ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರಿಗೆ ಆರ್ಥಿಕವಾಗಿ ಹೆಚ್ಚಿನ ಅನುಕೂಲವಾಗುವಂತೆ ಸರ್ಕಾರವು ಸರ್ಕಾರಿ ನೌಕರರಿಗೆ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುತ್ತಿರುವ ಮಾದರಿಯಲ್ಲೇ ಮರುಪಾವತಿ ಮಾಡಲು ಅನುಮೋದನೆ ನೀಡಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ತಿಳಿಸಿದ್ದಾರೆ.
ಈ ಸೌಲಭ್ಯವು ಏಪ್ರಿಲ್ 1ರ 2021 ಹಾಗೂ ನಂತರದಲ್ಲಿ ಚಿಕಿತ್ಸೆ ಪಡೆದ ಪ್ರಕರಣಗಳಿಗೆ ಅನ್ವಯವಾಗಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಸರ್ಕಾರ ಮಾನ್ಯತೆ ನೀಡಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳ ಬಿಲ್‌ಗಳನ್ನು ಅವುಗಳ ದರ್ಜೆಗೆ ಅನುಗುಣವಾಗಿ ಅಂದರೆ, ಎನ್ಎಬಿಎಚ್ ದರ್ಜೆಯ ಖಾಸಗಿ ಆಸ್ಪತ್ರೆ ಆಗಿದ್ದಲ್ಲಿ, ಸಿಜಿಎಚ್ಎಸ್ -2014, ಎನ್ಎಬಿಎಚ್ ದರದಲ್ಲಿ ಮತ್ತು ನಾನ್ ಎನ್ಎಬಿಎಚ್ ದರ್ಜೆಯ ಆಸ್ಪತ್ರೆ ಆಗಿದ್ದಲ್ಲಿ ಸಿಜಿಎಚ್ಎಸ್ -2014 ನಾನ್ ಎನ್ಎಬಿಎಚ್ ದರದಲ್ಲಿ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸುವುದು ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರಿ ಹಾಗೂ ಸರ್ಕಾರದಿಂದ ಮಾನ್ಯತೆ ಹೊಂದದೆ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಅಥವಾ ಹೊರ ರಾಜ್ಯದ ಆಸ್ಪತ್ರೆಗಳಲ್ಲಿ ನೌಕರರು ಮತ್ತು ಅವರ ಅವಲಂಬಿತರು ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಪಡೆದಲ್ಲಿ
ಪ್ರಸ್ತುತ ಅನುಸರಿಸುತ್ತಿರುವ ನಿಯಮಗಳನ್ನು ಮತ್ತು ಮರುಪಾವತಿ ಕ್ರಮಗಳನ್ನು ಮುಂದುವರಿಸಲು ಎಂದು ಕಳಸದ ತಿಳಿಸಿದ್ದಾರೆ.