NEWSಕೃಷಿನಮ್ಮಜಿಲ್ಲೆ

ವರ್ಷ ಪೂರ್ತಿ ಬೆಳೆ ಬೆಳೆಯುವ ಸಾಮರ್ಥ್ಯ ರೈತರಿಗಿದೆ, ಅದಕ್ಕೆ ಕೌಶಲ್ಯಾಭಿವೃದ್ಧಿಗೆ ತಕ್ಕ ತರಬೇತಿ ಬೇಕು: ಡಾ. ಮಲ್ಲಿಕಾರ್ಜುನ್‌ಗೌಡ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ಪ್ರತಿಯೊಬ್ಬ ರೈತರು ಸಮಗ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದರಿಂದ ವರ್ಷ ಪೂರ್ತಿ ಬೆಳೆ ಬೆಳೆಯುವ ಸಾಮರ್ಥ್ಯವಿರುತ್ತದೆ ಎಂದು ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಡಾ. ಮಲ್ಲಿಕಾರ್ಜುನ್‌ಗೌಡ.ಎ.ಪಿ. ಹೇಳಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್.ಮರಿಗೌಡ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಉದಯೋನ್ಮುಖ ಹಣ್ಣುಗಳ (Avacado, Macadamia Nut ಇತ್ಯಾದಿ) ಪ್ರಾಮುಖ್ಯತೆ ಮತ್ತು ಸಮಗ್ರ ಬೇಸಾಯ ಪದ್ಧತಿ” ಯ ತರಬೇತಿ ಕಾರ್ಯಾಗಾರವನ್ನು ಡಾ.ಎಂ.ಎಚ್.ಮರಿಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ರೈತರ ಕೌಶಲ್ಯಾಭಿವೃದ್ಧಿಗೆ ಕೃಷಿ ಮತ್ತು ತೋಟಗಾರಿಕಾ ತರಬೇತಿಗಳು ಅಗತ್ಯವಾಗಿದೆ. ನಮ್ಮ ರೈತರು ಹೊಸ ತಳಿಗಳ ಆವಿಷ್ಕಾರವನ್ನು ಬೇಡಿಕೆಗೆ ತಕ್ಕಂತೆ ಬೆಳೆ ಬೆಳೆಯಲು ಮುಂದಾಗಬೇಕು. ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತೆಂಗಿನ ಮರ ಹತ್ತಲು ತರಬೇತಿ ನೀಡಿ ತೆಂಗಿನಕಾಯಿ ಕೊಯ್ಲು ಮಾಡಲು ಕೃಷಿ, ತೋಟಗಾರಿಕೆ ಇಲಾಖೆ ಸಹಕಾರ ಮಾಡುತ್ತಿದ್ದು, ಜೇನು ಕೃಷಿ ತರಬೇತಿ ಹಾಗೂ ಅಗತ್ಯವಿರುವ ಪೆಟ್ಟಿಗೆ, ಹೊಗೆ ಯಂತ್ರ ಮುಂತಾದ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.ಉತ್ಪಾದನೆ ಮಾರಾಟ ಮತ್ತು ಶೇಖರಣೆಯ ಕುರಿತು ಮಾಹಿತಿಯನ್ನು ನೀಡಲಾಗುವುದು ಎಂದರು.

ಎರೆಹುಳು ಗೊಬ್ಬರ ಬಳಕೆ ಮತ್ತು ಉತ್ಪಾದನೆ ತರಬೇತಿಗಳು ,ಉತ್ತಮ ಗುಣಮಟ್ಟದ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಹೈನುಗಾರಿಕೆಗೆ ಅವಶ್ಯಕವಿರುವ ಮಹಾರಾಷ್ಟ್ರದ ಬೀಜರಹಿತ ಕಸಿ ವಿಧಾನದ ಮೇವು ತಳಿಯ ನೀಡಲಾಗುತ್ತಿದೆ, ಮಣ್ಣಿನ ಪರೀಕ್ಷೆ ,ನೀರಿನ ಪರೀಕ್ಷೆ ಹಾಗೂ ವಸತಿ ನಿಲಯದ ಲಭ್ಯವಿದ್ದು ಈ ಸೌಲಭ್ಯಗಳನ್ನು ನಮ್ಮ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೈತರಿಗೆ ತಿಳಿಸಿದರು.

ಬೆಂಗಳೂರಿನ ಲಾಲ್‌ಬಾಗ್ ಮತ್ತು ತೋಟಗಾರಿಕಾ ಇಲಾಖೆಯ ನಿವೃತ್ತ ಅಪರ ನಿರ್ದೇಶಕರಾಗಿದ್ದ ಡಾ.ಎಸ್‌.ವಿ.ಹಿತ್ತಲಮನಿ ಮಾತನಾಡಿ, ಡಾ. ಎಂ.ಎಚ್.ಮರಿಗೌಡ ಅವರು ತೋಟಗಾರಿಕಾ ಬೆಳೆಗಳಿಗೆ ಆರ್ಥಿಕ ಚೈತನ್ಯ ತಂದು ಕೊಟ್ಟರು.

ಮುಖ್ಯ ಬೆಳೆಗಳಿಗೆ ಜೊತೆಯಾಗಿ ಪರ್ಯಾಯ ಬೆಳೆಗಳತ್ತ ರೈತರು ಮುಖ ಮಾಡುವ ಹಾಗೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಮತ್ತು ಇವರು “ಭೂಮಿಯ ಮೇಲೆ ಕಾಲನ್ನು ಭದ್ರವಾಗಿ ಊರುವುದೆಂದರೆ ಅದು ರೈತನೊಬ್ಬನೇ “ಎಂದು ಹೇಳುವುದನ್ನು ಶ್ಲಾಘಿಸಿದರು ಹಾಗೂ ರೈತರು ಯಾವುದೇ ಪ್ರದೇಶಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆದು ಆರ್ಥಿಕ ಸುಸ್ಥಿರತೆಯನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಉದಯೋನ್ಮುಖ ಹಣ್ಣುಗಳ ಪ್ರಾಮುಖ್ಯತೆ ಹಾಗೂ ಬೇಡಿಕೆ ಮತ್ತು ಪೂರೈಕೆಯ ಬಗ್ಗೆ ತಿಳಿದು ಸಮಗ್ರ ಬೇಸಾಯ ಪದ್ಧತಿಯೊಂದಿಗೆ ಬೆಳೆ ಬೆಳೆದಲ್ಲಿ ಮಾತ್ರ ಈ ತೋಟಗಾರಿಕಾ ಉದ್ಯಮದಲ್ಲಿ ಸಫಲತೆ ಕಾಣಲು ಸಾಧ್ಯ ಎಂದರಲ್ಲದೆ, ಉದಯೋನ್ಮುಖ ಹಣ್ಣುಗಳಾದಂತಹ

1.ಆವಕಾಡೊ (Butter Fruit) ಬೆಣ್ಣೆ ಹಣ್ಣು ಅತ್ಯಂತ ಬೇಡಿಕೆಯುಳ್ಳ ಹಣ್ಣಾಗಿದೆ, ಗೋವಿಂದ್ ನಂತರ ಈ ಹಣ್ಣು ಹೆಚ್ಚಿನ ಮಹತ್ವವನ್ನು ಪಡೆದಿದ್ದು ಇದರಲ್ಲಿ ಒಳ್ಳೆಯ ಕೊಬ್ಬಿನಂಶವಿದ್ದು, ಪೌಷ್ಟಿಕಾಂಶವುಳ್ಳ ಹಣ್ಣಾಗಿದೆ. ಈ ಹಣ್ಣನ್ನು ರಸ್ತೆ ಬದಿ ಮನೆಯ ಅಂಗಳದಲ್ಲಿ ತೋಟದ ಮುಖ್ಯ ಬೆಳೆಗಳ ಬದಿಯಲ್ಲಿ ಬೆಳೆಯಬಹುದು ಮತ್ತು ಬೆಲೆಬಾಳುವ ಈ ಬೆಳೆಯು ಕಳ್ಳತನವಾಗುವ ಸಾಧ್ಯತೆಗಳಿದ್ದು ಇದನ್ನು ರಕ್ಷಿಸಬೇಕಾಗುತ್ತದೆ.

2.ಡ್ರ್ಯಾಗನ್ ಫ್ರೂಟ್ ಸಕ್ಕರೆಮುಕ್ತ ಲವಣ ಕಬ್ಬಿಣ ಅಂಶಗಳಿಲ್ಲ ರಕ್ತದೊತ್ತಡದ ನಿಯಂತ್ರಿಸುವ ಔಷಧೀಯ ಗುಣವುಳ್ಳ ಹಣ್ಣಾಗಿದ್ದು, ಈ ಬೆಳೆಯನ್ನು ಪ್ರಾರಂಭಿಕ ಹಂತ ಸ್ವಲ್ಪ ವೆಚ್ಚದಾಯಕವಾದರೂ ನಂತರ ದಿನಗಳಲ್ಲಿ ಸುಲಭವಾಗಿ ಫಸಲು ಪಡೆಯುವ ಬೆಳೆಯಾಗಿದೆ ಮತ್ತು ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಹಣ್ಣಾಗಿದೆ.

3.ಮ್ಯಾಕಡೆಮಿಯ ನಟ್( macadamia nut) ಆಸ್ಟ್ರೇಲಿಯಾದ ವಿದೇಶಿ ಹಣ್ಣಾಗಿದ್ದು ಕೆ.ಜಿ.ಗೆ6000 ರೂ. ಬೆಲೆಯುಳ್ಳ ಒಣ ಹಣ್ಣು ರೂಪದಲ್ಲಿದ್ದು, ಬಹು ಬೇಡಿಕೆಯ ಉದಯೋನ್ಮುಖ ಹಣ್ಣಾಗಿದೆ. ಇದು ವರ್ಷಪೂರ್ತಿ ಫಸಲು ನೀಡುವ ಬೆಳೆಯಾಗಿದ್ದು ಸುಲಭ ವ್ಯವಸಾಯ ವಿಧಾನಗಳಿಂದ ಬೆಳೆ ಬೆಳೆಯಬಹುದಾಗಿದೆ , ಈ ಬೆಳೆಯನ್ನು ಒಣ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ.ಮ್ಯಾಕಡೆಮಿಯ ನಟ್‌ನಲ್ಲಿ ಔಷಧೀಯ ಗುಣಗಳನ್ನು ಒಳಗೊಂಡಿದೆ.

4.ಸಿಂಧೂರ್ ಹಲಸಿನ ಹಣ್ಣು(Red Colored Jack fruit) ದಕ್ಷಿಣ ಭಾರತ ಜನ ಇಷ್ಟಪಟ್ಟು ತಿನ್ನುವ ಬೆಳೆಯಾಗಿದೆ ಹಾಗೂ ಈ ಹಣ್ಣನ್ನು ತರಕಾರಿ ರೂಪದಲ್ಲೂ ಸಹ ಬಳಸಲಾಗುತ್ತದೆ ಈ ಸಿಂಧೂರ ಹಲಸಿನ ಹಣ್ಣು ಎರಡು ವರ್ಷ ಪೂರ್ತಿಯಾಗುವ ಮೊದಲೇ ಗಿಡ ಫಸಲು ನೀಡುತ್ತದೆ.

5.ಎನ್.ಎಮ್.ಕೆ.ಗೋಲ್ಡ್ ಸೀತಾಫಲ (NMK Gold Sithapala) ತುಂಬಾ ಬೇಡಿಕೆಯುಳ್ಳ ಬೆಳೆಯಾಗಿದ್ದು ಎಲ್ಲಾ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ ಇದು ರೆಡ್‌ಕಲರ್‌ನ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಉದಯೋನ್ಮುಖ ಹಣ್ಣುಗಳಲ್ಲಿ ಒಂದಾಗಿದೆ ಎಂದು ಮಾಹಿತಿ ನೀಡುತ್ತಾ ಇಡೀ ವರ್ಷ ಫಸಲು ನೀಡುವ ಉದಯೋನ್ಮುಖ ಹಣ್ಣುಗಳ ಪಟ್ಟಿಯಲ್ಲಿ ದೊಡ್ಡ ಗಾತ್ರದ ನಲ್ಲಿಕಾಯಿ (Big Size Amla ).

ರಂಬುತ್ತಾನ್(Rambutan), ಎಗ್ ಮ್ಯಾಗೋ(Egg mango), ಲಾಂಗನ್(Long an), ಥೈಲ್ಯಾಂಡ್ ನ ದುರಿಯನ್(Durian), ಅಫಲ್ ಬಿಯರ್(Apple Bear), ಬೇಜಾರಹಿತ ಸೀಬೆಹಣ್ಣು(Seedless Guava) ಬೀಜ ಮುಕ್ತ ಶಾರದಾ ವಿಶೇಷ ತಳಿಯ ಚಕ್ಕುತ್ತಾ ಹಣ್ಣು(Pummelo) ಸಿಹಿ ಹುಣಸೆ (Sweet tamarind) ಮತ್ತು ಕೆಂಪು ಹುಣಸೆ(Red tamarind), ಕೆಂಪು ಸಪೋಟಾ( Red sapota) ಬಿಳಿ ನೇರಳೆ (white jamun) ಹಾಗೂ ಸಪೋಟಾ ಜಾತಿಯ ಎಗ್ ಫ್ರೂಟ್(Egg fruit) ಬೆಳೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರೈತರಿಗೆ ತಿಳಿಸಿದರು.

ನಮ್ಮ ಪ್ರದೇಶಗಳಲ್ಲಿ ಬೆಳೆಯಲಾಗದ ಬೆಳೆಗಳ ಬಗ್ಗೆಯೂ ಮಾಹಿತಿಯನ್ನು ನೀಡುತ್ತಾ ಸೇಬು, ಕರ್ಜೂರ, ಲಿಚ್ಚಿ, ಕೆಲವು ವಿಶೇಷ ತಳಿಯ ದ್ರಾಕ್ಷಿಗಳು ಹಾಗೂ ಮ್ಯಾಂಡರಿಂಗ್ ಎಂಬ ಹಣ್ಣುಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ ಅಂತಹ ಬೆಳೆಗಳನ್ನು ಬೆಳೆಯಬಾರದು. ನರ್ಸರಿಗಳು ತಮ್ಮ ಹಿತಾಸಕ್ತಿಗೆ ನಮ್ಮ ವಾತಾವರಣದಲ್ಲಿ ಬೆಳೆಯಲಾಗದ ಬೆಳೆಗಳನ್ನು ನಾಟಿ ಮಾಡಿ ಮಾರಾಟ ಮಾಡುತ್ತಾರೆ ಅದನ್ನು ರೈತರಿಗೆ ಬೆಳೆಯುವಂತೆ ಪ್ರೇರೇಪಿಸುತ್ತಾರೆ ಅದನ್ನು ನಂಬದೇ ನಮ್ಮ ಪ್ರದೇಶದ ವಾತಾವರಣಕ್ಕೆ ಪೂರಕವಾಗುವಂತಹ ಬೆಳೆಗಳನ್ನು ಬೆಳೆಯಬೇಕು ಎಂದು ಎಂದು ರೈತರಿಗೆ ಮಾಹಿತಿ ನೀಡಿದರು.

ಇಂತಹ ಉದಯೋನ್ಮುಖ ಬೆಳೆಗಳನ್ನು ಬೆಳೆಯುವ ಬೆಳೆಯುವುದರಿಂದ ಮಾತ್ರ ಮಾದರಿ ರೈತ ಎಂದು ಅನಿಸಿಕೊಳ್ಳುವುದಿಲ್ಲ. ಮಾರಾಟ ಕೌಶಲ್ಯಗಳನ್ನು ಹಾಗೂ ಶೇಖರಣೆಯ ವಿಧಾನಗಳನ್ನು ಅರಿತು ರೈತರು ಬೆಳೆದ ಬೆಳೆಗಳು ವರ್ತಕರು , ಮಂಡಿಯವರಿಗೆ, ದಲ್ಲಾಳಿಗಳಿಗೆ ಒಪ್ಪಿಸಿ ಅವರು ಕೊಟ್ಟಷ್ಟು ಹಣಕ್ಕೆ ತೃಪ್ತಿಪಟ್ಟುಕೊಳ್ಳದೇ ಬದಲಾಗಿ ರೈತರು ಬೆಳೆದ ಬೆಳೆಗಳು ನೇರವಾಗಿ ಗ್ರಾಹಕರ ಕೈ ಸೇರುವಂತಹ ಮಾಡಿದಾಗ ಮಾತ್ರ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು ಎಂದರು.

ಉದಯೋನ್ಮುಖ ಹಣ್ಣುಗಳ ಗಿಡಗಳು ಮತ್ತು ಸಮಗ್ರ ಬೇಸಾಯ ಪದ್ಧತಿಯ ವಿಧಾನಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕಾ ಉಪ ನಿರ್ದೇಶಕರಾದ ಗುಣವಂತ.ಜೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿಕ ಸಮಾಜದ ಅಧ್ಯಕ್ಷರಾದ ರವಿಕುಮಾರ್ ಸೇರಿದಂತೆ ಜಿಲ್ಲಾ ಕೃಷಿಕ ಸಮಾಜದ ಸಮಾಜ ಸದಸ್ಯರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕಿನ ರೈತರು ಭಾಗವಹಿಸಿದ್ದರು.

Leave a Reply

error: Content is protected !!
LATEST
ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ...