CrimeNEWSನಮ್ಮರಾಜ್ಯ

ಭೀಮಾನಗರ ಅತ್ಯಾಚಾರ ಪ್ರಕರಣ: ಆರೋಪಿ ಕ್ಯಾಬ್ ಚಾಲಕ ಸೆರೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಭೀಮಾನಗರ ಅತ್ಯಾಚಾರ ಪ್ರಕರಣದ ಆರೋಪಿ ಕ್ಯಾಬ್ ಚಾಲಕ ದೇವರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅತ್ಯಾಚಾರವೆಸಗಿ ಪರಾರಿಯಾಗುವ ಭರದಲ್ಲಿ ತನ್ನ ಮೊಬೈಲ್ ಬಿಟ್ಟು ಹೋಗಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ.

ಆರೋಪಿಯು ನಿದ್ದೆಯಲ್ಲಿದ್ದ ಯುವತಿ ಜತೆಗೆ ತನ್ನ ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ನಂತರ ಆಕೆಯ ಮನೆ ಮುರುಗೇಶ್ ಪಾಳ್ಯ ಸಮಿಪವೇ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಎಚ್ಚರಗೊಂಡ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಇದರಿಂದ ಕಂಗಾಲಾದ ಆರೋಪಿ ಕಾರಿನಿಂದ ಹೊರಬಂದಿದ್ದಾನೆ. ಅಲ್ಲದೆ ಯುವತಿ ಬಳಿ ಸಾರಿ ಕೇಳಿದ್ದಾನೆ.

ಇತ್ತ ಚಾಲಕನ ಕೃತ್ಯದಿಂದ ಗಾಬರಿಗೊಂಡ ಯುವತಿ, ತಾನು ಕುಳಿತಿದ್ದ ಸೀಟ್ ನಲ್ಲಿದ್ದ ಮೊಬೈಲ್ ಅನ್ನು ಬ್ಯಾಗ್ ನಲ್ಲಿ ಹಾಕಿಕೊಂಡು ಬಟ್ಟೆ ಸರಿಮಾಡುತ್ತಾ ಕಾರಿನಿಂದ ಇಳಿದು ಮನೆಗೆ ಓಡಿದ್ದಾಳೆ. ಯುವತಿ ಮನೆಯತ್ತ ತೆರಳುತ್ತಿದ್ದಂತೆಯೇ ಇತ್ತ ಚಾಲಕ ತನ್ನ ಕಾರಿನೊಂದಿಗೆ ಎಸ್ಕೇಪ್ ಆಗಿದ್ದ.

ಎಸ್ಕೇಪ್ ಅಗಿ ಐದು ನಿಮಿಷಗಳಲ್ಲೇ ತನ್ನ ಮೊಬೈಲ್ ಹುಡುಕಿಕೊಂಡು ಮತ್ತೆ ಘಟನಾ ಸ್ಥಳಕ್ಕೆ ಬಂದು ಎಲ್ಲ ಕಡೆ ಹುಡುಕಾಡಿದ್ದಾನೆ. ಆದರೆ ಆತನಿಗೆ ಎಲ್ಲೂ ಮೊಬೈಲ್ ಸಿಕ್ಕಿರಲಿಲ್ಲ. ಹೀಗಾಗಿ ಅಲ್ಲಿಂದ ವಾಪಸ್ ಆಗಿದ್ದಾನೆ. ಅರೋಪಿ ದೇವರಾಜ್ ಮೊಬೈಲ್, ಸಂತ್ರಸ್ತೆ ಜತೆ ಇದ್ದ ಕಾರಣ ಊಬರ್ ಟ್ರಿಪ್ ಸಹ ಎಂಡ್ ಆಗಿರಲಿಲ್ಲ.

ಮನೆಗೆ ಬಂದ ಬಳಿಕ ಯುವತಿ ಬೆಳಗ್ಗಿನ ಜಾವ 112 ಗೆ ಕರೆಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸರು ಯುವತಿ ಮನೆಗೆ ಹೋಗಿ ಮಾಹಿತಿ ಪಡೆದಿದ್ದಾರೆ. ನಂತರ ಮಹಿಳಾ ಅಧಿಕಾರಿ ಠಾಣೆಗೆ ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. 7 ಗಂಟೆಗೆ ಎಫ್ ಐ ಆರ್ ದಾಖಲು ಮಾಡಲಾಗಿದೆ.

ಅರೋಪಿ ಮೊಬೈಲ್ ಮತ್ತು ಕಾರ್ ನಂಬರ್ ಊಬರ್ ರಿಜಿಸ್ಟರ್ ಅನ್ವಯ ಹುಡುಕಿದ್ದಾರೆ. ಘಟನೆ ಬಳಿಕ ಅವಲಹಳ್ಳಿಯ ತನ್ನ ರೂಮ್ ನಲ್ಲಿದ್ದ ಅರೋಪಿಯನ್ನು 11 ಗಂಟೆ ಸುಮಾರಿಗೆ ಪೊಲೀಸರು ವಶಕ್ಕೆ ಪಡೆದರು.

ಎಸಿಪಿ ಹಲಸೂರು ಕುಮಾರ್‌ಗೆ ಮುಂದಿನ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇಂದು ಆರೋಪಿಯನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡೆಸಲಿದ್ದಾರೆ. ವಿಚಾರಣೆಗೆ ಮತ್ತೆ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ. ಇತ್ತ ಇಬ್ಬರಿಗೂ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ