ಕೃಷಿ ಕ್ಷೇತ್ರ ಮತ್ತಷ್ಟು ದುರ್ಬಲವಾಗಲು ಕಾರಣವಾಗು, ರೈತರ ಪಾಲಿಗೆ ನಿರಾಸೆ ತರುವ ಬಜೆಟ್: ಕುರುಬೂರು ಶಾಂತಕುಮಾರ್

- ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಮುಖಂಡರ ರಾಜ್ಯ ಬಜೆಟ್ ಪ್ರತಿಕ್ರಿಯೆ
ಮೈಸೂರು: ರೈತರ ಆತ್ಮಹತ್ಯೆ ಸ್ಥಾನದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನ ಇದನ್ನು ತಡೆಗಟ್ಟಲಿಕ್ಕೆ ಯಾವುದೇ ಯೋಜನೆಗಳಿಲ್ಲ. ರೈತರ ಮಕ್ಕಳು ಕೃಷಿ ಕ್ಷೇತ್ರದ ಬಗ್ಗೆ ಬೇಸರಗೊಂಡು ವಲಸೆ ಹೋಗುತ್ತಿದ್ದಾರೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಇದು ಭೀಕರವಾದ ಸಮಸ್ಯೆ ಇದನ್ನ ತಡೆಗಟ್ಟಲು ಯಾವುದೇ ಯೋಜನೆಗಳಿಲ್ಲ ಕೃಷಿ ಕ್ಷೇತ್ರ ಮತ್ತಷ್ಟು ದುರ್ಬಲವಾಗಲು ಕಾರಣವಾಗುತ್ತದೆ ರೈತರ ಪಾಲಿಗೆ ಬಜೆಟ್ ನಿರಾಸೆ ತಂದಿದೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಇಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ 17 ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ತೋಟಗಾರಿಕೆ ಉತ್ಪನ್ನಗಳ ದಾಸ್ತಾನಿಗಾಗಿ ದಾವಣಗೆರೆ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ತಿತಲಿಕರಣ ಘಟಕ ಆರಂಭ. ರೇಷ್ಮೆ ಉದ್ಯಮಕ್ಕೆ ಒತ್ತು ನೀಡಿರುವುದು ರೇಷ್ಮೆ ಗೂಡು ಸಾಗಾಣಿಕೆ ವೆಚ್ಚ 20 ರೂ.ಏರಿಕೆ ಮಾಡಿರುವುದು. ಪ್ರೋತ್ಸಾಹದಾಯಕ ಶೂನ್ಯ ಬಡ್ಡಿ ದರದಲ್ಲಿ 38 ಲಕ್ಷ ರೈತರಿಗೆ 30ಸಾವಿರ ಕೋಟಿ ರೂಪಾಯಿ ರೈತರಿಗೆ ಸಾಲ ನೀಡುವ ಯೋಜನೆ.ಇದು ಹಳೆಯ ಯೋಜನೆ ಇದರಲ್ಲಿ ವಿಶೇಷವೇನು ಇಲ್ಲ.
ಹಸು, ಎಮ್ಮೆ ಖರೀದಿಸಲು ಶೇಕಡಾ 25 ರಷ್ಟು ಪ್ರೋತ್ಸಾಹ ಧನ ಹೈನುಗಾರಿಕೆ ಸ್ವಲ್ಪ ಹೊತ್ತು ನೀಡಿದ್ದಾರೆ. 16 ವರ್ಷದ ಮಕ್ಕಳಿಗೆ ಮೂಬೈಲ್‌ನಲ್ಲಿ ಸಾಮಾಜಿಕ ಜಾಲತಾಣ ಬಳಕೆ ನೀಷೇಧ. ಕೃಷಿ ಕ್ಷೇತ್ರದಲ್ಲಿ AI ತಂತ್ರಜ್ಞಾನ ಬಳಕೆ ಅಭಿವೃದ್ಧಿಗೆ ಪೂರಕ ಒಳ್ಳೆಯ ಚಿಂತನೆಯಾಗಿದೆ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಉನ್ನತಿಕರಣಕ್ಕೆ 180 ಕೋಟಿ ಹಣ ಮೀಸಲಿಟ್ಟಿರುವುದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.

ನೀರಿನಲ್ಲಿ ಬೆರಳು ಅದ್ದಿ ಚೀಪಿದ ಹಾಗೆ: ರಾಜ್ಯ ಬಜೆಟ್ ಮಂಡನೆಯಲ್ಲಿ ರೈತರಿಗೆ ಪ್ರಯೋಜನ ಇಲ್ಲದ ನಿರಾಶಾದಾಯಕ ಬಜೆಟ್ ಆಗಿದ್ದು, ನೀರಿನಲ್ಲಿ ಬೆರಳು ಅದ್ದಿ ಚೀಪಿದ ಹಾಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರು ನುಣಿಚಿ ಕೊಂಡಿದ್ದು, ಬಂಡವಾಳ ಶಾಹಿಗಳ ಹಾಗೂ ಉದ್ಯಮಿಗಳ ಕೃಪಾಪೋಷಿತ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಹೇಳಿದ್ದಾರೆ.
ಕೃಷಿ ಕಾಯ್ದೆ ತಿದ್ದುಪಡಿ ಕೈಬಿಡುವ ಬಗ್ಗೆ ಯಾವುದೇ ಪ್ರತಾಪ ಮಾಡಿಲ್ಲ, ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ, ಖಾತರಿ ಕಾನೂನು ಜಾರಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕಿತ್ತು, ಕೆರೆ ಕಟ್ಟೆಗಳ ಒತ್ತುವರಿ ತೆರವು ಗೊಳಿಸಿ ಹೂಳು ತೆಗೆಡು ಆ ಮಣ್ಣನ್ನು ರೈತರ ಜಮೀನುಗಳಿಗೆ ಬಿಡಸಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿ,ಅಂತರ್ ಜಲ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿತ್ತು.
ಕಬ್ಬಿನ F R P ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಪಡಿಸಿಸುವ ಮಾನದಂಡ ಜಾರಿಗೆ ತಂದು ಸಕ್ಕರೆ ಇಳುವರಿ 9.5 ಕ್ಕೆ ,ಎಫ್ ಆರ್ ಪಿ ದರ 3500/- ರೂ ರೈತನ ಹೊಲದಲ್ಲಿನ ದರ ಎಂದು ನಿಗದಿ ಪಡಿಸಬೇಕಿತ್ತು. ಫಸಲ್ ಭೀಮಾ ಬೆಳೆ ವಿಮೆ ಪದ್ಧತಿ ಬದಲಾಯಿಸಿ, ಪ್ರತಿ ರೈತನ ಹೊಲದ ಬೆಳೆ ವಿಮೆ ನಷ್ಟ ಪರಿಹಾರ ಎಂದು ನಿಗದಿ ಮಾಡಬೇಕಿತ್ತು.
ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಅಕ್ರಮ ಸಕ್ರಮ ಮುಂದು ವರಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ತಿಳಿಸಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಗಳಲ್ಲಿ ದಲ್ಲಾಳಿಗಳು ರೈತರಿಂದ 10% ಕಮಿಷನ್ ವಸೂಲಿ ಮಾಡುತ್ತಿರುವುದನ್ನು ತಪ್ಪಿಸಲು ಕಠಿಣ ಕಾನೂನು ಕ್ರಮ ಜಾರಿ ಮಾಡಬೇಕಿತ್ತು, ತೆಲಂಗಾಣ ಮಾದರಿಯಂತೆ 60 ವರ್ಷ ತುಂಬಿದ ರೈತರಿಗೆ ತಿಂಗಳಿಗೆ ರೂ 10,000/ ಪಿಂಚಣಿ ಯೋಜನೆ ಜಾರಿಗೆ ತರಬೇಕಿತ್ತು.
ರೈತನ ಮಗನ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 25 % ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು. ಕೃಷಿ ಸಾಲ ವಸೂಲಾತಿಗಾಗಿ ರೈತರ ಜಮೀನು ವಶಡಿಸಿಕೊಳ್ಳುವ ಸರ್ಪೈಸಿ ಕಾಯ್ದೆ ರದ್ದು ಮಾಡಿಲ್ಲ. ನಕಲಿ ಬಿತ್ತನೆ ಬೀಜ,ನಕಲಿ ರಸ ಗೊಬ್ಬರ, ನಕಲಿ ಕೀಟನಾಶಕ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಜೈಲು ಸಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಎಂದು ಹೇಳಿದ್ದಾರೆ.

ಬಣ್ಣ ಬಣ್ಣದ ಚಿಟ್ಟೆಯ ಬಜೆಟ್: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ರೈತರಿಗೆ ಅನುಕೂಲಕರವಾದ ಯಾವುದೇ ಅಂಶಗಳಿಲ್ಲ ಎಂದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಚಾಮರಾಜನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಹೇಳಿದ್ದಾರೆ.
ಇನ್ನು ಈಗ ಮಂಡಿಸಿರುವುದರಲ್ಲಿ ಅನುಷ್ಠಾನಗೊಳ್ಳುವುದೇ ಎಂಬ ಅನುಮಾನ ರೈತರಿಗಾಗಿದೆ. ಯಾಕೆಂದರೆ ಈ ಹಿಂದೆ ಇದ್ದಂತಹ ಕಿಸಾನ್ ಸಮ್ಮಾನ್ ಯೋಜನೆಯ ನಾಲ್ಕು ಸಾವಿರ ನೀಡುತ್ತಿದ್ದ ಹಣವನ್ನು ನಿಲ್ಲಿಸಿದ್ದಾರೆ ಮತ್ತು ರೈತರಿಗೆ ಅತಿವೃಷ್ಟಿ-ಅನಾವೃಷ್ಟಿಯಾದಾಗ ಕೊಡುತ್ತಿದ್ದ ಪರಿಹಾರದಲ್ಲಿ ಹೆಚ್ಚಿಗೆ ಮಾಡುವ ನಿರೀಕ್ಷೆ ಇತ್ತು, ಅದನ್ನು ಸಹ ಮಾಡಿಲ್ಲ.
ಪಕ್ಕದ ರಾಜ್ಯದ ತೆಲಂಗಾಣದಲ್ಲಿ ಅವರದೇ ಸರ್ಕಾರವಿದ್ದು ಅಲ್ಲಿ ರೈತರಿಗೆ ಬೆಳೆ ನಾಟಿಗೂ ಮುನ್ನ ಅವರಿಗೆ ಸಹಾಯವಾಗಿ ಒಂದು ಬೆಳೆಗೆ ಒಂದು ಎಕರೆಗೆ 10,000 ರೂ ಗಳನ್ನು ಸಹಾಯ ಧನವಾಗಿ ನೀಡುತ್ತಿದ್ದಾರೆ ಈ ಯೋಜನೆಯನ್ನು ನಿಮ್ಮ ಸರ್ಕಾರದಲ್ಲಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದೇವೆ ಇದನ್ನು ಸಹ ನಿರ್ಲಕ್ಷ್ಯ ಮಾಡಿದ್ದಾರೆ ಒಟ್ಟಾರೆಯಾಗಿ ರಾಜ್ಯದ ಜನರಿಗೆ ಬಣ್ಣ ಬಣ್ಣದ ಚಿಟ್ಟೆಯಂತಾಗಿದೆ ಇದು ಕೈಗೆ ಸಿಗುವುದಿಲ್ಲ ಬರೀ ಕಣ್ಣಿನಿಂದ ನೋಡಬೇಕಷ್ಟೆ.
16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ ಮಾಡಿರುವುದು ಸ್ವಾಗತ ಆದರೆ ಸರ್ಕಾರಿ ಶಾಲೆಗಳಲ್ಲಿ ಈಗಲೂ ಸಹ ಹೋಮ್ ವರ್ಕ್ ಅನ್ನು 7ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ತಂದೆ ತಾಯಿಯ ಮೊಬೈಲ್ ನ ವಾಟ್ಸಪ್ ಗೆ ಕಳುಹಿಸುತ್ತಾರೆ ಇದು ಎಷ್ಟು ಸರಿ ಮೊದಲು ಇದನ್ನು ಸರಿಪಡಿಸಬೇಕು ಅಲ್ಲವೇ ನಿಷೇಧ ಮಾಡುವುದಕ್ಕೆ ಮಾತ್ರ ಸೀಮಿತವಾಗಬಾರದು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
Related









