ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಜನಪದ ಕಲಾ ಪ್ರಕಾರಗಳಲ್ಲಿ ಒಂದಾದ ವೀರಗಾಸೆ ಕುಣಿತಕ್ಕೆ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡು ಅದನ್ನು ಬೆಳೆಸಿಕೊಂಡು ಬರುತ್ತಿರುವ ಅಂಬಳೆ ಶಿವಣ್ಣ ಸಾಂಸ್ಕೃತಿಕ ನಗರಿ ಮೈಸೂರಿನ ಹೆಮ್ಮೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಖ್ಯಾತ ವೀರಗಾಸೆ ಕಲಾವಿದ ಅಂಬಳೆ ಶಿವಣ್ಣ ಅವರ ಜೀವನ ಸಾಧನೆ ಕುರಿತು ಲೇಖಕ ಚಲನಚಿತ್ರ ನಿರ್ದೇಶಕ ಸ್ನೇಹಮಯಿ ಕೃಷ್ಣ ತಯಾರಿಸಿರುವ ‘ವೀರಗಾಸೆ ರತ್ನ’ ಸಾಕ್ಷ್ಯಚಿತ್ರದ ಸಿಡಿ ಮತ್ತು’ ವೀರಭದ್ರನ ಪ್ರತಿರೂಪ ಅಂಬಳೆ ಶಿವಣ್ಣ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಜನಪದ ಕಲಾ ಪ್ರಕಾರಗಳಲ್ಲೊಂದಾದ ಗಂಡುಕಲೆ ವೀರಗಾಸೆ ಕಲೆಯನ್ನು ಉಳಿಸಿ-ಬೆಳೆಸಲು ಶ್ರಮಿಸುತ್ತಿರುವ ಅಂಬಳೆ ಶಿವಣ್ಣನವರ ಪ್ರತಿಭೆಯನ್ನು ಉಪಯೋಗಿಸಿಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ಅಕಾಡೆಮಿ ಒಳಗೊಂಡಂತೆ ಒಟ್ಟಾರೆ ನಮ್ಮ ಘನ ಸರ್ಕಾರ ಮುಂದಿನ ಪೀಳಿಗೆಗೆ ಈ ಕಲೆಯನ್ನು ಉಳಿಸಲು ಜಿಲ್ಲಾವಾರು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ ಈ ಗಂಡು ಕಲೆಗೆ ಜೀವ ತುಂಬಬೇಕೆಂದು ಹೇಳಿದ ಅವರು, ಹಾಗೆಯೇ ಅಂಬಳೆ ಶಿವಣ್ಣನವರ ಕಲಾಶಕ್ತಿಯನ್ನು ಬಹುದೊಡ್ಡ ಮಟ್ಟದಲ್ಲಿ ಗುರುತಿಸಿ ಅವರನ್ನು ಘೋಷಿಸಬೇಕೆಂದು ಹೇಳಿದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಅವರು, ಅಂಬಳೆ ಶಿವಣ್ಣ ಅವರನ್ನು ಫಲ ತಾಂಬೂಲ ದೊಡನೆ ಅಭಿನಂದಿಸಿ ಗೌರವಿಸಿ ನಂತರ ಮಾತನಾಡಿದ ಅವರು ನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಜಾನಪದ ಕಲೆಗಳನ್ನು ಉಳಿಸಿಕೊಂಡರೆ ನಾಡನ್ನು ಉಳಿಸಿಕೊಂಡಂತೆ. ಜಾನಪದವೆಂಬುದು ಪ್ರತಿಯೊಂದಕ್ಕೂ ತಾಯಿಬೇರು ಇದ್ದಂತೆ. ಇದನ್ನು ಭದ್ರವಾಗಿ ನಾವು ಉಳಿಸಿಕೊಳ್ಳಬೇಕು. ಭಾರತೀಯತೆ ಪ್ರತಿಪಾದಿಸುವವರು ಈ ನೆಲದ ಜಾನಪದ ಕಲೆಗಳನ್ನು ಬೆಳೆಸಬೇಕಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಹಬ್ಬ ಹರಿದಿನಗಳಲ್ಲಿ ಪ್ರದರ್ಶನವಾಗುವ ಕಲೆಗಳು ಇಂದು ಅವಸಾನ ಹೊಂದುತ್ತಿವೆ. ಸಂಪ್ರಾದಾಯಿಕ ಮತ್ತು ಸಂಸ್ಕೃತಿ ಕಲೆಗಳಿಗೆ ಜನಸಾಮಾನ್ಯರು ಉತ್ತೇಜನ ನೀಡಬೇಕಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಪಾಠ-ಪ್ರವಚನಗಳನ್ನು ಮಾಡುವ ಪ್ರಾಧ್ಯಾಪಕರಿಗೆ ಲಕ್ಷಾಂತರೂ ವೇತನವನ್ನು ನೀಡಲಾಗುತ್ತದೆ.
ಆದರೆ, ಸಂಸ್ಕೃತಿಯ ಮೂಲಬೇರಾಗಿರುವ ಜಾನಪದ ಕಲೆ ಪ್ರಕಾರಗಳನ್ನು ಇಂದಿಗೂ ಹರಡುತ್ತಿರುವ ಕಲಾವಿದರಿಗೂ ಪ್ರೋತ್ಸಾಹ ನೀಡಬೇಕು. ಹೊರ ದೇಶಗಳಲ್ಲಿ ಪ್ರವಾಸಿ ಸ್ಥಳಗಳಲ್ಲಿ ಪ್ರವಾದ್ಯೋಮ ಇಲಾಖೆಯು ಅಲ್ಲಿನ ಸಂಸ್ಕೃತಿ ಬಿಂಬಿಸುವ ಕಾರ್ಯಗಳನ್ನು ಮಾಡಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಉತ್ತೇಜನ ನೀಡುವ ಮೂಲಕ ತಾಯಿ ಬೇರನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಇತಿಹಾಸ ತಜ್ಞ ಪ್ರೊ.ಪಿ. ವಿ.ನಂಜರಾಜ ಅರಸ್, ಸಾಮಾಜಿಕ ಹೋರಾಟಗಾರ, ಲೇಖಕ, ಪತ್ರಕರ್ತ, ಚಲನಚಿತ್ರ ನಿರ್ದೇಶಕ ಸ್ನೇಹಮಯಿ ಕೃಷ್ಣ, ಅವರು ತಯಾರಿಸಿರುವ ಸಿಡಿಗೆ ಛಾಯಾಗ್ರಹಣ ಮತ್ತು ಸಂಕಲನ ಮಾಡಿರುವ ಸಂದೇಶ್ ಆಚಾರ್ಯ, ನಿರ್ಮಾಣ ಮತ್ತು ಹಿನ್ನೆಲೆ ಧ್ವನಿ ನೀಡಿರುವ ಡಿ.ಮಧು, ಲೇಖಕ ಪತ್ರಕರ್ತ ಚಲನಚಿತ್ರ ನಿರ್ದೇಶಕ ಜಿ.ಆರ್ ಸತ್ಯಲಿಂಗರಾಜು ಮುಂತಾದವರು ಇದ್ದರು.
Hwdu namma samskruthi saruva iritiya kalegalanna ulisabeku