ಗುಜರಾತ್: ಗುಜರಾತಿನಲ್ಲಿ 2019ರ ವಿಧಾನಸಭಾ ಚುನಾವಣೆಗೂ ಮುನ್ನ ಸಾರಿಗೆ ನೌಕರರರು ಮುಂದಿಟ್ಟಿದ್ದ ವೇತನ ಆಯೋಗದಂತೆ ವೇತನ ನೀಡಬೇಕು ಎಂಬ ಬೇಡಿಕೆಯನ್ನು ಒಪ್ಪಿ ಅದರಂತೆ ವೇತನ ಬಿಡುಗಡೆ ಮಾಡಿಕೊಂಡು ಬರುತ್ತಿದೆ ಗುಜರಾತ್ ಸರ್ಕಾರ.
ಅದೇ ರೀತಿ ಕರ್ನಾಟಕ ರಾಜ್ಯದಲ್ಲೂ ಏಕೆ ವೇತನ ಆಯೋಗ ಮಾದರಿಯಲ್ಲಿ ವೇತನ ಹೆಚ್ಚಳ ಮಾಡಬಾರದು ಎಂದು ನೌಕರರು ಕೇಳುತ್ತಿದ್ದಾರೆ. ಇನ್ನು ಗುಜರಾತಿನಲ್ಲಿ ಅಲ್ಲಿನ ರಾಜ್ಯ ಸರ್ಕಾರ 7ನೇ ವೇತನ ಆಯೋಗ ಅಳವಡಿಸಿದ್ದರಿಂದ ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮದ (ಜಿಎಸ್‌ಆರ್‌ಟಿಸಿ) ನೌಕರರಿಗೆ ಡಿಎ ಸೇರಿದಂತೆ ಇತರ ಭತ್ಯೆಗಳು, ಮೂಲ ವೇತನ ಹೆಚ್ಚಾಗಿದ್ದು ಈಗ ಬಹುತೇಕ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಂಡು ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಇದರಿಂದ ನಾಲ್ಕು ವರ್ಷಕ್ಕೊಮ್ಮೆ ಆಗುತ್ತಿದ್ದ ಮುಷ್ಕರ ಇತರ ಸಮಸ್ಯೆಯಿಂದ ಗುಜರಾತ್ ಸರ್ಕಾರವೂ ಕೂಡ ಹೊರಬಂದಿದೆ. ಅದೇ ರೀತಿ ಕರ್ನಾಟಕದಲ್ಲೂ ಆಗಬೇಕು ಎಂಬುವುದು ನೌಕರರ ಸಮಾನ ಮನಸ್ಕರ ವೇದಿಕೆ ಮತ್ತು ಇತರ ಸಂಘಟನೆಗಳ ಬೇಡಿಕೆಯಾಗಿದೆ.
ಚಾಲಕರು ಮತ್ತು ಕಂಡಕ್ಟರ್‌ಗಳಿಗೆ ಲಾಭ : ಗುಜರಾತ್ ಸರ್ಕಾರವು ಒಪ್ಪಿಕೊಂಡಿರುವ ಪ್ರಮುಖ ಬೇಡಿಕೆಗಳನ್ನು ಗಮನಿಸಿದರೆ, 2021 ರ ಅಕ್ಟೋಬರ್‌ನಿಂದ ಚಾಲಕರ ಗ್ರೇಡ್ ಪೇ ಅನ್ನು 1,800 ರೂ.ನಿಂದ 1,900 ರೂ.ಗೆ ಮತ್ತು ಕಂಡಕ್ಟರ್‌ಗಳ ಗ್ರೇಡ್ ಪೇ ಅನ್ನು ರೂ.1,650 ರಿಂದ ರೂ.1,800ಗೆ ಹೆಚ್ಚಿಸಲಾಗಿದ್ದು, ಅದರ ಲಾಭವನ್ನು ಎಲ್ಲರೂ ಪಡೆದುಕೊಂಡಿದ್ದಾರೆ.
ಶೇ.11ರಷ್ಟು ಡಿಎ ಹೆಚ್ಚಳಕ್ಕೂ ಕೂಡ ಒಪ್ಪಿಗೆ: ಜುಲೈ 2021 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯನ್ನು (ಡಿಎ) ಶೇ.11 ರಷ್ಟು ಹೆಚ್ಚಿಸಲು ಸರ್ಕಾರವು ಸಮ್ಮತಿಸಿತ್ತು. ಅಲ್ಲದೆ ಫೆಬ್ರವರಿ 2023ರಿಂದ ಹೆಚ್ಚುವರಿ ಶೇ.3ರಷ್ಟನ್ನು ಎಡಿ ಹೆಚ್ಚಿಸಲು ಸರ್ಕಾರವು ಸಮ್ಮತಿಸಿದ್ದು ಅದರಂತೆ ನೌಕರರ ವೇತನ ಹೆಚ್ಚಳವಾಗಿದೆ.
ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಅಂದು ಮುಷ್ಕರ ಮಾಡುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿತು. ಹೀಗಾಗಿ ಗುಜರಾತಿನಲ್ಲಿ ಬಿಜೆಪಿ ಸರ್ಕಾರವೇ ಸಾರಿಗೆ ನೌಕರರನ್ನು ವೇತನ ಆಯೋಗದಂತೆ ವೇತನ ನೀಡುತ್ತಿದೆ. ಇಲ್ಲಿಯೂ ಅಂದರೆ ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರವೇ ಇದೆ. ಹಾಗಾಗಿ ಕೆಎಸ್‌ಆರ್‌ಟಿಸಿಯ 4ನಿಗಮಗಳ ನೌಕರರಿಗೂ ವೇತನ ಆಯೋಗ ನಮಾದರಿಯಲ್ಲಿ ವೇತನ ಕೊಡುವುದಕ್ಕೆ ಹಿಂದೆ ಸರಿಯಬಾರದು ಎಂದು ನೌಕರರ ಸಂಘಟನೆಗಳು ಒತ್ತಾಯಿಸುತ್ತಿವೆ.