NEWSನಮ್ಮರಾಜ್ಯ

ರಾಜಧಾನಿಯಲ್ಲಿ ಮತ್ತೊಂದು ದುರಂತ: ಕೆಎಂಎಫ್​ನ ಮೂರು ಅಂತಸ್ತಿನ ಕಟ್ಟಡ ಕುಸಿತ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಮೂರು ಅಂತಸ್ತಿತ ಕಟ್ಟಡ ಕುಸಿದಿದ್ದು ಸದ್ಯ ಯಾವುದೇ ಪ್ರಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಇಂದು (ಮಂಗಳವಾರ ಸೆ.28) ಸುಮಾರು 9.3ರಲ್ಲಿ ಡೇರಿ ಸರ್ಕಲ್ ಬಳಿಯ ಕೆಎಂಎಫ್ ಕ್ವಾಟ್ರರ್ಸ್ ಒಳಗಡೆ ಇರುವ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ, ಕೆಎಂಅಫ್ ಕ್ವಾಟ್ರರ್ಸ್‌ನಲ್ಲಿ ಕಟ್ಟಡ ಕುಸಿದ ಬಳಿಯ ಮನೆಯೊಂದರಲ್ಲಿ ಗ್ಯಾಸ್​ ಸಿಲಿಂಡರ್‌ನಿಂದ ಅನಿಲ ಸೋರಿಕೆ  ಆಗಿದೆ. ಹೀಗಾಗಿ ಬೆಸ್ಕಾಂ ಸಿಬ್ಬಂದಿಗೆ ಪವರ್ ಕಟ್ ಮಾಡಲು ಸೂಚನೆ ನೀಡಲಾಗಿದೆ.

ಕುಸಿತಗೊಂಡ ಈ ಕಟ್ಟಡ 50 ವರ್ಷದ ಹಳೆಯದ್ದಾಗಿದೆ. ನಾಳೆ ಕೆಎಂಎಫ್​ನಲ್ಲಿ ಸಿಎಂ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ನಡುವೆಯೇ  ನಿನ್ನೆ ಬಿದ್ದಿದ್ದ ಕಟ್ಟಡದಿಂದ ಅರ್ಧ ಕಿಮೀ ದೂರದಲ್ಲಿಯೇ ಇಂದು (ಸೆ.28) ಮತ್ತೊಂದು ಕಟ್ಟಡ ಕುಸಿತಗೊಂಡಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಕಟ್ಟಡದಲ್ಲಿ 18 ಕುಟುಂಬಗಳ ಸದಸ್ಯರು ವಾಸವಾಗಿದ್ದರು. ಕೆಎಂಎಫ್ ನಲ್ಲಿ ಕೆಲೆಸ ಮಾಡುತ್ತಿದ್ದ ಸಿಬ್ಬಂದಿಗಳಾಗಿದ್ದು ಕಟ್ಟಡ ಕುಸಿಯಲು ಆರಂಭವಾಗುತ್ತಿದ್ದಂತೆ ಮನೆಯಿಂದ ಹೊರ ಓಡಿ ಬಂದಿದ್ದಾರೆ.

ಕಟ್ಟಡ ಕುಸಿಯುವ ಐದು ನಿಮಿಷ ಮುಂಚಿತವಷ್ಟೇ ನಾವು ಹೊರಗೆ ಓಡಿ ಬಂದ್ವಿ. ಇಲ್ಲದಿದ್ದರೆ ನಮ್ಮ ಮೈ ಮೇಲೆ ಕಟ್ಟಡ ಬೀಳುತ್ತಿತ್ತು ಎಂದು ಅಲ್ಲಿನ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಇನ್ನು ಮನೆಯಿಂದ ಓಡಿ ಬರುವಷ್ಟರಲ್ಲಿ ಕಟ್ಟಡ ಕುಸಿಯುತ್ತಿದ್ದರಿಂದ ನಾಲ್ಕು ಜನರಿಗೆ ಗಾಯವಾಗಿದೆ ಅವರಲ್ಲಿ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.  ನಾವು ತಿಂಡಿ ತಿನ್ನುವುದಕ್ಕೆ ರೆಡಿ ಆಗ್ತಾಯಿದ್ವಿ. ಅಷ್ಟರಲ್ಲಿ ಅಮ್ಮ ಹೊರ ಬನ್ನಿ ಅಂತಾ ಕೂಗಿ ಕೊಂಡರು ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.

ಈ ವೇಳೆ ಕಟ್ಟಡದ ಎರಡನೇ ಅಂತಸ್ತಿನಲ್ಲಿ ತಂದೆ, ತಾಯಿ ಮತ್ತು ಮಗು ಸಿಲುಕಿಕೊಂಡಿದ್ದರು. ಮಗುವನು ಉಳಿಸಲು ಎರಡನೇ ಅಂತಸ್ತಿನಿಂದ ಕೆಳಗೆ ಎಸೆಯಲಾಗಿದೆ. ಆ ವೇಳೆ ಕೆಳಗಡೆ ನಿಂತಿದ್ದ ಜನರು ಮಗುವನ್ನು ತಕ್ಷಣ ಹಿಡಿದುಕೊಳ್ಳುವ ಮೂಲಕ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹಳೆಯ ಕಟ್ಟಡ ಎಂದು ಗೊತ್ತಿದ್ದರು ಸಿಬ್ಬಂದಿಗಳಿಗೆ ವಾಸಮಾಡಲು ಬಮೂಲ್ ಅಧಿಕಾರಿಗಳು ಅವಕಾಶ ಕೊಟ್ಟಿದ್ದರು ಎಂಬ ಆರೋಪ ಈಗ ಕೇಳಿ ಬರುತ್ತಿದೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...