ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಬರ್ಟ್ ಸಿನಿಮಾ ಕರ್ನಾಟಕದ 656 ಚಿತ್ರಮಂದಿರಗಳಲ್ಲಿ, ನೂರಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಗಳಲ್ಲಿ. ಆಂಧ್ರಪ್ರದೇಶದಲ್ಲಿ 433 ಥಿಯೇಟರ್ ಗಳಲ್ಲಿ ಮತ್ತು ತೆಲಂಗಾಣದಲ್ಲಿ 407 ಥಿಯೇಟರುಳು ಸೇರಿದಂತೆ 1500ಕ್ಕೂ ಹೆಚ್ಚು ಬೆಳ್ಳಿ ಪರದೆಯ ಮೇಲೆ ಏಕಕಾಲಕ್ಕೆ ರಾರಾಜಿಸುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಜೋಡಿಯಾಗಿ ಆಶಾ ಭಟ್ ಅಭಿನಯಿಸಿದ್ದು, ತರುಣ್ ಸುಧೀರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉಮಾಪತಿ ಶ್ರೀನಿವಾಸ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ ಅರ್ಜುನ್ ಜನ್ಯ ಹಾಡುಗಳು ಈಗಾಗಲೇ ಹಿಟ್ ಆಗಿವೆ.
ಗುರುವಾರ ಬೆಳಗ್ಗೆ 6 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಿದ್ದು ಚಿತ್ರಮಂದಿರದ ಮುಂದೆ ಹೌಸ್ ಫುಲ್ ಬೋರ್ಡ್ ಕಾಣಿಸುತ್ತಿದೆ. ರಾಜ್ಯದ ಎಲ್ಲಾ ಕಡೆ ಚಿತ್ರಮಂದಿರಗಳ ಮುಂದೆ ದರ್ಶನ್ ಅವರ ಕಟೌಟ್‌ಗಳೂ ರಾರಾಜಿಸುತ್ತಿದ್ದು, ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುತ್ತಿದ್ದಾರೆ.
ಮಂಡ್ಯದ ಥಿಯೇಟರ್ ಮುಂದಿನ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು, ಜಾನಪದ ಹಾಡು ಡೋಲು ಕುಣಿತದೊಂದಿಗೆ ಸಂಭ್ರಮಿಸುತ್ತಿದ್ದಾರೆ. ಈನಡುವೆ ಅಭಿಮಾನಿಗಳ ಸಂಭ್ರಮ ಜೋರಾಗಿದ್ದು ಎಲ್ಲೆಡೆ ಕುಣಿದು ಕುಪ್ಪಳಿಸುವ ಮೂಲಕ ತಮ್ಮ ಅಭಿಮಾನವನ್ನು ತೋರುತ್ತಿದ್ದಾರೆ.
ಬೆಂಗಳೂರಿನ ಸಂತೋಷ್ ಥಿಯೇಟರ್ ಮುಂದೆಯು ಅಭಿಮಾನಗಳು ಸಂಭ್ರಮಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ರಾಜ್ಯಾದ್ಯಂತ ರಾಬರ್ಟ್ ಸಿನಿಮಾ ಅಬ್ಬರ ಜೋರಾಗಿದೆ. ಕೊರೊನಾ ಲಾಕ್‌ಡೌನ್‌ನಿಂದ ಸಿನಿಮಾ ಪ್ರಿಯರಿಗೆ ಒಂದು ರೀತಿ ನುಂಗಲಾರದ ತುತ್ತಾಗಿದ್ದ ವಾತಾವರಣದಿಂದ ಈಗ ಹೊರ ಬಂದಿರುವ ಅಭಿಮಾನಿಗಳು ಸ್ವಚ್ಚಂದವಾದ ವಾತಾವಾರಣ ನಿರ್ಮಿಸಿಕೊಂಡಂತೆ ಸಂಭ್ರಮಿಸುತ್ತಿದ್ದಾರೆ.