ಸಾರಿಗೆ ನೌಕರರಿಗೆ 12 ತಿಂಗಳ ಹಿಂಬಾಕಿ, 15 ತಿಂಗಳು ವೇತನ ಪರಿಷ್ಕರಣೆ ಮುಂದಕ್ಕೆ ಹಾಕಿ ಬಜೆಟ್‌ನಲ್ಲಿ ಗುಂಟ್‌ನಾಮ ಹಾಕಿದ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಕರ್ನಾಟಕ ಬಜೆಟ್ ಇಂದು ಮಂಡಿಸಿದ್ದು, ದಾಖಲೆಯ 17ನೇ ಬಜೆಟ್ ಮಂಡಿಸಿರುವ ಅವರು, ಹಲವು ಜನಪರ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ, ಸಾರಿಗೆ ನೌಕರರಿಗೆ 12 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡದೆ ಉಂಡೆನಾಮ ಗುಂಟ್‌ನಾಮ ಹಾಕಿದ್ದಾರೆ.

1-4-2025 ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಿಸಲು ನಿರ್ಣಯಕ್ಕೆ ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ. ಆದರೆ, ಇದರಿಂದ ಸಾರಿಗೆ ನೌಕರರಿಗೆ 15 ತಿಂಗಳು ವೇತನ ಹೆಚ್ಚಳ ಮುಂದಕ್ಕೆ ಹೋಗುವುದರಿಂದ 7-8 ಲಕ್ಷ ರೂಪಾಯಿಯನ್ನು ಪ್ರತಿ ನೌಕರರು ಕಳೆದುಕೊಳ್ಳಲಿದ್ದಾರೆ.
ಅದರಂತೆ 2020 ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಹೆಚ್ಚಾಗಿರುವ ವೇತನ ಬಾಕಿ ಪಾವತಿಗಾಗಿ 1271 ಕೋಟಿ ಮೀಸಲಿಡುವುದಾಗಿ ಸಿಎಂ ತಿಳಿಸಿದ್ದಾರೆ. ಇದರಲ್ಲಿ 1-1-2021ರಿಂದ 28-02-2023ರ ವರೆಗಿನ ವೇತನ ಬಾಕಿ ಪಾವತಿ ಶೀಘ್ರದಲ್ಲೇ ಜಾರಿಗೆ ಬರಲಿದೆ.
ಆದರೆ, ಇಲ್ಲೂ 12 ತಿಂಗಳ ಹಿಂಬಾಕಿ ಕೊಡದೆ ನೌಕರರ ಶ್ರಮಕ್ಕೆ ಬೆಲೆಯಿಲ್ಲ ಎಂಬಂತೆ ಬಿಂಬಿಸಿದ್ದಾರೆ. ಇನ್ನು ಸಾರಿಗೆ ನಿಗಮಗಳ ಸೇವೆಯನ್ನು ಉತ್ತಮ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಘೋಷಿಸಿದ್ದಾರೆ.
ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ 200 ಡಿಸೇಲ್ನ ಬಸ್ಸುಗಳ ನೇರ ಖರೀದಿಗೆ ಕ್ರಮ ತೆಗೆದುಕೊಳ್ಳುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಇದು ಸೇರಿದಂತೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟಾರೆ 6596 ಬಸ್ಸುಗಳನ್ನು ನಿಗಮಗಳಿಗೆ ಒದಗಿಸಲಾಗಿದೆ. 2026-27ನೇ ಸಾಲಿನಲ್ಲಿ 1000 ಡೀಸೆಲ್ ಬಸ್ಸುಗಳ ಒದಗಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಇದೆಲ್ಲ ಓಕೆ ಆದರೆ ನೌಕರರಿಗೆ ಅವರ ಶ್ರಮಕ್ಕೆ ತಕ್ಕಂತೆ ಕೊಡಬೇಕಿರುವ ವೇತನವನ್ನು ಕೊಡದೆ ಅಹಿಂದ ಎಂದು ಹೇಳಿಕೊಳ್ಳುವ ಸಿಎಂ ಈ ರೀತಿ ನಡೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ನೌಕರರ ಅಳಲಾಗಿದೆ.
Related









