NEWSನಮ್ಮರಾಜ್ಯರಾಜಕೀಯ

ಮಾಜಿ ಸಚಿವರ ಜಟಾಪಟಿ- ಅಶೋಕ್‌ ನನ್ನ ಮಧ್ಯೆ ವೈಮನಸ್ಸು ಇಲ್ಲ: ವಿ.ಸೋಮಣ್ಣ ಸ್ಪಷ್ಟನೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮಾಜಿ ಸಚಿವರಾದ ವಿ ಸೋಮಣ್ಣ ಮತ್ತು ಆರ್ ಅಶೋಕ್ ಮಧ್ಯೆ ಜಟಾಪಟಿ ಸಂಬಂಧ ಮಾಜಿ ಸಚಿವ ವಿ.ಸೋಮಣ್ಣ, ಏನೂ ಆಗಿಲ್ಲ, ಅಶೋಕ್ ಜೊತೆ ವೈಮನಸ್ಸು ಇಲ್ಲ ಎಂದು ತಿಳಿಸಿದ್ದಾರೆ.

ನಾನು ರಾಜಕೀಯಕ್ಕೆ ಬಂದಾಗ ಅಶೋಕ್ ಇನ್ನೂ ಮಂತ್ರಿ ಆಗಿರಲಿಲ್ಲ. ಕೆಲವೊಂದು ವೇಳೆ ಕೆಲವು ವಿಚಾರ ಹೇಳಬೇಕಾಗುತ್ತದೆ. ಹೇಳಿದೀನಿ ಅಷ್ಟೇ. ಅಶೋಕ್ ಜತೆ ವೈಮನಸ್ಸು ಇಲ್ಲ. ನಾನು ರಾಜಕಾರಣ ಶುರು ಮಾಡಿ ಐವತ್ತು ವರ್ಷ ಆಯ್ತು, ನಾನು ಯಾವುದೇ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಜವಾಬ್ದಾರಿ ಕೊಟ್ಟರೆ ನಿಭಾಯಿಸ್ತೇನೆ. ಇನ್ನು ಮುಖ್ಯವಾಗಿ ಹೇಳಬೇಕಿದೆ ಅದೆಂದರೆ ನಾನು ಮಾತನಾಡಿದ್ದು ಯಾವುದೋ ಕಾಲದಲ್ಲಿ. ಅನೇಕ ಸಲ ನನ್ನದೇ ಆದ ದೃಷ್ಟಿಕೋನದಲ್ಲಿರುತ್ತೇನೆ ಎಂದರು.

ಅಣ್ಣತಮ್ಮ ಕಿತ್ತಾಡೋದು ಸಹಜ. ಸಚಿವ ಸಂಪುಟ ಸಂದರ್ಭದಲ್ಲ ಇದು ಒಂದು ವರ್ಷದ ಹಿಂದೆ ಅಶೋಕ್ ಜತೆ ಫೋನ್‌ನಲ್ಲಿ ಮಾತನಾಡಿದ್ದಾಗಿದೆ. ಈಗ ಮಾತಾಡಿದ್ದಲ್ಲ, ನನ್ನ ಅಶೋಕ್ ಮಧ್ಯೆ ಆಸ್ತಿ ಪಾಸ್ತಿ ಜಗಳ ಇಲ್ಲ. ಅಶೋಕ್ ಜತೆ ಮಾತನಾಡಿದ್ದು ಯಾವಾಗಲೋ ಆಗಿದೆ. ನನ್ನ ಅಶೋಕ್ ಮಧ್ಯೆ ವೈಯಕ್ತಿಕ ದ್ವೇಷ ಇಲ್ಲ ಎಂದು ತಿಳಿಸಿದರು.

ನನ್ನ ಅಶೋಕ್ ಸ್ನೇಹ 35 ವರ್ಷ ಹಳೇಯದಾಗಿದೆ. ಯಾವುದೋ ಸಂದರ್ಭದಲ್ಲಿ ಅಶೋಕ್ ಜೊತೆ ಮಜಾಕ್ಕಾಗಿ ಹೀಗೆ ಮಾತನಾಡಿದ್ದೆ. ಅದನ್ನೇ ನೀವು ನಮ್ಮಿಬ್ಬರ ಮಧ್ಯೆ ಹುಳಿ ಹಿಂಡೋದು ಬೇಡ ಎಂದು ಅಶೋಕ್ ಜತೆ ಫೋನ್ ಕರೆ ವಿಚಾರಕ್ಕೆ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಅಧಿಕಾರ ಕೊಡೋದು ಬಿಡೋದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಬಿಜೆಪಿಗೆ ಬಂದು 12 ವರ್ಷ ಆಗಿದೆ. ನಾನು ದೆಹಲಿಗೆ ಹೋಗಲ್ಲ, ಅದರ ಅಗತ್ಯ ಇಲ್ಲ, ಮಂತ್ರಿಯಾದ ಮೇಲೆ ಒಂದೇ ಸಲ ದೆಹಲಿಗೆ ಹೋಗಿದ್ದು ಎಂದರು.

ಜಗದೀಶ್ ಶೆಟ್ಟರ್ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಶೆಟ್ಟರ್ ರಾಷ್ಟ್ರಕ್ಕೆ ಒಂದು ಸಂದೇಶ ಕೊಟ್ಟಿದ್ದಾರೆ. ನೀವು ಹಿರಿಯರು, ಸಿಎಂ ಆಗಿದ್ದವರು ಸಚಿವರಾಗೋದು ಸರಿಯಲ್ಲ ಎಂದು ಹೇಳಿದ್ದೆ. ಕೆಲವು ವಿಚಾರ ನಾನು ನಿಷ್ಠುರವಾಗಿ ಹೇಳ್ತೀನಿ, ಶೆಟ್ಟರ್ ಇವತ್ತು ಕೈಗೊಂಡ ನಿರ್ಧಾರವನ್ನು ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ಕೈಗೊಳ್ಳಿ ಅಂದಿದ್ದೆ. ಯಡಿಯೂರಪ್ಪ ಮುತ್ಸದ್ಧಿ, ತಮಗಿಂತ ಹಿರಿಯರು ಅಂತ ಶೆಟ್ಟರ್ ಮಂತ್ರಿಯಾದರು.

ಉಳಿದ ಹಿರಿಯರ ವಿಚಾರ ಹೈಕಮಾಂಡ್ ನೋಡ್ಕೊಳ್ಳುತ್ತದೆ. ಹಿರಿಯರೂ ಇರ್ಬೇಕು, ಕಿರಿಯರೂ ಇರ್ಬೇಕು ಬೊಮ್ಮಾಯಿ ನಾನು ಆತ್ಮೀಯರು, ಪಟೇಲರ ಸರ್ಕಾರದಲ್ಲಿ ನಾನು ಮಂತ್ರಿ ಆಗಿದ್ದೆ. ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ ಆಗಿದ್ದರು. ಬೊಮ್ಮಾಯಿಯವರಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಕೇಂದ್ರದಿಂದ ಅನುದಾನ ತರಲು ಸಿಎಂ ಬಿ.ಎಸ್‌.ಬೊಮ್ಮಾಯಿಯಿಂದ ಸಾಧ್ಯವೆ? ಸಿದ್ದರಾಮಯ್ಯ ಪ್ರಶ್ನೆ

Leave a Reply

error: Content is protected !!
LATEST
ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ