NEWSನಮ್ಮಜಿಲ್ಲೆನಮ್ಮರಾಜ್ಯ

KKRTC ವಿಜಯಪುರ: ಭ್ರಷ್ಟಾಚಾರ ಆರೋಪ ಮೇಲ್ನೋಟಕ್ಕೆ ಸಾಬೀತು ಹಿನ್ನೆಲೆ- ಸಾರಿಗೆ ಡಿಸಿ ನಾರಾಯಣಪ್ಪ ಕುರಬರರ ಶಿಸ್ತುಪಾಲನ ಅಧಿಕಾರ ಹಿಂಪಡೆದು ಎಂಡಿ ಆದೇಶ

ವಿಜಯಪುರ ಸಾರಿಗೆ ಡಿಸಿ ಕುರಬರ
ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ವಿಜಯಪಥ ವರದಿ ಪರಿಣಾಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರ ಎಲ್ಲ ಶಿಸ್ತುಪಾಲನಾಧಿಕಾರ ಸೇರಿದಂತೆ ಇತರೆ ಎಲ್ಲ ಅಧಿಕಾರವನ್ನು ವಾಪಸ್‌ ಪಡೆದಿರುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸುಶೀಲ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಶನಿವಾರ ಫೆ.21ರಂದು ಆದೇಶ ಹೊರಡಿಸಿರು ಅವರು, ಸಂಸ್ಥೆಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರಿಗೆ ಸಂಬಂಧಿಸಿದಂತೆ ಸಂಸ್ಥೆಯ ನೌಕರರ (ನಡತೆ ಮತ್ತು ಶಿಸ್ತು ನಿಯಮಾವಳಿಗಳು 1971 ರಡಿ ಚಲಾಯಿಸಲ್ಪಡುವ ಎಲ್ಲಾ ಶಿಸ್ತುವಾಲನಾಧಿಕಾರವನ್ನು ತಕ್ಷಣ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಸಂಸ್ಥೆಯ ಎಲ್ಲ ಇಲಾಖಾ ಮುಖ್ಯಸ್ಥರು, ನಿಗಮದ ಕೇಂದ್ರ ಕಚೇರಿ ಅಧಿಕಾರಿಗಳ ಗಮನಕ್ಕೆ ತಂದಿದ್ದು ಜತೆಗೆ ವಿಜಯಪುರ ವಿಭಾಗಕ್ಕೆ ಸಂಬಂಧಿಸಿದ ಶಿಸ್ತುಪಾಲನಾಧಿಕಾರವನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ನಿಯಮಾನುಸಾರ ಚಲಾಯಿಸಲು ಆದೇಶಿಸಿದ್ದಾರೆ. ಅಲ್ಲದೆ ನಿಗಮದ ಅಧ್ಯಕ್ಷರ, ಆಪ್ತಕಾರ್ಯದರ್ಶಿ ಅವರಿಗೂ ಮಾಹಿತಿಗಾಗಿ ಈ ಪ್ರತಿಯನ್ನು ಕಳಿಸಿಕೊಟ್ಟಿದ್ದಾರೆ.

ವಿಜಯಪಥ ವರದಿ ಪರಿಣಾಮ: ಭ್ರಷ್ಟ ಮತ್ತು ನೌಕರರ ವಿರೋಧಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ನಿವೃತ್ತಿ ಅಂಚಿನಲ್ಲಿರುವುದರಿಂದ ಇನ್ನಷ್ಟು ಭ್ರಷ್ಟಾಚಾರ ಮಾಡುವ ಸಂಭವವಿದೆ. ಹೀಗಾಗಿ ಅವರನ್ನು ಶಿಸ್ತು ಮತ್ತು ಆಡಳಿತ ಶಾಖೆ ಹಾಗೂ ಇನ್ನುಳದ ಶಾಖೆಗಳಲ್ಲಿ ತೆಗೆದುಕೊಳ್ಳುವ ಶಿಸ್ತಿನ ಕ್ರಮಗಳ ಶಿಸ್ತುಪಾಲನಾಧಿಕಾರ ಹಾಗೂ ಇನ್ನುಳಿದ ಅಧಿಕಾರವನ್ನು ಅವರಿಂದ ಕೂಡಲೇ ಹಿಂಪಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೆಕೆಆರ್‌ಟಿಸಿ ಎಂಡಿ ಡಾ.ಸುಶೀಲ ಅವರಿಗೆ KPCC ಬೆಂಗಳೂರು ಹಾಗೂ ಸಿಂದಗಿ ಘಟಕದ ಅಲ್ಪ ಸಂಖ್ಯಾತರ ಕಾರ್ಯದರ್ಶಿ ಯಾಕೂಬ್‌ ನಾಟೀಕಾರ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದರು.

ಈ ಸಂಬಂಧ ವಿಜಯಪಥದಲ್ಲಿ ಕಳೆದ ಜನವರಿ 12-2026ರಂದು “KKRTC ವಿಜಯಪುರ: ನೌಕರರ ವಿರುದ್ಧ ಕೇಸ್‌ ಬರೆಯಲು ತಾವೇ ಪಾರ್ಸಲ್‌ನಲ್ಲಿ 500 ರೂ. ಇಟ್ಟು ತನಿಖೆಗೆ ಬಂದ ಸಂಚಾರ ನಿರೀಕ್ಷಕರು, ಈ ಭ್ರಷ್ಟರಿಗೆ ಲಂಚಬಾಕ ಡಿಸಿ ಸಾಥ್‌- ಆರೋಪ” ಶೀರ್ಷಿಕೆಯಡಿ ಸಮಗ್ರವಾದ ವರದಿ ಪ್ರಕಟವಾಗಿತ್ತು.

ಈ ವರದಿ ಬಂದ ಪರಿಣಾಮ ಎಂಡಿ ಅವರು ವಿಚಾರಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಮಾಡಿದ್ದರು. ಬಳಿಕ ಪ್ರಾಥಮಿಕ ವಿಚಾರಣೆ ವೇಳೆ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವುದರಿಂದ ಈ ಕ್ರಮ ತೆಗೆದುಕೊಂಡಿದ್ದಾರೆ. ಹೀಗಾಗಿ ಇದು ವಿಜಯಪಥ ವರದಿಯ ಪರಿಣಾಮದಿಂದಲೇ ಈ ಕ್ರಮತೆಗೆದುಕೊಳ್ಳಲು ಎಂಡಿ ಅವರಿಗೆ ಸಾಧ್ಯವಾಗಿದೆ ಎಂದು ವಿಜಯಪುರ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಎನ್. ಇಲಕಲ್ ಅವರು ಪತ್ರಿಕಾ ವರದಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಸಾರಿಗೆ ಡಿಸಿ ನಾರಾಯಣಪ್ಪ ಕುರಬರ ಅವರ ಭ್ರಷ್ಠಾರ ಬಯಲಿಗೆಳೆದ ಯಾಕೂಬ ನಾಟೀಕಾರ ಹಾಗೂ ಎಂ.ಎನ್‌.ಇಳಕಲ್‌.

ಇನ್ನು ಯಾಕೂಬ ನಾಟೀಕಾರ ಅವರ ಮನವಿಗೆ ಬೆಲೆ ಕೊಟ್ಟು ಭ್ರಷ್ಟಾಚಾರಿ ಕಾರ್ಮಿಕ ವಿರೋಧಿ ಸ್ವಜನ ಪಕ್ಷಪಾತಿ ನಾರಾಯಣಪ್ಪ ಕುರಬರ ಅವರ ಶಿಸ್ತುಪಾಲನಾಧಿಕಾರಿಯಾಗಿ ಚಲಾಯಿಸಲ್ಪಡುವ ಎಲ್ಲ ಅಧಿಕಾರಿಗಳನ್ನು ತಕ್ಷಣ ಹಿಂಪಡೆದಿರುವುದಕ್ಕೆ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲ ಮೇಡಂ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

2026ರ ಮೇ ತಿಂಗಳಿನಲ್ಲಿ ಸೇವೆಯಿಂದ ನಾರಾಯಣಪ್ಪ ಕುರಬರ ನಿವೃತ್ತಿಯಾಗುತ್ತಿದ್ದಾರೆ. ಇವರು ನಿವೃತ್ತಿಯ ಅಂಚಿನಲ್ಲಿರುವುದರಿಂದ ವಿಭಾಗದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ನಾಟೀಕಾರ ಹಾಗೂ ಎಂ.ಎನ್‌.ಇಳಕಲ್‌ ಆರೋಪಿಸಿದ್ದರು.

ಅಲ್ಲದೆ ಭ್ರಷ್ಟ ಮತ್ತು ನೌಕರರ ವಿರೋಧಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ನಿವೃತ್ತಿ ಅಂಚಿನಲ್ಲಿರುವುದರಿಂದ ಇನ್ನಷ್ಟು ಭ್ರಷ್ಟಾಚಾರ ಮಾಡುವ ಸಂಭವವಿದೆ. ಹೀಗಾಗಿ ಅವರನ್ನು ಶಿಸ್ತು ಮತ್ತು ಆಡಳಿತ ಶಾಖೆ ಹಾಗೂ ಇನ್ನುಳಿದ ಶಾಖೆಗಳಲ್ಲಿ ತೆಗೆದುಕೊಳ್ಳುವ ಶಿಸ್ತಿನ ಕ್ರಮಗಳ ಶಿಸ್ತುಪಾಲನಾಧಿಕಾರ ಹಾಗೂ ಇನ್ನುಳಿದ ಅಧಿಕಾರವನ್ನು ಅವರಿಂದ ಕೂಡಲೇ ಹಿಂಪಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೆಕೆಆರ್‌ಟಿಸಿ ಎಂಡಿ ಡಾ.ಸುಶೀಲ ಅವರಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದರು.

Megha
the authorMegha

Leave a Reply

error: Content is protected !!