ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದ ಬಾಪೂಜಿನಗರ ವಾರ್ಡ್ ನಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಬೃಹತ್ ಪಾದಯಾತ್ರೆ ಹಾಗೂ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಪಾದಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜಪ್ರಭುತ್ವದಿಂದ ಸ್ವತಂತ್ರಗೊಂಡು 75 ವರ್ಷಗಳಾದರೂ ಸಹ ನಮ್ಮನ್ನಾಳುತ್ತಿರುವ ಜನಪ್ರತಿನಿಧಿಗಳು ಅದೇ ರಾಜಪ್ರಭುತ್ವವನ್ನು ಉಳಿಸಿಕೊಂಡು ಪ್ರಜಾಪ್ರಭುತ್ವವನ್ನು ದಮನ ಮಾಡುತ್ತಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿ ಎಂದು ಅಸಮಾಧಾನ ವಯ್ಕತಪಡಿಸಿದರು.
ಇನ್ನು ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಆಮ್ ಆದ್ಮಿ ಪಕ್ಷದ ಜನಸಾಮಾನ್ಯನನ್ನು ಗೆಲ್ಲಿಸುವುದೊಂದೇ ನಮ್ಮ ಮುಂದಿರುವ ಏಕೈಕ ಮಾರ್ಗ ಎಂದು ಜನತೆಗೆ ಕರೆ ನೀಡಿದರು.
ಈ ಮೂಲಕ ರಾಜಕೀಯ ಕಲುಷಿತ ತ್ವಚೆಯನ್ನು ಹೋಗಲಾಡಿಸಿ ಜನಸಾಮಾನ್ಯನ ಅಳಲನ್ನು, ನೋವು – ದುಮ್ಮಾನಗಳ ಪರಿಹಾರಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಅಪ್ಪಿಕೊಳ್ಳುವುದು ಈಗ ಇರುವ ಏಕೈಕ ದಾರಿ ಎಂದು ತಿಳಿಸಿದರು.
ಮುಂಬರುವ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಬಹುಮತದಿಂದ ಪಾಲಿಕೆಯ ಗದ್ದುಗೆ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾದಯಾತ್ರೆ ಸ್ಥಳೀಯ ಅಪಾರ ಜನಸ್ತೋಮದೊಂದಿಗೆ ಯಶಸ್ವಿಯಾಯಿತು. ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಡಾ. ರಮೇಶ್ ಬೆಲ್ಲಮಕೊಂಡ, ರಹೀಂಖಾನ್, ಅರ್ಚನಾ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.