NEWSನಮ್ಮಜಿಲ್ಲೆನಮ್ಮರಾಜ್ಯಸಂಸ್ಕೃತಿ

ಷಣ್ಮುಖ ಶಿವಯೋಗಿಗಳ ಜನ್ಮ ದಿನದ ಪ್ರಯುಕ್ತ 321 ಮಂದಿಗೆ ಲಿಂಗ ದೀಕ್ಷೆ

ಸಂಚಾರಿ ಯೋಗಿಗಳಾದ ಶ್ರೀ ನಿರಂಜನ ಸ್ವಾಮೀಜಿ ನೇತೃತ್ವ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ವಚನಕಾರ ಚರಚಕ್ರವರ್ತಿ ಶ್ರೀ ಷಣ್ಮುಖ ಶಿವಯೋಗಿಗಳ ಜನ್ಮ ದಿನ ಮತ್ತು ಮಹಾ ಶಿವರಾತ್ರಿ ಪ್ರಯುಕ್ತ ಇಂದು ಪಟ್ಟಣದ ಶ್ರೀ ಷಣ್ಮುಖ ಶಿವಯೋಗಿಗಳ ಮಠದಲ್ಲಿ ಸಂಚಾರಿ ಯೋಗಿಗಳಾದ ಶ್ರೀ ನಿರಂಜನ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ಲಿಂಗ ದೀಕ್ಷೆ ಮತ್ತು ಸಾಮೂಹಿಕ ಲಿಂಗ ಪೂಜೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಜಾಗತಿಕ ಲಿಂಗಾಯತ ಮಹಾಸಭೆ, ನೀಲಮ್ಮನ ಬಳಗ ಹಾಗೂ ಬಸವ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಟ್ಟು ಮೂರು ನೂರಾ ಇಪ್ಪತ್ತೊಂದು ಜನರಿಗೆ ಲಿಂಗ ದೀಕ್ಷೆಯನ್ನು ಕೊಡಲಾಯಿತು ಮೊದಲಿಗೆ ಶ್ರೀ ಷಣ್ಮುಖ ಶಿವಯೋಗಿಗಳ ಭಾವಚಿತ್ರಕ್ಕೇ ಸಾಮೂಹಿಕವಾಗಿ ಪೂಜೆ ಸಲ್ಲಿಸಿದ ನಂತರ ವಚನ ಗಾಯನವನ್ನು ಮಹಿಳಾ ಸದಸ್ಯರು ಹಾಡುವುದರ ಮೂಲಕ ಚಾಲನೆಯನ್ನು ನೀಡಲಾಯಿತು.

ನಂತರ ಪೂಜ್ಯರು ಭಕ್ತರನ್ನುವುದ್ದೇಶಿಸಿ ಮಾತನಾಡಿ ಷಣ್ಮುಖ ಶಿವಯೋಗಿಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ. ಹೀಗೆಯೇ ಪ್ರತಿ ವರ್ಷವೂ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಿ ಎಂದು ಕರೆ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಅಧ್ಯಕ್ಷ ಪ್ರಭುಲಿಂಗ ಮಹಾಗಾವಕರ, ಬಸವರಾಜ ಡೋನೂರ ತಾಲೂಕು ಅಧ್ಯಕ್ಷ ಸಂಗಣಗೌಡ ಪಾಟೀಲ ಗುಳ್ಯಾಳ, ಷಣ್ಮುಖಪ್ಪ ಹಿರೇಗೌಡ, ವಿಶ್ವನಾಥ ರಾಜೋಳ್ಳಿ, ನಿಂಗಣ್ಣ ಹಳಮನಿ, ಭಗವಂತರಾಯ ಶಿವಣ್ಣವರ, ಶಿವಲಿಂಗಪ್ಪಗೌಡ ಹಂಗರಗಿ, ಪ್ರಕಾಶ ಪಾಟೀಲ ಕೂಡಿ, ಮಲ್ಲಿಕಾರ್ಜುನ ಬಿರಾದಾರ, ಗುರುಲಿಂಗಯ್ಯ ಸ್ವಾಮಿ, ದೇವಿಂದ್ರಪ್ಪ ಬಾಕಾ, ಮಹಿಳಾ ಘಟಕದ ಗೌರವಾಧ್ಯಕ್ಷೇ ನಾಗಲಾಂಬಿಕೆ ಪಾಟೀಲ.

ಜಾಗತಿಕ ಲಿಂಗಾಯತ ತಾಲೂಕು ಅಧ್ಯಕ್ಷೆ ಕಾವೇರಿ ನೀಲಕಂಠ ಪಾಟೀಲ, ನೀಲಮ್ಮನ ಬಳಗದ ಅಧ್ಯಕ್ಷೆ ಗೀತಾ ರಾಜೋಳ್ಳಿ , ಮಹಾನಂದ ಎಸ್.ಹುಗ್ಗಿ, ಲಕ್ಷೀಗೌಡತಿ ಪೊಲೀಸ ಪಾಟೀಲ, ನಾಗಮ್ಮಗೌಡತಿ ಹಂಗರಗಿ, ಲೀಲಾವತಿ ಅರಳಿ, ಸಾವಿತ್ರಿ ಹಳ್ಳಿ, ಸುಧಾ ಬೆಣ್ಣೂರ, ಪುರಸಭೆ ಸದಸ್ಯೆ ಪ್ರೇಮಾ ವಿಜಯಕುಮಾರ, ಸುವರ್ಣ ಪಾಟೀಲ, ವಿಜಯಲಕ್ಷ್ಮೀ ಚನ್ನುರ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ