NEWSನಮ್ಮರಾಜ್ಯರಾಜಕೀಯ

ಕುಮಾರಣ್ಣ ನಾನು ಯಾರು ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ: ಎಚ್‌ಡಿಕೆ ವಿರುದ್ಧ ರಾಕ್​ಲೈನ್ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕುಮಾರಣ್ಣ ನಾನು ಯಾರು ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಅಂಬರೀಷ್ ಕುಟುಂಬದ ಬಗ್ಗೆ ಇತ್ತೀಚೆಗೆ ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿರುವುದರ ವಿರುದ್ಧ ಅಂಬರೀಷ್ ಕುಟುಂಬದ ಆತ್ಯಾಪ್ತ ರಾಕ್​ಲೈನ್ ವೆಂಕಟೇಶ್ ಕಿಡಿಕಿಡಿಯಾಗಿದ್ದಾರೆ.

ಕೆಆರ್​ಎಸ್ ಡ್ಯಾಂ ಮತ್ತು ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಮಂಡ್ಯದ ಸಂಸದೆ ಸುಮಲತಾ ಅಂಬರೀಷ್​ ಮತ್ತು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ನಡುವಣ ಜಗಳ ತಾರಕಕ್ಕೆ ಏರಿರುವಾಗಲೇ ರಾಕ್​ಲೈನ್ ವೆಂಕಟೇಶ್ ರಂಗಪ್ರವೇಶ ಮಾಡಿದ್ದು, ಆಡಿಯೋ ಮತ್ತು ವಿಡಿಯೋ ಬಾಂಬ್‌ ಸಿಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯಕ್ಕೆ ಅಂಬರೀಷ್ ಅವರ ಮೃತ ದೇಹವನ್ನು ಸೇನಾ ಹೆಲಿಕಾಪ್ಟರ್​​ನಲ್ಲಿ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿಯಾಗಿ ನಾನೇ ಸಹಾಯ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾರಿಯಲ್ಲಿ ಹೋಗ್ತಿದ್ದ ದಾಸಪ್ಪ ಸಿಎಂ ಆಗಿದ್ದರೂ ಆ ಕೆಲಸ ಮಾಡ್ತಿದ್ರು ನೀವೆನು ಯಾರು ಮಾಡದ ಕೆಲಸ ಮಾಡಿದ್ದೀರ ಎಂಬ ಅರ್ಥದಲ್ಲಿ ಎಚ್‌ಡಿಕೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಅವರು ಸಿಎಂ ಆಗಿದ್ದಾಗ ಅವರ ಕಚೇರಿಯಲ್ಲಿ ನನ್ನನ್ನು 3 ಗಂಟೆ ಕಾಯಿಸಿದ್ದರು. ನಾವು ಅವರ ಕಚೇರಿಯಲ್ಲೇ ಅವರಿಗಾಗಿ ಮೂರು ಕಾದು ಕುಳಿತಿದ್ದೆ. ನಂತರ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಬಂದ ಮೇಲೆ ನನ್ನ ಜತೆ ಮಾತನಾಡಿದರು ಎಂದು ತಮ್ಮ ಕಾಯಿಸಿದ್ದ ಬಗ್ಗೆ ಕಿಡಿಕಾರಿದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...