NEWSನಮ್ಮರಾಜ್ಯ

ಬೋರ್ಡ್ ಮೀಟಿಂಗ್‌ನಲ್ಲಿ ರೆಜುಲೇಷನ್ ಪಾಸ್‌, ಅಧ್ಯಕ್ಷರು, ಉಪಾಧ್ಯಕ್ಷರು ಕೂಡ ಸಾರಿಗೆ ನೌಕರರ ಪರ : ನಾಗೇಂದ್ರ

ವಿಜಯಪಥ ಸಮಗ್ರ ಸುದ್ದಿ
  • ಸ್ವಾಭಿಮಾನಿ ಸಾರಿಗೆ ನೌಕರರ ಪಾದಯಾತ್ರೆ ಸ್ವಾಗತಕ್ಕೆ ಸಿದ್ಧವಾದ ಸರ್ವ ಸಂಘಟನೆಗಳು

ಬೋರ್ಡ್ ಮೀಟಿಂಗ್‌ನಲ್ಲಿ ರೆಜುಲೇಷನ್ ಪಾಸಾಗಿದೆ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕೂಡ ಸಾರಿಗೆ ನೌಕರರ ಪರವಾಗಿದ್ದು ಯಾವುದೇ ಶಿಕ್ಷೆಗಳನ್ನು ವಿಧಿಸದೆ ಮತ್ತೆ ಕೆಲಸಕ್ಕೆ ಬರಮಾಡಿಕೊಳ್ಳಬೇಕೆಂದು ನಮ್ಮ ಪರವಾಗಿ ನಿಂತಿದ್ದಾರೆ.

ಆದರೆ, ಸಹಜವಾಗಿಯೇ ನಮ್ಮ ಆಡಳಿತ ಮಂಡಳಿಯ ಅಧಿಕಾರಿ ವರ್ಗ ಇದನ್ನು ತಪ್ಪಿಸಿ ಶಿಕ್ಷೆಯನ್ನು ವಿಧಿಸಬೇಕೆಂಬ ಮನೋಭಾವದಿಂದ ರಾಜ್ಯದ ಮುಖ್ಯಮಂತ್ರಿಗಳ ಹೆಗಲಿಗೆ ಈ ವಿಚಾರವನ್ನು ಅಂತಿಮ ನಿರ್ಣಯಕ್ಕಾಗಿ ತಲುಪಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಪಾದಯಾತ್ರೆಯ ಮೂಲಕ ಸಾರಿಗೆ ನೌಕರರು ಮನವಿ ಮಾಡಿಕೊಳ್ಳುವ ಹಾಗೂ ಸಿಎಂ ಎಂದರೆ ಕಾಮನ್ ಮ್ಯಾನ್ ಎಂದು ದೃಶ್ಯಮಾಧ್ಯಮಗಳಲ್ಲಿ ಸಭೆ-ಸಮಾರಂಭಗಳಲ್ಲಿ ನಮ್ಮ ಮುಖ್ಯಮಂತ್ರಿಗಳು ಮಾತನಾಡುತ್ತಿರುವುದನ್ನು ನಾವೆಲ್ಲರೂ ಕಂಡಿದ್ದೇವೆ. ಹಾಗಾಗಿ ನಾವು ಕೂಡ ಈ ರಾಜ್ಯದ ಕಾಮನ್ ಮ್ಯಾನ್‌ಗಳೆ.

ಹೀಗಾಗಿ ಸಾರಿಗೆ ನೌಕರ ಬಾಂಧವರೇ ಏಪ್ರಿಲ್ ತಿಂಗಳಿನಲ್ಲಿ ನಡೆದ ಸಾರಿಗೆ ಮುಷ್ಕರದ ಅವಧಿಯಲ್ಲಿ ವಜಾ, ಅಮಾನತು ಹಾಗೂ ವರ್ಗಾವಣೆ ಹೀಗೆ ಹಲವು ರೀತಿಯಲ್ಲಿ ಶಿಕ್ಷೆ ನೀಡಿರುವುದನ್ನು ರದ್ದುಪಡಿಸಿ ಅದರಲ್ಲೂ ಮುಖ್ಯವಾಗಿ ವಜಾವಾದ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳುವಂತೆ ಮುಖ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ಕಳೆದ ನ.29ರಿಂದ ಪಾದಯಾತ್ರೆ ನಡೆಯುತ್ತಿದೆ.

ಇಂದಿಗೆ 8ನೇ ದಿನಕ್ಕೆ ಪಾದಯಾತ್ರೆ ಕಾಲಿಟ್ಟಿದ್ದು, ಈ ವೇಳ ಸಾರಿಗೆ ಸಂಸ್ಥೆಯಲ್ಲಿ ವಜಾ ಆಗಿರುವ ನೌಕರರ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂದು ಸಿಎಂ ಬಳಿ ಮನವಿ ಮಾಡಿಕೊಳ್ಳಲು ನಮ್ಮ ಸಹೋದ್ಯೋಗಿಗಳಾದ ದೊಡ್ಡಪ್ಪ ಎಚ್‌. ನರಕಲದಿಣ್ಣಿ, ನಿಂಗಪ್ಪ ಹಾಗೂ ಇನ್ನಿತರರು ಬಳ್ಳಾರಿಯಿಂದ- ವಿಧಾನಸೌಧದ ವರೆಗೆ ಸ್ವಾಭಿಮಾನಿ ಸಾರಿಗೆ ನೌಕರರು ಎಂಬ ಬ್ಯಾನರ್ ನಡಿ ಪಾದಯಾತ್ರೆ ಬರುತ್ತಿದ್ದಾರೆ.

ಹಾಗೆಯೇ ಪಾದಯಾತ್ರೆ ಭಾನುವಾರ ದಾಬಸ್‌ಪೇಟೆ ತಲುಪಿದ್ದು ಸೋಮವಾರ ದಾಬಸ್ ಪೇಟೆಯಿಂದ ಮತ್ತೆ ಮುಂದುವರಿದು ನೆಲಮಂಗಲ ಬಸವಣ್ಣ ದೇವರ ಮಠದಲ್ಲಿ ವಾಸ್ತವ್ಯ ಮಾಡಲಿದೆ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ.

ವಜಾಗೊಂಡಿರುವ ಹಾಗೂ ಇನ್ನಿತರ ಶಿಕ್ಷೆಗೊಳಗಾಗಿರುವ ಎಲ್ಲ ನೌಕರರು ಹಾಗೂ ರಜೆಯಲ್ಲಿ ಇರುವವರು, ಕರ್ತವ್ಯ ಮುಗಿಸಿದವರು ಕೂಡ ಸೋಮವಾರ ಸಂಜೆ 4 ಗಂಟೆಗೆ ನೆಲಮಂಗಲ ಬೈಪಾಸ್ ಹತ್ತಿರ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಳ್ಳಾರಿಯಿಂದ ನೆಲಮಂಗಲದವರಿಗೆ ಪಾದಯಾತ್ರೆಯಲ್ಲಿ ಬಂದು ತಲುಪಲಿರುವ ನಮ್ಮ ಸ್ವಾಭಿಮಾನಿ ಸಾರಿಗೆ ನೌಕರರನ್ನು ಬರಮಾಡಿಕೊಳ್ಳಲು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

ಅದೇರೀತಿ ಸಾಮಾಜಿಕ ಜಾಲತಾಣಗಳಲ್ಲಿ ಯಾವೊಬ್ಬ ಸಾರಿಗೆ ನೌಕರ ಮುಖಂಡರನ್ನು ಖಂಡಿಸಿ ಮಾತನಾಡುವುದನ್ನು ನಿಲ್ಲಿಸಬೇಕೆಂದು ಕೇಳಿಕೊಳ್ಳುತ್ತೇವೆ. ಕಾರಣ ಅವರು ಬಂದರೆ ಆಗ್ತಾ ಇತ್ತು ಇನ್ನೊಬ್ಬರು ಬಂದರೆ ಆಗ್ತಾ ಇತ್ತು ಅಂದುಕೊಳ್ಳುವುದು ತಪ್ಪು. ಸದ್ಯಕ್ಕೆ ಸಾರಿಗೆ ಸಂಸ್ಥೆಯಲ್ಲಿರುವ ಎಲ್ಲ ಸಂಘಟನೆಯ ಮುಖಂಡರು ಈ ಸ್ವಾಭಿಮಾನಿ ಸಾರಿಗೆ ನೌಕರರು ಬರುತ್ತಿರುವ ಪಾದಯಾತ್ರೆಗೆ ಬೆಂಬಲ ಸೂಚಿಸಲು ನಿರ್ಣಯಿಸಿದ್ದಾರೆ.

ಯಾರೋ ಬರಲಿಲ್ಲ ಅವರು ಬಂದಿದ್ದರೆ ಆಗುತ್ತಿತ್ತು ಅಂದುಕೊಂಡು ಯಾರನ್ನು ಕೀಳಾಗಿ ಟೀಕಿಸಬೇಡಿ. ಕಾರಣ ಯಾರೆಲ್ಲಾ ಬಂದರೂ ಸಹ ಅದ್ಭುತವಾದ ಪವಾಡವೇನು ನಡೆಯುವ ಸಾಧ್ಯತೆಗಳು ಇಲ್ಲ.

ಮುಷ್ಕರದ ಅವಧಿಯಲ್ಲಿ ಆಡಳಿತ ಮಂಡಳಿ ತೆಗೆದುಕೊಂಡಿರುವ ನಿರ್ಧಾರದಿಂದ ನಮ್ಮ ಹಲವಾರು ಸಾರಿಗೆ ನೌಕರರ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಕೆಲವರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಾವು ದೊಡ್ಡ ಮನಸ್ಸು ಮಾಡಿ ಕಾಮನ್ ಮ್ಯಾನ್‌ಗಳಾದ ಸಾರಿಗೆ ನೌಕರರನ್ನು ಸಮಸ್ಯೆಯಿಂದ ಮುಕ್ತಿ ಗೊಳಿಸಬೇಕೆಂದು ಮನವರಿಕೆ ಮಾಡಿ ಮನವಿ ನೀಡುವಂತಹ ಕಾರ್ಯಕ್ರಮವಾಗಿದ್ದು ಅತಿಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ನೌಕರರೆಲ್ಲ ಭಾಗವಹಿಸಿ.

ಸೋಮವಾರ ನೆಲಮಂಗಲ ತಲುಪಲಿರುವ ನಮ್ಮ ಸಹೋದ್ಯೋಗಿಗಳನ್ನು ಬರಮಾಡಿಕೊಂಡು ತದನಂತರ ಇಲ್ಲಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ಮೂಲಕ ಎಲ್ಲರೂ ಸೇರಿ ಹೋಗಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇರುವ ಒಂದೇ ಮಾರ್ಗವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಮ್ಮೆಲ್ಲ ರಲ್ಲಿ ಮನವಿ ಮಾಡುತ್ತಾ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ ನೌಕರರು ಸಮವಸ್ತ್ರ ಧರಿಸಿ ಬರಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

l ಎಚ್‌.ಡಿ. ನಾಗೇಂದ್ರ

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...