CRIMENEWSನಮ್ಮಜಿಲ್ಲೆ

ಹಾಸ್ಟೆಲ್‌ನಲ್ಲಿ 9ನೇ ತರಗತಿ ವಿದ್ಯಾರ್ಥಿಯಿಂದ 8 ಮಕ್ಕಳ ಮೇಲೆ ರಾಡ್‌ನಿಂದ ಭೀಕರ ಹಲ್ಲೆ, ಓರ್ವ ಮೃತ, 7 ಮಕ್ಕಳಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ಬಳ್ಳಾರಿ: ಖಾಸಗಿ ಶಾಲೆಯ ಹಾಸ್ಟೆಲ್‌ವೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಸಹಪಾಠಿ ವಿದ್ಯಾರ್ಥಿಗಳ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ ಪರಿಣಾಮ ಒಬ್ಬ ಬಾಲಕ ಮೃತಪಟ್ಟಿದ್ದು, ಏಳು ವಿದ್ಯಾರ್ಥಿಗಳಿಗೆ ಗಾಯ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಖಾಸಗಿ ಶಾಲೆಯ ಹಾಸ್ಟೆಲ್‌ವೊಂದರಲ್ಲಿ ಈ ಘಟನೆ ನಡೆದಿದ್ದು, ನಗರವನ್ನೇ ಬೆಚ್ಚಿ ಬೀಳಿಸುವಂತಿದೆ. ಕಬ್ಬಿಣದ ರಾಡ್‌ನಿಂದ ಬಲವಾಹಿ ಹೊಡೆದಿದ್ದರಿಂದ ಒಬ್ಬ ಬಾಲಕ ನರಳಾಡಿ ಅಸುನೀಗಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ಹಾಸ್ಟೆಲ್ ವಾರ್ಡನ್ ಮೇಲೆಯೂ ಈ ಬಾಲಕ ಹಲ್ಲೆ ಮಾಡಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಹಲ್ಲೆಗೊಳಗಾಗಿ ಗಾಯಗೊಂಡಿದ್ದ ಮಕ್ಕಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇತ್ತ ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತ ಬಾಲಕನ ಪಾಲಕರ ಅಕ್ರಂದನ ಮುಗಿಲು ಮುಟ್ಟಿದೆ. ಡ್ರಗ್ ಅಡಿಕ್ಟ್ ಆಗಿ ಕೊಲೆ ಮಾಡಿರಬಹುದು ಎಂದು ಮೃತನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಶಾಲಾ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ರಾಡ್‌ನಿಂದ ಹೊಡೆದಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹೇಳುತ್ತಿದೆ. ಆದರೆ, ಚಾಕುವಿನಿಂದ ಚುಚ್ಚಿರುವ ಅನುಮಾನ ಇದೆ. ಇಷ್ಟೊಂದು ಭಯಾನಕವಾಗಿ ಅಷ್ಟೂ ಜನರ ಮೇಲೆ ಹಲ್ಲೆ ಮಾಡೋದಕ್ಕೆ ಹೇಗೆ ಸಾಧ್ಯ? ಆರೋಪಿ ಬಾಲಕ ಡ್ರಗ್ ಅಡಿಕ್ಟ್ ಆಗಿರಬಹುದು ಎಂದು ಆರೋಪ ಮಾಡಿದ್ದಾರೆ.

ಈ ಸಂಬಂಧ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕರಾಗಿರುವುದರಿಂದ ಮುಂದಿನ ಕಾನೂನು ಕ್ರಮದ ಬಗ್ಗೆ ಪೊಲೀಸ್‌ ಅಧಿಕಾರಿಗಳು ಚರ್ಚಿಸಿ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC ನೌಕರರದ್ದು ಹಾವು ಸಾಯೊಲ್ಲ ಕೋಲು ಮುರಿಯೊಲ್ಲ ಎಂಬ ಸ್ಥಿತಿ: ಇಂದಿನ ರಾಜೀ ಸಂಧಾನ ಸಭೆ ಮತ್ತೆ ವಿಫಲ ಜೂ.10ಕ್ಕೆ ಮ... 11 ತಿಂಗಳ ವೇತನ ಹಿಂಬಾಕಿಯಲ್ಲಿ ವ್ಯತ್ಯಾಸದ ಅನುಮಾನ ಹಿನ್ನೆಲೆ ಜೂ.1ರಂದು KSRTC ಎಂಡಿ ಭೇಟಿಗೆ ನೌಕರರು ಸಜ್ಜು BPL ಕಾರ್ಡ್‌ದಾರರು ಮಾತ್ರ ಗೃಹಲಕ್ಷ್ಮಿ ಫಲಾನುಭವಿಗಳು ಆದರೆ, ಅರ್ಹತೆ ಮೀರಿದವರು ಎಂದರೆ ಯಾರು? ಸರ್ಕಾರವನ್ನು ಪ್ರಶ್ನಿಸ... ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಈ 2 ಯೋಜನಗೆಳು ಇನ್ನು ಮುಂದೆ ಸಿಗಲ್ಲ!? ಭಟ್ಕಳ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ ಒಂದೇ ಕುಟುಂಬದ 8 ಮಂದಿ ಮೃತ- ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಹೈ ಕೋರ್ಟ್‌ CJಗೆ ಪತ್ರ ಬರೆದ ನೌಕರರು: ಸಮಾನ ಕೆಲಸಕ್ಕೆ ಸಮಾನ ವೇತನ ಬೇಕು! ಸಾರಿಗೆ ನಿಗಮ ನೌಕರರಿಗೆ ನ್ಯಾಯ ಬೇಕು! ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿಗಾಗಿ ಪತ್ರ ಚಳವಳಿಗೆ ಮುಂದಾದ ಸಾರಿಗೆ ನೌಕರರು: ಹೈ ಕೋರ್ಟ್‌ ಸಿಜೆಗೆ ಲೆಟರ್ ಬರೆಯಲು ... ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ