NEWSನಮ್ಮರಾಜ್ಯರಾಜಕೀಯ

ನಾಳೆ ರಾಜ್ಯದ ಎಲ್ಲಾ ಸಾರಿಗೆ ಬಸ್‌ ಘಟಕಗಳ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್‌ ದಾಖಲು!?

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರನೇ ದಿನವೂ ಮುಂದುವರಿದಿದ್ದು, ಇಂದು ತಟ್ಟೆ ಲೋಟ ಬಡಿಯುವ ಚಳವಳಿ ಮಾಡಿದ್ದಾರೆ. ಈ ವೇಳೆ ಹಲವರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇನ್ನು ನಾಳಿನ (ಏ.13) ರೂಪುರೇಷೆ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ನಾಳೆ ಚಂದ್ರಮಾನ ಯುಗಾದಿಯಂದು ನೌಕರರಿಗೆ ಮಾರ್ಚ್‌ ವೇತನ ಕೊಡದಿರವುದಕ್ಕೆ ತಟ್ಟಿ ಹಿಡಿದು ಭಿಕ್ಷೆ ಬೇಡುವ ಚಳವಳಿ ಮಾಡಲಾಗುವುದು. ಜತೆಗೆ ಮಾರ್ಚ್‌ ತಿಂಗಳ ವೇತನ ಬಿಡುಗಡೆ ಮಾಡದಿರುವುದಕ್ಕೆ ರಾಜ್ಯದ ಎಲ್ಲಾ ಬಸ್‌ ಡಿಪೋಗಳ ಘಟಕ ವ್ಯವಸ್ಥಾಪಕರ ವಿರುದ್ಧ ನೌಕರರು ಎಫ್‌ಐಆರ್‌ ದಾಖಲಿಸಲಿದ್ದಾರೆ ಎಂದು ತಿಳಿಸಿದರು.

ಇನ್ನು ಕಾನೂನು ಪ್ರಕಾರ ಒಬ್ಬ ಪೊಲೀಸ್‌ ವಾಹನ ಓಡಿಸುವ ಚಾಲಕರು, ಹೈ ಕೋರ್ಟ್‌ಗಳ ವಾಹನ ಓಡಿಸುವ ಚಾಲಕರಿಗಿಂತ ಶೇ.32 ರಷ್ಟು ಕಡಿಮೆ ವೇತನ ನೀಡುತ್ತಿದ್ದೀರಿ. ಅವರಂತೆ ನಾವು ವಾಹನಗಳನ್ನು ಚಾಲನೆ ಮಾಡುತ್ತಿಲ್ಲವೆ. ಅವರು ಓಡಿಸುವುದು ಕಾರುಗಳಂತಹ ವಾಹನಗಳು ನಾವು ಓಡಿಸುವುದು ಭಾರಿ ವಾಹನಗಳು, ಅವರಿಗಿಂತ ಹೆಚ್ಚು ಸಮಯ ಕುಳಿತು ಓಡಿಸುತ್ತೇವೆ. ಆದರೂ ನಮಗೆ ಕಡಿವೆ ವೇತನ. ಇದು ಸರಿಯಾದ ಕ್ರಮವಲ್ಲ, ನಮಗೂ ಸರಿಸಮ ವೇತನ ಕೊಡಬೇಕು ಎಂದು ಆಗ್ರಹಿಸಿದರು.

ಮಾಡಿರುವ ಕೆಲಸಕ್ಕೂ ನೀವು ವೇತನವನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದರೆ ನೀವೆ ಕಾನೂನನ್ನು ಉಲ್ಲಂಘಿಸಿದ್ದೀರಿ, ಇನ್ನು ಕೊರೊನಾ ಜಾಗೃತಿ ವಹಿಸಿ ಅಂತರ ಕಾಯ್ದುಕೊಂಡು ಚಳವಳಿ ನಡೆಸುತ್ತಿದ್ದರೆ ನಮ್ಮನ್ನು ನೀವು ಗೊಬ್ಬರಂತೆ ಒಟ್ಟುಹಾಕಿಕೊಂಡು ಎಳೆದುಕೊಂಡು ಹೋಗುತ್ತೀರಿ ಇದು ಕೊರೊನಾ ನಿಯಮದ ವೈಲೇಷನ್‌ ಆಗುವುದಿಲ್ಲ ಎಂದು ಪ್ರಶ್ನಿಸಿದರು.

ಇನ್ನು ಕೆಲ ನೌಕರರು ತಮ್ಮನ್ನು ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಕರೆಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ರೀತಿ ಸರ್ಕಾರ ನಡೆಸಿಕೊಳ್ಳುವುದು ಸರಿಯಲ್ಲ. ನೀವು ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

Leave a Reply

error: Content is protected !!
LATEST
BMTC ಕಂಡಕ್ಟರ್‌ಗೆ ಕಲ್ಲಿನಿಂದ ಹೊಡೆದ ಕಿರಾತಕ: ಆತಂಕದಲ್ಲೇ ಡ್ಯೂಟಿ, ಚಾಲನಾ ಸಿಬ್ಬಂದಿಗಳಿಗಿಲ್ಲ ಜೀವ ರಕ್ಷಣೆ KKRTC ಬಸ್‌ ಪಲ್ಟಿ ಮಹಿಳೆ ಸಾವು- ಒಬ್ಬರ ಸ್ಥಿತಿ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ