ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ತಾಲೂಕಿನ ವಾಟಾಳು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಚನ್ನಾಜಮ್ಮ ಪ್ರಭು, ಉಪಾಧ್ಯಕ್ಷರಾಗಿ ಸೋಮಣ್ಣ ಅವಿರೋಧವಾಗಿ ಆಯ್ಕೆಯಾದರು.
ವಾಟಾಳು ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನೂತನ ಜನಪ್ರತಿನಿಧಿಗಳ ಆಡಳಿತ ಮಂಡಳಿಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಪ.ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚನ್ನಾಜಮ್ಮ ಪ್ರಭು, ಸಾಮಾನ್ಯಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಅವರಿಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಪಂಚಾಯಿತಿಯಲ್ಲಿನ 19 ಸದಸ್ಯರೆಲ್ಲರೂ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಭಾಗವಹಿಸಿ ಅವಿರೋಧ ಆಯ್ಕೆಗೆ ಅನುಮೋದನೆ ನೀಡಿದರು. ಚುನಾವಣೆ ಫಲಿತಾಂಶ ಪ್ರಕಟಣೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಚುನಾವಣಾಧಿಕಾರಿಯಾಗಿ ಕಾವೇರಿ ನೀರಾವರಿ ನಿಗಮದ ಎಇಇ ಸುಹಾಸ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷೆ ಚನ್ನಾಜಮ್ಮ ಪ್ರಭು ಮಾತನಾಡಿ, ಮೊದಲ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಲು ಸದಸ್ಯರು ಹಾಗೂ ಮುಖಂಡರೆಲ್ಲರೂ ಸಹಕಾರ ನೀಡಿರುವುದರಿಂದ ಅಭಿವೃದ್ಧಿಗೆ ಮತ್ತು ಗ್ರಾಮೀಣ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಎಲ್ಲರೊಂದಿಗೆ ದುಡಿಯುತ್ತೇನೆ ಎಂದು ತಿಳಿಸಿದರು.
ಪ್ರಥಮ ದರ್ಜೆ ಗುತ್ತಿಗೆದಾರ ವಾಟಾಳು ರಾಚೇಗೌಡ, ಮೂಗೂರು ಪಿಎಸಿಸಿಎಸ್ ಮಾಜಿ ಅಧ್ಯಕ್ಷ ಎ.ಬಿ.ಮಂಜುನಾಥ್, ಗ್ರಾ.ಪಂ ಸದಸ್ಯರಾದ ಮಂಗಳ, ಶಿವಸ್ವಾಮಿ, ಕೆ.ಬಸವರಾಜು, ಮಹದೇವಮ್ಮ, ಎಂ.ಮಹದೇವಪ್ಪ, ಹೆಚ್.ಪಿ.ಪುಟ್ಟಬುದ್ಧಿ, ಪೂರ್ಣಿಮಾ, ಲೋಕಮಣಿ, ಮಮತಾ, ಬಾಲು, ಶೋಭ, ಮಲ್ಲಾಜಮ್ಮ, ಶಿವಮ್ಮ, ಪುರುಷೋತ್ತಮ್, ಆಶಾ, ಕವಿತಾ, ಆರ್.ಬಸವರಾಜು, ಪಿಡಿಓ ಎನ್.ಡಿ.ಸೋಲೋಮಾನ್ ರಾಜ್, ನಿವೃತ್ತ ಪಿಡಿಓ ಮಹದೇವನಾಯಕ, ಮುಖಂಡರಾದ ಮಹೇಶ, ಮಾದೇಶ, ಕುಮಾರ, ಬಸವರಾಜು, ರಮೇಶ, ಪುಟ್ಟಸ್ವಾಮಿ, ಮರಯ್ಯ, ಶಿವಣ್ಣ, ವೆಂಕಟರಮಣನಾಯಕ, ಬಸವರಾಜು, ಲೋಕೇಶ, ಕೃಷ್ಣಮೂರ್ತಿ, ಯಜಮಾನ ಮಹದೇವಯ್ಯ, ನಾಗರಾಜು, ವೀರಭದ್ರಸ್ವಾಮಿ, ಬಸವರಾಜು ಇತರರು ಇದ್ದರು.