CRIMENEWSದೇಶ-ವಿದೇಶ

ವಾಷಿಂಗ್ಟನ್‌: ಭೀಕರ ರಸ್ತೆ ಅಪಘಾತ- ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತ

ವಿಜಯಪಥ ಸಮಗ್ರ ಸುದ್ದಿ

ವಾಷಿಂಗ್ಟನ್‌: ನ್ಯೂಯಾರ್ಕ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಭಾರತೀಯ ದೂತಾವಾಸ (Indian Consulate) ಮಂಗಳವಾರ ತಿಳಿಸಿದೆ.

ಮಾನವ್ ಪಟೇಲ್(20) ಮತ್ತು ಸೌರವ್ ಪ್ರಭಾಕರ್ (23) ಅಪಘಾತದಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಲ್ಯಾಂಕಾಸ್ಟರ್ ಕೌಂಟಿ ಕರೋನರ್ ಕಚೇರಿಯ ಪ್ರಕಾರ, ಮೇ 10 ರಂದು ಪೂರ್ವ ಕೊಕಾಲಿಕೊ ಟೌನ್‌ಶಿಪ್‌ನಲ್ಲಿ ಅಪಘಾತ ಸಂಭವಿಸಿದಾಗ ಪ್ರಭಾಕರ್ ಕಾರು ಚಾಲನೆ ಮಾಡುತ್ತಿದ್ದರು. ಪ್ರಭಾಕರ್ ಮತ್ತು ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮುಂದಿನ ಸೀಟಿನಲ್ಲಿ ಕುಳಿತಿದ್ದ ಮತ್ತೊಬ್ಬ ಪ್ರಯಾಣಿಕ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಾಹನವು ರಸ್ತೆಯಿಂದ ಹೊರಟು ಮರಕ್ಕೆ ಡಿಕ್ಕಿ ಹೊಡೆದು ನಂತರ ಸೇತುವೆಗೆ ಡಿಕ್ಕಿ ಹೊಡೆದಿರುವುದು ಕಂಡುಬಂದಿದೆ.

ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ಭಾರತೀಯ ಈ ಇಬ್ಬರು ವಿದ್ಯಾರ್ಥಿಗಳ ದುರಂತ ಸಾವಿಗೆ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತೀವ್ರ ದುಃಖ ವ್ಯಕ್ತಪಡಿಸಿದೆ.

Megha
the authorMegha

Leave a Reply

error: Content is protected !!
Latest news
ಸಿದ್ದೂಜಿ ನೀವು ಇಲ್ಲಿಗೆ ಬಂದುಬಿಡಿ: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ರೋಚಕ ತಿರುವು! ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ, ನಮ್ಮ ಮೆಟ್ರೋ ಹಳಿ ಮೇಲೆ ಬಿದ್ದ ಮರದ ಕೊಂಬೆ, ಪ್ರಯಾಣಿಕರ ಪರದಾಟ KSRTC ನೌಕರ ಕೇಶವಮೂರ್ತಿ ಹೃದಯಾಘಾತದಿಂದ ನಿಧನ ರೈತರ ನಿರ್ಲಕ್ಷ್ಯ ಮಾಡಿದರೆ ಬೀದಿಗಿಳಿದು ಹೋರಾಟ: ಕೇಂದ್ರ-ರಾಜ್ಯ. ಸರ್ಕಾರಗಳಿಗೆ ಕುರುಬೂರು ಶಾಂತಕುಮಾರ್ ಎಚ್ಚರಿಕೆ BMTC "ವಜ್ರ ವಿಸ್ತಾರ" ಬಸ್‌ಗಳಲ್ಲಿ ಮಕ್ಕಳಿಗೆ ಶೇ.25ರಷ್ಟು ರಿಯಾಯಿತಿ, ಹಿರಿಯ ನಾಗರಿಕರಿಗೆ ರಿಯಾಯಿತಿ ಇಲ್ಲ- ಸಿಟಿಎಂ ... ನಾಳೆ ಕನಿಷ್ಠ ಪಿಂಚಣಿ 7,500 ರೂ. ಮಾಡಲು ಆಗ್ರಹಿಸಿ ಪಿಎಫ್ ಕಚೇರಿ ಮುಂದೆ EPS-95, BMTC-KSRTC ನಿವೃತ್ತ ನೌಕರರ ಪ್ರತ... KSRTC ನೌಕರರದ್ದು ಹಾವು ಸಾಯೊಲ್ಲ ಕೋಲು ಮುರಿಯೊಲ್ಲ ಎಂಬ ಸ್ಥಿತಿ: ಇಂದಿನ ರಾಜೀ ಸಂಧಾನ ಸಭೆ ಮತ್ತೆ ವಿಫಲ ಜೂ.10ಕ್ಕೆ ಮ... 11 ತಿಂಗಳ ವೇತನ ಹಿಂಬಾಕಿಯಲ್ಲಿ ವ್ಯತ್ಯಾಸದ ಅನುಮಾನ ಹಿನ್ನೆಲೆ ಜೂ.1ರಂದು KSRTC ಎಂಡಿ ಭೇಟಿಗೆ ನೌಕರರು ಸಜ್ಜು BPL ಕಾರ್ಡ್‌ದಾರರು ಮಾತ್ರ ಗೃಹಲಕ್ಷ್ಮಿ ಫಲಾನುಭವಿಗಳು ಆದರೆ, ಅರ್ಹತೆ ಮೀರಿದವರು ಎಂದರೆ ಯಾರು? ಸರ್ಕಾರವನ್ನು ಪ್ರಶ್ನಿಸ... ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಈ 2 ಯೋಜನಗೆಳು ಇನ್ನು ಮುಂದೆ ಸಿಗಲ್ಲ!?