NEWSನಮ್ಮಜಿಲ್ಲೆನಮ್ಮರಾಜ್ಯವಿಡಿಯೋ

ಸಾರಿಗೆ ನೌಕರರ ಉದ್ಧಾರಕ್ಕಲ್ಲ ಇವರ ಸಂಘಗಳ ಅಸ್ತಿತ್ವ ಉಳಿಸಿಕೊಳ್ಳೋಕೆ ಅಷ್ಟೇ ಈ ಹೋರಾಟ : ಕೂಟದ ಅಧ್ಯಕ್ಷ ಚಂದ್ರಶೇಖರ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹರ್ದಾಡೋದು ಚೀರಾಡೋದು ನಾಲ್ಕು ಜನ ಇದ್ದಾಗ ಒಳಗಡೆ ಹೋದ್ರೆ ಹೆಂಗೆ ಬಾಲ ಮುದುರಿಕೊಂಡು ಇರುತ್ತೆ ಅನ್ನೋದು ನನಗೆ ಗೊತ್ತಿದೆ ನಾವು ಸುಮ್ಮನೆ ಏನು ಒಂದು ಮ್ಯಾನರ್ಸ್ ಅಲ್ಲಿ ಮಾತಾಡಬೇಕು ಡಿಸಿಪ್ಲಿನ್ ಆಗಿ ಇರಬೇಕು ಒಬ್ಬ ಸಂಘದ ನಾಯಕರು ಇನ್ನೊಬ್ಬರ ಬಗ್ಗೆ ಮಾತಾಡಬಾರದು ಅಂತ ನಾವು ಪದಾಧಿಕಾರಿಗಳ ಬಗ್ಗೆ ಮಾತಾಡಬಾರದು ಅಂತ ಸುಮ್ನೆ ಇದ್ರೆ ಇದು ಅತಿರೇಕಕ್ಕೆ ಹೋಗಿದೆ ಎಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ವಿರುದ್ಧ ಕೂಟದ ಅಧ್ಯಕ್ಷ ಚಂದ್ರು ಕಿಡಿಕಾರಿದ್ದಾರೆ.

ಇದೇ ರೀತಿ ಗಂಡಸ್ತನ ಮತ್ತೊಂದು ಮಗದೊಂದು ತೋರಿಸೋಕೆ ಹೋಗಿ ಬೆಳಗಾವಿಯಲ್ಲಿ ಅನುಭವಿಸುತ್ತಿದ್ದಾರೆ. ಪ್ರಚೋದನೆ ಮಾಡಿದವರು ಎಲ್ಲಾ ಸೈಡಿಗೆ ಹೊರಟು ಹೋಗ್ಬಿಟ್ರು, ಅಮಾಯಕರು ಹೋಗಿ ಸಿಕ್ಕಾಕೊಂಡು ಒದ್ದಾಡ್ತಾ ಇದ್ದಾರೆ. ಏನು ಒಂಬತ್ತನೇ ತಾರೀಖು ಹಾರಾಡಿದವರು ಚೀರಾಡಿದವರು ನಿನ್ನೆ ಕಾಲು ಕಾಲಿಗೆ ಬೀಳ್ತಾ ಇದ್ರು ಹಂಗೂ ಆಗ್ಲಿಲ್ಲ. ಏನು ದಂಡು ದಾಳಿ ಎಲ್ಲಾ ಹೋಗಿತ್ತು ಬೆಳಗಾಂಗೆ ಏನು ಪ್ರಯೋಜನ ಆಗ್ಲಿಲ್ಲ. ಎಫ್ ಐಆರ್ ಆಗೇ ಆಗೋಯ್ತು ಅನುಭವಿಸುವವರು ಅನುಭವಿಸುತ್ತಾರೆ. ಇವರಿಗೆ ಏನು ನೋಯ್ಬೇಕಾ?

ಏನು ಉಸರವಳ್ಳಿ ಆದರೂ ಪರವಾಗಿಲ್ಲ ಅದಾದರೂ ತನ್ನ ಜೀವ ಉಳಿಸಿಕೊಳ್ಳುವುದಕ್ಕೆ ಮತ್ತೊಂದಕ್ಕೆ ಉಪಯೋಗಿಸಿಕೊಳ್ಳುತ್ತೆ, ಅದಕ್ಕಿಂತ ಮೋಸವಾಗಿ ತನ್ನ ಸ್ವಾರ್ಥಕ್ಕೋಸ್ಕರ ಯಾವಾಗ ಹೆಂಗೆ ಬೇಕಾದರೂ ಉಸರವಳ್ಳಿ ರೀತಿ ಬಣ್ಣಗಳನ್ನು ಬದಲಾಯಿಸಿಬಿಡ್ತಾನೆ.

148/2005 ಅದೆಲ್ಲ ಹೋಯ್ತು ಅಂತ ಇವರ ಬಾಯಲ್ಲೇ ಬಂದುಬಿಡುತ್ತಲ್ಲ. ಇನ್ನೇನು ಮತ್ತೆ ಇದೇ ನಮ್ಮ ನೌಕರರು ಅರ್ಥ ಮಾಡ್ಕೋಬೇಕಾಗಿರೋದು ನಾನು ಇದನ್ನೇ ಬಡ್ಕೊಳ್ತಾ ಇರೋದು. ಇವರ ಹಿಂದೆ ಹೋದ್ರೆ ಇನ್ನು ನಾವು ಪಡ್ಕೊಳೋದಿಲ್ಲ ಈ ಕಳೆದುಕೊಂಡಿರೋದನ್ನು ಕಳೆದುಕೊಂಡಂಗೆ ಜೊತೆಗೆ ಮುಂದಕ್ಕೆ ಪಡೆದುಕೊಳ್ಳುವುದನ್ನು ಹಾಳು ಮಾಡಿಕೊಂಡು ಬಿಡ್ತೀವಿ.

ನಾವು ಸರ್ಕಾರ ಕೊಟ್ಟಿರುವ ಪ್ರಣಾಳಿಕೆ ಭರವಸೆಯನ್ನು ಈಡೇರಿಸಬೇಕು ಅಂತ ಯಾರು ಯಾಕೆ ಧ್ವನಿ ಎತ್ತಲ್ಲ ಗೊತ್ತಿದೆ. ಇದೊಂದು ಆಗ್ಬಿಟ್ರೆ ಇವರ ಸಂಘಟನೆಗಳ ಅಸ್ತಿತ್ವ ಕಳೆದು ಹೋಗಿಬಿಡುತ್ತೆ ಅಂತ ಗೊತ್ತಿರೋದ್ರಿಂದಲೇ ಇವರು ಸರಿಸಮಾನ ವೇತನಕ್ಕೆ ಯಾವುದೇ ಕಾರಣಕ್ಕೂ ಬೇಡ ಅಂತಿದ್ದಾರೆ.

ಯಾಕೆ ಇವರು ಒಂದೇ ಒಂದು ಮನವಿ ಪತ್ರ ಕೊಡಲಿಲ್ಲ ಆಯ್ತಪ್ಪ ಒಂದು ಪ್ರಯತ್ನ ಪಟ್ಟರು ನೀವೇನು ಕೂಟದವರಿಗೆ ಮಾತ್ರನೇ ನೌಕರರಿಗೆ ಹಿತಾಸಕ್ತಿ ಇದೆಯಾ ಶಾಶ್ವತ ಪರಿಹಾರ ಅನ್ನೋದು ಕೂಟದವರಿಗೆ ಮಾತ್ರನೇ ಒಂದು ಅಜೆಂಡಾನಾ? ಆಯ್ತ್ರಪ್ಪ ನಿಮ್ಮ ಸಂಘಟನೆಗಳು ಹಾಕಿದ್ದೀರಲ್ಲ ಸರ್ಕಾರಿ ನೌಕರರಿಗಿಂತ ಹೆಚ್ಚಿನ ಸಂಬಳ ಮಾಡಿಸ್ತೀವಿ ಹೆಚ್ಚಿನ ಸಂಬಳ ಮಾಡಿಸ್ತೀವಿ ಅಂತ ಫಸ್ಟ್ ಈಗ ಸರಿಸಮಾನ ಮಾಡಿಕೊಳ್ಳಿ ಆಮೇಲೆ ಹೆಚ್ಚಿನ ಬಗ್ಗೆ ಮಾತಾಡೋಣ.

ಸರಿಸಮಾನ ವೇತನ ಆಗ್ಬಿಟ್ರೆ ನಮ್ಮ ಅಸ್ತಿತ್ವಗಳು ನಮ್ಮ ಸಂಘಟನೆಗಳು ಇರಲ್ಲ ನೌಕರರು ಯಾರು ನಮ್ಮ ಹತ್ರ ದೇಹಿ ಅಂತ ಬರಲ್ಲ ಅನ್ನೋ ಆ ಒಂದು ಉದ್ದೇಶದಿಂದಲೇ ಇವರು ನಾಲ್ಕು ವರ್ಷಕ್ಕೆ ಒಂದು ಸಲ ಬರೋದು. ಆದರೆ, ಸರ್ಕಾರಗಳು ಮತ್ತು ಆಡಳಿತ ಮಂಡಳಿಗಳಿಗೂ ಇವರ ಕುತಂತ್ರಗಳು ಇವರ ಏನು ದೊಮ್ಮರಾಟಗಳನ್ನೆಲ್ಲ ಚೆನ್ನಾಗಿ ಅರಿತು ಈ ಸಲ ಯಾವುದೋ ಒಂದು ಮಹತ್ತರವಾದ ಒಂದು ಇತಿಹಾಸ ನಿರ್ಮಾಣ ಮಾಡೋಕೆ ಹೆಜ್ಜೆ ಇಡ್ತಾ ಇದೆ. ಅದನ್ನು ಹಾಳು ಮಾಡಬೇಕು ಅಂತಾನೆ ಈಗ ಈ ಡಿ.31ರ ದೊಮ್ಮರಾಟ.

ಒಂದು ವರ್ಷ ಆಗೋಯ್ತು ಒಂದು ವರ್ಷ ಆಗೋಯ್ತು ಏನ್ ಮಾಡ್ತಾ ಇದ್ದೀರಾ ಏನ್ ಮಾಡ್ತಾ ಇದ್ದೀರಾ ಏನ್ ಮಾಡಿದ್ರು ಒಂದು ವರ್ಷದ ಹಿಂದೇನೆ ನಾವು ಸಾರಿಗೆ ಸಂಭ್ರಮ ದೇಶದಲ್ಲಿ ಮುಖ್ಯಮಂತ್ರಿಗಳನ್ನ ಸಾರಿಗೆ ಸಚಿವರನ್ನ ಉಪ ಮುಖ್ಯಮಂತ್ರಿಗಳನ್ನ ಕರೆದು 20000 ನೌಕರರನ್ನ ಸೇರಿಸಿ ಅವರ ಮುಂದೆ ನಮ್ಮ ಬೇಡಿಕೆಯನ್ನ ಇಡಬೇಕು ಅಂತ ಯಾವಾಗ ನಾವು ಪ್ರಯತ್ನ ಪಟ್ಟವೋ ಅದನ್ನ ಬೋಗಸ್ ನಕಲಿ ಸಹಿ ಮತ್ತೆ ಬೋಗಸ್ ಸಾರಿಗೆ ಇಲಾಖೆ ಆದೇಶ ಕಾಪಿನ ಮಾಡಿಸಿಬಿಟ್ಟು ಅದನ್ನ ಹಾಳು ಮಾಡಿದ್ದು ಗೊತ್ತಾಗಲಿಲ್ವೇ ಕೆಎಸ್ಆರ್ಟಿಸಿ ಅಧ್ಯಕ್ಷರ ಕೋಣೆಯಲ್ಲಿ ಕೂತ್ಕೊಂಡು ಪುಂಕಾನು ಪುಂಕವಾಗಿ ಊದ್ತಾ ಇದ್ರಲ್ಲ ಸ್ವಾಮಿ ಅದು ಗೊತ್ತಾಗಲಿಲ್ವೇ ನಿಮ್ಮ ಕುತಂತ್ರಗಳು?

ಮೊನ್ನೆ ಟೌನ್ಹಾಲ್‌ನಲ್ಲಿ ನಡೆದಂತಹ ಒಂದು ಸಭೆಯಲ್ಲಿ ಸಾರಿಗೆ ಸಚಿವರು ಕ್ಲಿಯರಾಗಿ ಹೇಳಿದ್ದಾರೆ ನಿಮ್ಮ ಬೇಡಿಕೆ ನಮಗೆ ಗೊತ್ತಿದೆ ಪ್ರಣಾಳಿಕೆ ಭರವಸೆ ಬಗ್ಗೆ ನಮಗೆ ಗೊತ್ತಿದೆ ಮುಖ್ಯಮಂತ್ರಿಯವರ ಹತ್ರ ನಾವು ಮಾತಾಡಿ ಅದರ ಬಗ್ಗೆ ಒಂದು ನಿರ್ಧಾರ ತಗೊಳ್ತೀವಿ ಅನ್ನೋ ಮಾತನ್ನು ಹೇಳಿದ್ದಾರೆ. ಒಬ್ಬ ಹಿರಿಯ ಅನುಭವಿ ನಾಯಕರು ಸಾರಿಗೆ ಸಚಿವರು ಅವರ ಮಾತಿನ ಒಳಮರ್ಮ, ಅರ್ಥ, ವಿಚಾರಗಳು ಬೇರೆ ಬೇರೆಯಾಗಿರುತ್ತವೆ ಅಂತಹ ವ್ಯಕ್ತಿ ಇವತ್ತು ನಮಗೆ ಆ ಒಂದು ತುಂಬಿದ ಸಭೆಯಲ್ಲಿ ಒಂದು ಮಾತನ್ನು ಕೊಟ್ಟು ಹೋಗಿದ್ದಾರೆ.

ಮತ್ತೆ ನಾವು ಸುಮ್ನೆ ಕೈ ಕಟ್ಟಿಕೊಂಡು ಕೂತಿಲ್ಲ. ಹೋರಾಟಗಳು ಅಂದ್ರೆ ಬರಿ ಬೀದಿಗೆ ಇಳಿದು ಉಪವಾಸ ಮಾಡ್ತೀವಿ, ಧರಣಿ ಮಾಡ್ತೀವಿ ಅನ್ನೋದಲ್ಲ, ಹೌದು ಅದನ್ನೆಲ್ಲ ನಿಮಗಿಂತ ಹೆಚ್ಚಿಗೆ ಮಾಡಿದವರು ನಾವು ಆದರೆ ಯಾವ ಕಾಲಘಟ್ಟದಲ್ಲಿ ಯಾರ ಮುಂದೆ ಏನು ಮಾಡಬೇಕು ಅಂತ ಗೊತ್ತಿದ್ದು ಮಾಡೋವರು ನಾವು.

ಸಭೆಗಳು ಮಾಡಿದ್ದೀವಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೀವಿ ಜನಗಳನ್ನ ತೋರಿಸಿದ್ದೀವಿ ಅವರ ಅಭಿಲಾಷೆಗಳು ಏನು ಅಂತ ನಾವು ತಿಳಿಸಿದ್ದೀವಿ ಅದರ ಪ್ರತಿಫಲಗಳು ಸಿಗುವಂತ ಸಮಯದಲ್ಲಿ ಇವೆಲ್ಲ ಅಡತಡೆಗಳು ಬರ್ತಾ ಇರ್ತವೆ ಈ ಮುಷ್ಕರ ಮೊಮ್ಮರಾಟ ಆಡಿಸಿ ಇದೊಂದು ಅಗ್ರಿಮೆಂಟ್ ನ ಒಂದು ಮಾಡಿಸಿಬಿಟ್ಟು 2028ಗೆ ಸರ್ಕಾರ ಇನ್ನೇನು 2028 ಮಾರ್ಚ್ ಗೆ ಮತ್ತೆ ಹೊಸ ಏನು ಚುನಾವಣೆಗೆ ಹೋಗ್ಬೇಕು ಅವರು ಆ ಟೈಮಲ್ಲಿ ಮತ್ತೆ ಚುನಾವಣೆಗೆ ಹೊರಟು ಹೋಗ್ಬಿಟ್ರೆ ಮತ್ತೆ ಯಾವ ಸರ್ಕಾರ ಬರುತ್ತೋ ಏನಾಗುತ್ತೋ ಇನ್ನೊಂದು ಅಗ್ರಿಮೆಂಟ್ ಮಾಡಿಸ್ಕೊಂಡು ಬಿಡೋಣ ಅನ್ನೋದು.

ಹಿಂಗೆ ಮಾಡಿ ಮಾಡಿ ನಮ್ಮ ನೌಕರರನ್ನ ಹೆಂಗೆ ಬಾಳುಗಡಿಸಬೇಕು ಹೆಂಗೆ ಜೀವಂತ ಸಮಾಧಿ ಮಾಡಬೇಕು ಅನ್ನೋದನ್ನ ಇವರೆಲ್ಲ ಕರಗತ ಮಾಡಿಕೊಂಡವರೆ ಇವರ ಸಂಘಗಳ ಅಸ್ತಿತ್ವ ಉಳಿಸಿಕೊಳ್ಳೋಕ್ಕೆ ಅಷ್ಟೇ ಈ ಹೋರಾಟ ನೌಕರರನ್ನ ಉದ್ದಾರ ಮಾಡೋದಕ್ಕೆ ಮತ್ತೊಂದಕ್ಕೆ ಅಲ್ಲ

1 Comment

  • ನೀವು ಹೇಳಿದ್ದು ಒಪ್ಪೋಣ, ಖಂಡಿತ ಆ ನಿರುದ್ಯೋಗಿಗಳ ಒಂದು ಸಮಿತಿ ಸರಿ ಸಮಾನ ವೇತನ ಕೊಟ್ಟು ಬಿಟ್ರೆ ನಾವು ಅಬ್ಬೆಪಾರಿಗಳಾಗಿಬಿಡ್ತಿವಲ್ಲ ಅಂತ ಕೊನೆ ಪ್ರಯತ್ನ ಪಡತಾ ಇದೆ, ಅದು ಎಲ್ಲರಿಗೂ ಗೊತ್ತು. ಆದ್ರೆ ಅದೇ ಸಮಯದಲ್ಲಿ ನೀವೇನ್ಮಾಡತಾ ಇದ್ದೀರಿ?. ನಾವು ಸುಮ್ಮನೆ ಕೂತಿಲ್ಲ ಅಂತೀರಿ, ನೀವು ಮಾಡೋ ಪ್ರಯತ್ನಗಳನ್ನ ನೌಕರರ ಮುಂದೆ ತನ್ನಿ ಇದರಲ್ಲೇನು ಮುಚ್ಚಿಡೋದಕ್ಕೆ ಹೋಗತೀರಿ ನಿಮ್ಮ ಪ್ರಯತ್ನ ಎಲ್ಲರಿಗೂ ಗೊತ್ತಾಗಲಿ ತಪ್ಪು ಏನು

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ