NEWSನಮ್ಮಜಿಲ್ಲೆಸಂಸ್ಕೃತಿ

ಜಾನಪದ ಸಾಹಿತ್ಯ ಉಳಿಸಿ ಬೆಳೆಸೋಣ: ಪದ್ಮಶ್ರೀ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ ಕರೆ

ಜೇವರ್ಗಿಯಲ್ಲಿ ಕರ್ನಾಟಕ ಜಾನಪದ ಕಲಾ ಪ್ರದರ್ಶನದ ಸಂಭ್ರಮ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ನಮ್ಮ ಮೂಲ ಜನಪದ ಕಲೆಯನ್ನು ಉಳಿಸೋಣ ಬೆಳೆಸೋಣ, ಜೊತೆಗೆ ಎಚ್.ಎಲ್.ನಾಗೇಗೌಡರ ಕನಸು ನನಸು ಮಾಡೋಣ ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷರಾದ, ಪದ್ಮಶ್ರೀ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ ಹೇಳಿದರು.

ತಾಲೂಕು ಜಾನಪದ ಪರಿಷತ್ತು ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಜಾನಪದ ಕಲಾ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿರುವ ಜನಪದ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಿ ಮುಂದಿನ ಪೀಳಿಗೆಗೆ ಅದರ ಪರಿಚಯ ಕೊಡುವ ಕೆಲಸ ಆಗಬೇಕೆಂದರು.

ಕಲಾವಿದರನ್ನು ಕುರಿತು, ನೀವು ಆಧುನಿಕ ವಾದ್ಯಗಳನ್ನು ಬಳಸಬೇಡಿ ನಮ್ಮ ಪೂರ್ವ ಕಾಲದ ಚರ್ಮದ ವಾದ್ಯದ ಬಳಸುವದರಿಂದ ಕೇಳಲು ಮನಸ್ಸಿಗೆ ಇಂಪಾಗಿರುತ್ತದೆ ಎಂದ ಅವರು, ತಮ್ಮ ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ವಿವರಿಸಿದರು.

ತಾವೂ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿ ಅನೇಕ ರಾಜ್ಯ ಮಟ್ಟದ ಪುರಸ್ಕಾರಗಳನ್ನು ಪಡೆದು ಇಂದು ಕೇಂದ್ರ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪುರಸ್ಕೃತಳಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು.

ಸರಕಾರ ನನಗೆ ಪ್ರಶಸ್ತಿ ನೀಡಿದೆ. ಆದರೆ ನನಗೆ ಇಂದಿಗೂ ಇರಲಿಕ್ಕೆ ಸೂರಿಲ್ಲ ಎಂಬುವ ಪರಿಸ್ಥಿತಿ ನನ್ನದಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಸೊನ್ನದ ಪೂಜ್ಯ ಡಾ.ಶಿವಾನಂದ ಸ್ವಾಮಿಗಳು ವಹಿಸಿದ್ದರು. ಉದ್ಘಾಟನೆಯನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನೆರವೇರಿಸಿದರು. ನೇತೃತ್ವವನ್ನು ತಹಸೀಲ್ದಾರ್‌ ಸಿದರಾಯ ಬೋಸಗಿ ವಹಿಸಿದ್ದರು.

ಅಧ್ಯಕ್ಷರಾಗಿ ರಾಜಶೇಖರ ಸೀರಿ, ಮುಖ್ಯ ಅತಿಥಿಗಳಾಗಿ ವಿಜಯಕುಮಾರ ತೇಗಲತಿಪ್ಪಿ, ಡಿ.ಬಿ.ಪಾಟೀಲ, ಉದ್ಯಮಿಗಳಾದ ಬಸವರಾಜ ಸಾಸಾಬಾಳ,ಬಾಪುಗೌಡ ಬಿರಾಳ. ಶಾಂತಲಿಂಗ ಪಾಟೀಲ, ನಾಗಪ್ಪ ಸಜ್ಜನ, ಶಕುಂತಲಾ ಇದ್ದರು.

ಸೋಮಶೇಖರ ಬಂಡಿ, ಮಹಾಂತ ಸಾಹು, ಹರವಾಳ ಬಸವರಾಜ ತಿಳಗೂಳ, ಗುಂಡು ವಿಶ್ವಕರ್ಮ, ದೇವಿಂದ್ರ ಬಾಕಾ, ಸಂಗೀತಾ ಹಿರೇಮಠ, ಐ.ಎಸ್.ಹಿರೇಮಠ, ಹಂಪನಗೌಡ ಪಾಟೀಲ, ವಿಜಯಕುಮಾರ ಬಿರಾದಾರ, ಗೀತಾ ರಾಜೋಳ್ಳಿ, ಮಹಾನಂದಾ ಹಿರೇಗೌಡ, ರಾಜೇಶ್ವರಿ ಹಿರೇಗೌಡ, ರೇವಣಸಿದ್ದ ಅಕ್ಕಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ತತ್ವಪದ ಗಾಯನ, ಜಾನಪದ ಹಾಡುಗಳು ಮುಂತಾದ ಕಾರ್ಯಕ್ರಮ ಜರುಗಿದವು.

ಕಾರ್ಯಕ್ರಮದ ನಿರೂಪಣೆಯನ್ನು ತಾಲೂಕು ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ, ಸೊನ್ನ ಮತ್ತು ತಾಲೂಕು ಪರಿಷತ್ತಿನ ಅಧ್ಯಕ್ಷ ಎಸ್.ಕೆ.ಬಿರಾದಾರ ಸ್ವಾಗತಿಸಿದರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...