ವಿಡಿಯೋ

ಸಾಂಪ್ರದಾಯಿಕವಾಗಿ ಜರುಗಿದ ನಂಜುಂಡೇಶ್ವರ ಸ್ವಾಮಿ ಮಿನಿ ರಥೋತ್ಸವ

ಕೊರೊನಾ ಭೀತಿ ಹಿನ್ನೆಲೆ ಕೇವಲ ಐದು ಮಂದಿ ಭಕ್ತರು ಭಾಗಿ

ವಿಜಯಪಥ ಸಮಗ್ರ ಸುದ್ದಿ

ನಂಜನಗೂಡು: ಇಂದು ನಡೆಯಬೇಕಿದ್ದ ನಂಜನಗೂಡಿನ ನಂಜುಂಡೇಶ್ವರ  ದೇವಾಲಯದ ಪಂಚ ಮಹಾರಥೋತ್ಸವ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವುದರಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ರದ್ದಾಗಿದೆ.

ಆದರೂ ದೇವಾಲಯದ ಒಳಗೆ ಆಡಳಿತ ಮಂಡಳಿಯವರು ಸಾಂಪ್ರದಾಯಿಕವಾಗಿ ಶ್ರೀಸ್ವಾಮಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಿದ್ದರು. ಹೀಗಾಗಿ ರಥೋತ್ಸವವನ್ನು ಸಾಂಕೇತಿಕವಾಗಿ ಶನಿವಾರ ನೆರವೇರಿಸಲಾಯಿತು.

ದೊಡ್ಡ ತೇರಿನ ಬದಲು ಪುಟಾಣಿ ತೇರಿನ ಮೂಲಕ ರಥೋತ್ಸವ ನಡೆಸಲಾಯಿತು. ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸೇರುವ ಜಾಗದಲ್ಲಿ‌ ಕೇವಲ‌ 5 ಜನರು ಇದ್ದರು. ಈ ಹಿನ್ನೆಲೆಯಲ್ಲಿ ಅರ್ಚಕರು, ಕೆಲವು ಸಿಬ್ಬಂದಿ ಸೇರಿ ಸರಳ ಆಚರಣೆ ಮಾಡಿದರು.

ಮುಂಜಾನೆ 5.30ಕ್ಕೆ ದೇವಸ್ಥಾನದ ಹೊರ ಭಾಗದಲ್ಲಿ‌ ಪೂಜೆ ಸಲ್ಲಿಸಿ ರಥೋತ್ಸವ್ಕೆ ಚಾಲನೆ ನೀಡಲಾಯಿತು. ದೇವಾಲಯದ ಒಳ ಆವರಣದಲ್ಲೇ ಪುಟ್ಟ ರಥದಲ್ಲಿ ಉತ್ಸವ ಮೂರ್ತಿ ಪೂಜೆ ನಡೆಯಿತು.

ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕೆ ನಂಜನಗೂಡು ಸಂಪೂರ್ಣ ಸ್ತಬ್ಧವಾಗಿದೆ. ಹೀಗಾಗಿ ಸರ್ಕಾರದ ವತಿಯಿಂದ ನಡೆಯುತ್ತಿದ್ದ ಗೌತಮ ಪಂಚ ರಥೋತ್ಸವ ರದ್ದಾಗಿದ್ದರಿಂದ ನಂಜನಗೂಡು ಯುವ ಬ್ರಿಗೇಡ್ ಯುವಕರು ಚಿಕ್ಕ ತೇರು ನಿರ್ಮಿಸಿ ದೇವಸ್ಥಾನದ ಸುತ್ತ ಎಳೆದರು.

Leave a Reply

error: Content is protected !!
LATEST
ಭ್ರಷ್ಟಾಚಾರ, ಕಮಿಷನ್‌ ದಂಧೆ ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಕೊಟ್ಟು ಹಣ ಉಳಿಯುತ್ತದೆ : ಎಎಪಿ ಜೂ.24ರಂದು ಶಿವಮೊಗ್ಗದಲ್ಲಿ ರಾಷ್ಟ್ರ, ರಾಜ್ಯ ರೈತ ಮುಖಂಡರ ಸಮಾವೇಶ: ಕುರುಬೂರ್ ಶಾಂತಕುಮಾರ್ ಸಂತ್ರಸ್ತೆ ಅಪರಹರಣ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ಮಂಜೂರು KSRTCಯಿಂದ 300ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ಬಸ್‌ ಓಡಾಟ: ಸಚಿವ ರಾಮಲಿಂಗಾರೆಡ್ಡಿ BMTC: 50ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​​ಗಳ ಚಾಲಕರಿಗೆ ಗೇಟ್‌ಪಾಸ್‌ ಅತ್ಯಾಚಾರ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣನ ಎಸ್‌ಐಟಿ ಕಸ್ಟಡಿ ಅಂತ್ಯ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು