NEWSದೇಶ-ವಿದೇಶರಾಜಕೀಯ

ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡನ್ ಮೊದಲ ಮಾತು: ದೇಶವನ್ನುವಿಭಜನೆ ಮಾಡದೆ, ಏಕೀಕರಿಸುವ ಅಧ್ಯಕ್ಷನಾಗುತ್ತೇನೆ

ವಿಜಯಪಥ ಸಮಗ್ರ ಸುದ್ದಿ

ವಾಷಿಂಗ್ಟನ್: ನಾನು ದೇಶವನ್ನು ವಿಭಜನೆ ಮಾಡದೆ, ಏಕೀಕರಿಸುವ ಪ್ರಯತ್ನ ಮಾಡುವ ಅಧ್ಯಕ್ಷನಾಗುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಯಾರು ಕೆಂಪು ಮತ್ತು ನೀಲಿ ರಾಜ್ಯಗಳನ್ನು ನೋಡುವುದಿಲ್ಲ, ಆದರೆ ಅಮೆರಿಕ ಮತ್ತು ಅದರ ಇಡೀ ಜನರ ವಿಶ್ವಾಸವನ್ನು ಗೆಲ್ಲಲು ಹೃದಯದಿಂದ ಕೆಲಸ ಮಾಡುತ್ತೇನೆ ಎಂದು ನೂತನ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ದೇಶವನ್ನು ಉದ್ದೇಶಿಸಿ ನೂತನ ಅಧ್ಯಕ್ಷ ಜೋ ಬಿಡನ್ ಮೊದಲ ಭಾಷಣ ಮಾಡಿದ್ದು, ಇನ್ನು ಮುಂದೆ ಅಮೆರಿಕದಲ್ಲಿ ದೇಶವನ್ನು ವಿಭಜಿಸದೇ, ಒಗ್ಗೂಡಿಸುವ ಅಧ್ಯಕ್ಷರಿರುತ್ತಾರೆ ಎಂದು ತಿಳಿಸಿದ್ದಾರೆ.

ಮತದಾನದ ಮೂಲಕ ಈ ದೇಶದ ಜನರೇ ತಮಗೇನುಬೇಕೋ ಅದರ ಬಗ್ಗೆ ಮಾತನಾಡಿದ್ದಾರೆ. ಅವರು ನಮಗೆ ಸ್ಪಷ್ಟ ಗೆಲುವು, ಮನವೊಪ್ಪಿಸುವ ವಿಜಯವನ್ನು ನೀಡಿದ್ದಾರೆ. ಅಮೆರಿಕ ಇತಿಹಾಸದಲ್ಲೇ ಒಬ್ಬ ಅಧ್ಯಕ್ಷೀಯ ಅಭ್ಯರ್ಥಿಗೆ ದಾಖಲೆ ಪ್ರಮಾಣದ ಮತನೀಡಿದ್ದಾರೆ. ಅವರ ನಂಬಿಕೆಯನ್ನು ನಾನು ಕಳೆದುಕೊಳ್ಳಲಾರೆ ಎಂದರು.

ಇದೇ ವೇಳೆ, ‘ಅಧ್ಯಕ್ಷ ಟ್ರಂಪ್‌ಗೆ ಮತ ಹಾಕಿದವರಿಗೆ ಈ ರಾತ್ರಿ ಆಗಿರುವ ನಿರಾಶೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈಗ ಪರಸ್ಪರ ಅವಕಾಶ ನೀಡೋಣ. ಪರಸ್ಪರ ಗೊಂದಲಗಳನ್ನು ದೂರವಿಡಲು, ಒತ್ತಡವನ್ನು ಕಡಿಮೆ ಮಾಡಲು, ಮತ್ತೆ ಒಬ್ಬರನ್ನೊಬ್ಬರು ಒಗ್ಗೂಡಿ ಕೆಲಸ ಮಾಡೋಣ. ಒಬ್ಬರಿಗೊಬ್ಬರು ಅವಕಾಶ ನೀಡೋಣ. ನಮ್ಮ ವಿರೋಧಿಗಳನ್ನು ಶತ್ರುಗಳಂತೆ ಪರಿಗಣಿಸುವುದನ್ನು ನಿಲ್ಲಿಸಿ. ಅಮೆರಿಕವನ್ನು ಗುಣಪಡಿಸಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟರು.

ನನಗೆ ಮತಹಾಕದವರಿಗೂ ನನಗೆ ಮತ ಹಾಕಿದವರಷ್ಟೇ ಪ್ರಾಮುಖ್ಯತೆಯನ್ನು ನಾನು ನೀಡಿ ಶ್ರಮ ವಹಿಸಿ ಕೆಲಸ ಮಾಡುತ್ತೇನೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ವಿನಮ್ರನಾಗಿದ್ದೇನೆ. ಅಮೆರಿಕದ ಆತ್ಮವನ್ನು ಪುನಃ ಸ್ಥಾಪಿಸಲು, ಈ ರಾಷ್ಟ್ರದ, ಮಧ್ಯಮ ವರ್ಗದ ಬೆನ್ನೆಲುಬನ್ನು ಪುನರ್‌ ನಿರ್ಮಿಸಲು ಮತ್ತು ಅಮೆರಿಕವನ್ನು ಮತ್ತೆ ವಿಶ್ವದಾದ್ಯಂತ ಗೌರವಿ, ಒಂದುಗೂಡಿಸಲು ನಾನು ಈ ಕಚೇರಿಯನ್ನು ಬಳಸಿಕೊಳ್ಳುತ್ತೇನೆ ಎಂದು ಬಿಡನ್ ಖುಷಿಯಿಂದ ಮೊದಲ ಭಾಷಣವನ್ನು ಪೂರ್ಣಗೊಳಿಸಿದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...