NEWSನಮ್ಮಜಿಲ್ಲೆ

ತಿ.ನರಸೀಪುರ: ಬೋನಿಗೆ ಬಿದ್ದ ಮತ್ತೆರಡು ಚಿರತೆಗಳು – ನಿಟ್ಟುಸಿರು ಬಿಟ್ಟ ಜನತೆ

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ತಾಲೂಕಿನ ಸೋಸಲೆ ಹೋಬಳಿಯ ಮುಸುವಿನಕೊಪ್ಪಲಿನಲ್ಲಿ ಇರಿಸಿದ್ದ ಬೋನಿನಲ್ಲಿ ಏಕಕಾಲಕ್ಕೆ ಎರಡು ಚಿರತೆಗಳು ಸೆರೆಯಾಗಿವೆ.

ಇದೇ ಫೆ. 6ರಂದು ಮೈಸೂರು ನಗರದ ಆರ್‌ಬಿಐ ಹಿಂಭಾಗದ ಶ್ಯಾದನಹಳ್ಳಿಯಲ್ಲಿ ಇರಿಸಿದ್ದ ಬೋನಿಗೆ ಸುಮಾರು ಎರಡು- ಮೂರು ವರ್ಷದ ಗಂಡು ಚಿರತೆ ಕೂಡ ಬಿದ್ದಿತ್ತು.

ಇಂದು ಮತ್ತೆ ಜಿಲ್ಲೆಯಲ್ಲಿ ಎರಡು ಚಿರತೆಗಳು ಸೆರೆಯಾಗಿದ್ದು ಜನತೆ ಸ್ವಲ್ಪ ನಿರಾಳರಾದಂತಾಗಿದೆ. ಆದರೆ ಇನ್ನು ಹತ್ತಾರು ಚಿರತೆಗಳು ತಾಲೂಕಿನಲ್ಲಿ ಇವೆ ಎಂದು ಹೇಳಲಾಗುತ್ತಿದ್ದು ಅವುಗಳನ್ನು ಸೆರೆ ಹಿಡಿಯ ಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಬೋನಿನಲ್ಲಿ ಚಿರತೆಗಳು ಸೆರೆಯಾಗಿರುವ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ವಲಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಆಗಮಿಸಿ, ಸೆರೆ ಸಿಕ್ಕ ಚಿರತೆಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.

ಈ ಮೊದಲೇ ತಿಳಿಸಿರುವಂತೆ ಸುಮಾರು ಮೂರು-ನಾಲ್ಕು ತಿಂಗಳಿನಿಂದಲೂ ಜಿಲ್ಲೆಯ ವಿವಿಧೆಡೆ ಚಿರತೆಗಳ ಕಾಟ ಹೆಚ್ಚಾಗಿದ್ದು, ತಿ.ನರಸೀಪುರದ ನರಭಕ್ಷಕ ಚಿರತೆಯನ್ನು ಕಳೆದ ಜನವರಿ 26ರಂದು ಸೆರೆ ಹಿಡಿದಿದ್ದರು. ಆ ವೇಳೆ ಸೆರೆ ಸಿಕ್ಕ ಚಿರತೆಯನ್ನು ಸಾಯಿಸಿಬಿಡಿ ಎಂದು ಅಲ್ಲಿನ ಜನರು ಒತ್ತಾಯಿಸಿದ್ದರು.

ತಾಲೂಕಿನ ಹೊರಳಹಳ್ಳಿ ಗ್ರಾಮದ ಅಂಗಡಿಗೆ ಬಿಸ್ಕತ್‌ ತರಲು ಹೋಗಿದ್ದ 11 ವರ್ಷದ ಬಾಲಕ ಜಯಂತ್‌ನನ್ನು ಸ್ಥಳದಲ್ಲೇ ಕೊಂದು ಹಾಕಿದ್ದ, ನರಹಂತಕ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಅಂದು ಬೆಳಗ್ಗಿನ ಜಾವ ಬಿದ್ದಿತ್ತು. ಅದಾದ ಬಳಿಕ ಇಂದು ಮತ್ತೆರಡು ಚಿರತೆಗಳು ಸೆರೆಯಾಗಿದ್ದು ಜಿಲ್ಲೆಯ ಜನರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

ಆದರೆ, ಚಿರತೆಯ ಮರಿಗಳು ಜಿಲ್ಲೆಯಲ್ಲಿ ಹೆಚ್ಚಾಗಿದ್ದು ಅವುಗಳನ್ನು ಸೆರೆ ಹಿಡಿಯಬೇಕು ಎಂದು ರೈತರು ಒತ್ತಾಯ ಮಾಡಿದ್ದಾರೆ. ತಿ.ನರಸೀಪುರ ಮೈಸೂರು ಜಿಲ್ಲೆಯಲ್ಲೇ ಕಳೆದ ಮೂರು ತಿಂಗಳಿನಿಂದ ಈಚೆಗೆ ಒಬ್ಬ ಯುವಕ,  ಯುವತಿ ಹಾಗೂ ಓರ್ವ ಬಾಲಕ ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಇನ್ನು ಮೈಸೂರು ನಗರದಲ್ಲೂ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಸೆರೆ ಹಿಡಿಯುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...