ಬೆಂಗಳೂರು: ಸಾರಿಗೆ ನೌಕರರ ಪರವಾಗಿ ರಾಜ್ಯ ಹೈ ಕೋರ್ಟ್ ನಲ್ಲಿ PIL ರಿಟ್‌ಪಿಟಿಷನ್ ನಂ.8012/2021 ಈ ಪ್ರಕರಣದಲ್ಲಿ ಜಂಟಿಯಾಗಿ ವಕಾಲತ್ತು ವಹಿಸಿದ್ದ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಶುಕ್ರವಾರ ಈ ಪ್ರಕರಣ ಸಂಬಂಧ ಎನ್‌ಒಸಿ ನೀಡಿರುವ ಬಗ್ಗೆ ಹೈ ಕೋರ್ಟ್ ಗಮನಕ್ಕೆ ತಂದು ಪ್ರಕರಣದಿಂದ ನಿವೃತ್ತರಾಗುತ್ತಿರುವುದಾಗಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧದ ಪ್ರಕರಣಗಳ ವಕಾಲತ್ತು ವಹಿಸಿದ್ದು ಜತಗೆ ಕೆಲ ಮಾಜಿ ಶಾಸಕರು ಮತ್ತು ಸಚಿವರಿಗೆ ಸಂಬಂಧಿಸಿದ ಪ್ರಕರಣಗಳು ನಮ್ಮ ಕಚೇರಿಗೆ ಹೆಚ್ಚಾಗಿ ಬಂದಿರುವುದದಿಂದ ಈ ಪ್ರಕರಣಗಳಲ್ಲಿ ಸುದೀರ್ಘವಾದ ವಿಚಾರಣೆ ಮುಂದಿನ ವಾರದಲ್ಲಿ ಬರುತ್ತಿರುವುದರಿಂದ ಹೆಚ್ಚಿನ ಸಮಯ ದೆಹಲಿಯಲ್ಲೇ ಕಳೆಯಬೇಕಿದೆ. ಹೀಗಾಗಿ ನೌಕರರ ಪ್ರಕರಣದಿಂದ ಹೊರಬರಬೇಕಾಯಿತು ಎಂದು ಶೀವರಾಜು ತಿಳಿಸಿದ್ದಾರೆ.
ಇನ್ನು ಎರಡುಕಡೆಗಳೂ ಏಕಕಾಲಕ್ಕೆ ಓಡಾಡುವುದು ಸ್ವಲ್ಪ ಕಷ್ಟಸಾಧ್ಯವಾದ್ದರಿಂದ ಸಾರಿಗೆ ನೌಕರರಿಗೆ ಸಂಬಂಧಸಿದ ಈ ಪ್ರಕರಣವನ್ನು ಇನ್ನು ಮುಂದೆ ಹೈ ಕೋರ್ಟ್ ನ ಹಿರಿಯ ವಕೀಲರಾದ ಅಮೃತೇಶ್ ಅವರು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಇನ್ನು PIL ರಿಟ್‌ಪಿಟಿಷನ್ ನಂ.8012/2021ರ ಈ ಪ್ರಕರಣಕ್ಕೂ ವಕೀಲ ಶಿವರಾಜು ಅವರಿಗೂ ಯಾವುದೇ ಸಂಬಂಧವಿರುವುದಿಲ್ಲ. ಹೀಗಾಗಿ ನೌಕರರು ಮುಂದಿನ ಪ್ರಕರಣ ವಿಚಾರಣೆಗೆ ಸಂಬಂಧಿಸಿದ್ದನ್ನು ಸಂಬಂಧಪಟ್ಟ ವಕೀಲರ ಮೂಲಕ ತಿಳಿದುಕೊಳ್ಳಬೇಕ್ಕೆಂದು ಮನವಿ ಮಾಡಿದ್ದಾರೆ.
ಇನ್ನು ಒಂದುವೇಳೆ ಮುಂದಿನ ದಿನಗಳಲ್ಲಿ ಸಾರಿಗೆ ನೌಕರರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತು ವಹಿಸಿಕೊಳ್ಳುವ ಸಂದರ್ಭ ಬಂದರೆ ನೌಕರರ ಪರ ಉಚಿತವಾಗಿ ವಾದಮಂಡಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಉಚಿತ, ತ್ವರಿತ ವೈದ್ಯಕೀಯ ಸೇವೆಗಾಗಿ ಆಮ್ ಆದ್ಮಿ ಹೆಲ್ತ್ ಪಾಯಿಂಟ್ ಲೋಕಾರ್ಪಣೆ: ಎಎಪಿಯಿಂದ ಮಹತ್ವದ ಹೆಜ್ಜೆ