ಬೆಂಗಳೂರು: ರಾಜ್ಯ ಸ್ಥ ಳೀಯ ಸಂಸ್ಥೆ ಗಳಿಂದ ವಿಧಾನ ಪರಿಷತ್ಗೆ ಡಿಸೆಂಬರ್ 10 ರಂದು ನಡೆಯುವ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಇಂದು ಬಿಡುಗಡೆಮಾಡಿದೆ.
ಪಟ್ಟಿಯಲ್ಲಿ ಪ್ರಮುಖವಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಮಗಸೂರಜ್ ರೇವಣ್ಣ ಅವರಿಗೆ ಹಾಸನದಿಂದ ಟಿಕೆಟ್ ನೀಡಿದೆ. ಈಮೂಲಕ ಅಧಿಕೃತವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬದ ಮತ್ತೊಂದು ಕುಡಿ ರಾಜಕೀಯ ಪ್ರವೇಶಿಸಿದಂತಾಗಿದೆ.
ಟಿಕೆಟ್ ತಮಗೇ ಖಾತ್ರಿ ಎಂದು ತಿಳಿದಿದ್ದ ಸೂರಜ್ ರೇವಣ್ಣ ಕಳೆದ ಶನಿವಾರವೇ ನಾಮಪತ್ರ ಸಲ್ಲಿ ಸಿದ್ದರು. ಉಳಿದಂತೆ ಮಂಡ್ಯದಿಂದ ಅಪ್ಪಾಜಿಗೌಡ, ತುಮಕೂರಿನಿಂದ ಅನಿಲ್ ಕುಮಾರ್, ಮೈಸೂರಿನಿಂದ ಸಿ.ಎನ್.ಮಂಜೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.
ಕೋಲಾರದಿಂದ ವಕ್ಕಲೇರಿ ರಾಮು, ಬೆಂಗಳೂರು ಗ್ರಾಮಾಂತರದಿಂದ ಎಚ್.ಎಂ. ರಮೇಶ್ಗೌಡ ಹಾಗೂ ಕೊಡಗಿನಿಂದ ಎಚ್.ಯು. ಇಸಾಕ್ ಖಾನ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ.
ಇನ್ನು ಪರಿಷತ್ ಚುನಾವಣೆಗಾಗಿ ಬಿಜೆಪಿ ಕದತಟ್ಟಿ ನಿರಾಸೆಗೊಳಗಾಗಿದ್ದ ಸಂದೇಶ್ ನಾಗರಾಜ್ ಅವರು ಕಡೆ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷದ ವರಿಷ್ಠರು ಅವರನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ.
ಡಿ.10ರಂದು ರಾಜ್ಯದಲ್ಲಿ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರೂ ಜೆಡಿಎಸ್ ಏಳರಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಈ ಮೊಲದಲು ನಾಲ್ಕರಲ್ಲಿ ಗೆದ್ದಿದ್ದ ಜೆಡಿಎಸ್ ಈ ಬಾರಿ 7 ಸ್ಥಾನಗಳಲ್ಲೂ ಗೆಲ್ಲುವ ಆಶಾಭಾವನೆ ಹೊಂದಿದೆ.