ಬೆಂಗಳೂರು: ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿ ಮಾತನಾಡುವಾಗ ಅಂಗವಿಕಲರ ವಿಷಯ ಪ್ರಸ್ತಾಪಿಸಿದ್ದಕ್ಕೆ ಆಮ್ ಆದ್ಮಿ ಪಾರ್ಟಿಯ ರಾಜ್ಯ ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಚಂದ್ರು, “ಫೆಬ್ರವರಿ 1ರಂದು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ನಾನು ಮಾಡಿದ ಭಾಷಣ ಉದ್ದೇಶವು ಜನರು ಉತ್ತಮ ಅಭ್ಯರ್ಥಿಗೆ ಮತ ಹಾಕಬೇಕು ಹಾಗೂ ಈ ಮೂಲಕ ಪ್ರಜಾಪ್ರಭುತ್ವದ ಆಶಯ ಸಾಕಾರಗೊಳ್ಳಬೇಕು ಎಂಬುದಾಗಿತ್ತು.
ಮೂರು ದಶಕಗಳ ಹಿಂದೆ ಶೂಟಿಂಗ್ ಸಮಯದಲ್ಲಿ, ನನ್ನ ಬಲ ರೆಟಿನಗೆ ಬದಲಾಯಿಸಲಾಗದ ಹಾನಿಯನ್ನು ಅನುಭವಿಸಿದೆ. ಅದು ನನ್ನನ್ನು ಬಲಗಣ್ಣಿನಲ್ಲಿ ಕುರುಡನನ್ನಾಗಿ ಮಾಡಿದೆ ಎಂದು ಅನೇಕರಿಗೆ ತಿಳಿದಿಲ್ಲ. ಅಂಗವಿಕಲರ ಕಾಯ್ದೆಯಡಿ ನಾನೇ ವಿಕಲಚೇತನ.
ಹೀಗಾಗಿ ಈ ವಿಷಯದಲ್ಲಿ ನಾನು ಸಮುದಾಯವನ್ನು ಅವಹೇಳನ ಮಾಡುವ ಕಾಮೆಂಟ್‌ಗಳನ್ನು ಮಾಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ, ಯಾರೊಬ್ಬರ ಭಾವನೆಗಳನ್ನು ನೋಯಿಸಿದ್ದರೆ, ನಾನು ವಿಷಾದಿಸುತ್ತೇನೆ ಎಂದು ತಿಳಿಸಿದ್ದಾರೆ.