಲಿ ಕೂಗಿ ಹೇಳ್ತೀನಿ,
ಇವರನ್ನೆಲ್ಲಾ ಕಿತ್ಹಾಕಿ ನನಗೆ ಒಂದು ಅವಕಾಶ ಕೊಡಿ. ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡ್ತೀನಿ, ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ !
ನನ್ನನ್ನ ಗೆಲ್ಲಸ್ತೀರಾ ????

ನೀವು ನನ್ನನ್ನ ಗೆಲ್ಲಸ್ತೀರೋ ಸೋಲಸ್ತೀರೋ…. ? ಆದ್ರೆ ….. ನಾನು ಎಲೆಕ್ಷನ್‌ಗೆ ನಿಲ್ಲಲ್ಲ.
ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೇ ? ಅಂತ ಕೇಳ್ತೀರಾ ? ಪ್ರಜಾಕೀಯದಿಂದ ದೊಡ್ಡ ಸಮಾಜ ಸೇವೆ ಮಾಡಿ ಹೆಸರು ಮಾಡಿರೋರು ಫೇಮಸ್ ವ್ಯಕ್ತಿಗಳು ಮೇಲೆ ಹೇಳಿದ ಯಾವ ಕ್ವಾಲಿಟೀ ಇರೋ ನಾಯಕರು ನಿಲ್ಲಲ್ಲ, ದೊಡ್ಡ ನಾಯಕರನ್ನ ಕೊಡೋದು ರಾಜಕೀಯ ! ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದಿರೊ ಸಾಮಾನ್ಯರು ಚುನಾವಣೆಗೆ ನಿಲ್ತಾರೆ. ಬರೀ ಪ್ರಜಾಕೀಯ ವಿಚಾರ ತಳ್ಕೊಂಡು ಓಟ್ ಹಾಕಿ ಅವರಿಗೆ ಕೆಲಸ ಕೊಟ್ರೆ ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸ ಪೈಸ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡ್ತಾರೆ.

ಪ್ರಜಾಕೀಯದ ( SOP ) ಕಾರ್ಯವೈಖರಿ ತರ ಕೆಲಸ ಮಾಡ್ಲಿಲ್ಲ , ನಿಮಗೆ ಅವನ/ಅವಳ ಕೆಲಸ ಇಷ್ಟ ಆಗ್ಲಿಲ್ಲ ಅಥವಾ ಹಣ, ಅಧಿಕಾರದ ಆಸೆಗೆ ಬೇರೆ ಪಕ್ಷದ ಜೊತೆ ಜಂಪ್ ಆಗೋಕೆ ಹೋದ್ರೆ…. ನಾನು ಉಪೇಂದ್ರ C M ಆಗಿ ನಿಮ್ ಜೊತೆ ನಿಲ್ತೀನಿ, ನಿಮ್ ಜೊತೆ ಉಗ್ರ ಹೋರಾಟ ಮಾಡಿ, ಅಂತಾ ಭ್ರಷ್ಟ ಪ್ರತಿನಿಧಿ ರಾಜೀನಾಮೆ ಕೊಡೋತರ ಮಾಡ್ತೀನಿ.

ಈ ವ್ಯವಸ್ಥೆ ಸರೀ ಹೋಗೋಕೆ ಎರಡು ಎಲೆಕ್ಷನ್ ಜಾಸ್ತಿ ಆಗ್ಲಿ…. ಜನಕ್ಕೆ ಪ್ರಜಾಪ್ರಭುಗಳಿಗೆ ಅಭ್ಯರ್ಥಿ ಇಷ್ಟ ಆಗ್ದಿದ್ರೆ ಅವನು/ ಅವಳು ಕೆಳಗಿಳೀಬೇಕು ಅಂತಾ ಕಾನೂನು ಬರ್ಬೇಕು. ಅದಕ್ಕೆ ನಿಮ್ ಜೊತೆ ನಾನು ಯಾವಾಗ್ಲೂ ಇರೋ permanent C M ( ಕಾಮನ್ ಮೆನ್ ) ಜನ ಸಾಮಾನ್ಯ … ? ಇಲ್ಲ ಇಲ್ಲ …. ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ. ಸರೀನಾ? ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ