ಕ್ರೀಡೆ

ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಕಮ್‍ಬ್ಯಾಕ್ ಸಾಧ್ಯತೆಗಳೇ ಇಲ್ಲ: ವೀರು

ವಿಜಯಪಥ ಸಮಗ್ರ ಸುದ್ದಿ

ಅಹಮದಾಬಾದ್:  ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡುತ್ತಾರೆ ಅಂತ ಅಭಿಮಾನಿ ಹೊಂದಿದ್ದ ನಿರೀಕ್ಷೆ ಫಲಿಸಲು ಸಾಧ್ಯತೆಗಳೇ ಇಲ್ಲ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಅಹಮದಾಬಾದ್‍ನಲ್ಲಿ ಮಾತನಾಡಿದ ಅವರು, ಕೆ.ಎಲ್.ರಾಹುಲ್ ಹಾಗೂ ರಿಷಬ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೆ.ಎಲ್.ರಾಹುಲ್ ಕೂಡ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅವರನ್ನು ತಂಡದಿಂದ ಹೊರಹಾಕುವುದು ಕಷ್ಟ. ಧೋನಿ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ ಎಂದು ತಿಳಿಸಿದರು.

ನಾನು ರಾಜಕೀಯಕ್ಕೆ ಕಾಲಿಡುವುದಿಲ್ಲ. ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಸಂಸದರಾಗಿದ್ದಾರೆ, ಅಷ್ಟು ಸಾಕು ಎಂದು ಸೆಹ್ವಾಗ್ ಮಧ್ಯಮದವರ ಪ್ರಶ್ನೆಯೊದಕ್ಕೆ ಉತ್ತರ ನೀಡದರು.

ಐಪಿಎಲ್‍ನಲ್ಲಿ ಮಿಂಚಿದರೆ, ಉತ್ತಮ ಪ್ರದರ್ಶನ ನೀಡಿದರೆ ಐಸಿಸಿ ಟಿ20 ವಿಶ್ವಕಪ್‍ಗೆ ಧೋನಿ ಮರಳುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಐಪಿಎಲ್ ರದ್ದಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಈ ನಡುವೆ ಮತ್ತೆ ತಂಡಕ್ಕೆ ಮರಳುವರೆ ಎಂಬ ಅಭಿಮಾನಿಗಳ ನಿರೀಕ್ಷೆಗೆ ಸೆಹ್ವಾಗ್‌ ಆ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದಾರೆ.

ಭಾರತ 2007ರಲ್ಲಿ ಚೊಚ್ಚಲ ಟಿ20 ವಿಶ್ವಪಕ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್‍ಗಳನ್ನು ಧೋನಿ ನಾಯಕತ್ವದಲ್ಲಿ ಗೆದ್ದು ಬೀಗಿತ್ತು. ಆದರೆ ಈಗ ಅವರಿಗೆ ಕಮ್‍ಬ್ಯಾಗ್ ಸಾಧ್ಯತೆಗಳೇ ಕಡಿಮೆ ಎಂದು ಸೆಹ್ವಾಗ್ ಹೇಳಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

mgid.com, 613802, DIRECT, d4c29acad76ce94f
mgid.com, 613802, DIRECT, d4c29acad76ce94f

Leave a Reply

error: Content is protected !!