ಬೆಂಗಳೂರು: ಕರ್ನಾಟಕದಲ್ಲಿ 2025̲ 26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು (ಏ.9) ಗುರುವಾರ ಅಧಿಕೃತವಾಗಿ ಪ್ರಕಟಗೊಂಡಿದೆ. ಈ ಫಲಿತಾಂಶದಲ್ಲಿ ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಪೂರ್ಣ ಮಾಹಿತಿಯನ್ನು ನಾವು ಕೊಟ್ಟಿದ್ದೇವೆ ನೋಡಿ.

* ಉಡುಪಿ – ಶೇಕಡಾ 93.90
* ದಕ್ಷಿಣ ಕನ್ನಡ – ಶೇಕಡಾ 93.57
* ಬೆಂಗಳೂರು ದಕ್ಷಿಣ – ಶೇಕಡಾ 85.36
* ಕೊಡಗು – ಶೇಕಡಾ 83.84
* ಬೆಂಗಳೂರು ಉತ್ತರ – ಶೇಕಡಾ 83.31
* ಉತ್ತರ ಕನ್ನಡ ಜಿಲ್ಲೆ – ಶೇಕಡಾ 82.93
* ಶಿವಮೊಗ್ಗ – ಶೇಕಡಾ 79.91
* ಬೆಂಗಳೂರು ಗ್ರಾಮಾಂತರ – ಶೇಕಡಾ 79.70
* ಚಿಕ್ಕಮಗಳೂರು – ಶೇಕಡಾ 79.56
* ಹಾಸನ – ಶೇಕಡಾ 77.56
* ಚಿಕ್ಕಬಳ್ಳಾಪುರ – ಶೇಕಡಾ 75.80
* ಮೈಸೂರು – ಶೇಕಡಾ 74.30
* ಚಾಮರಾಜನಗರ – ಶೇಕಡಾ 73.97
* ಮಂಡ್ಯ – ಶೇಕಡಾ 73.27
* ಬಾಗಲಕೋಟೆ – ಶೇಕಡಾ 72.83
* ಕೋಲಾರ – ಶೇಕಡಾ 72.45
* ಧಾರವಾಡ – ಶೇಕಡಾ 72.32
* ತುಮಕೂರು – ಶೇಕಡಾ 72.02
* ರಾಮನಗರ – ಶೇಕಡಾ 69.71
* ದಾವಣಗೆರೆ – ಶೇಕಡಾ 69.45
* ಹಾವೇರಿ – ಶೇಕಡಾ 76.56
* ಬೀದರ್ – ಶೇಕಡಾ 67.31
* ಕೊಪ್ಪಳ – ಶೇಕಡಾ 67.20
* ಚಿಕ್ಕೋಡಿ – ಶೇಕಡಾ 66.76
* ಗದಗ – ಶೇಕಡಾ 66.64
* ಬೆಳಗಾವಿ – ಶೇಕಡಾ 65.37
* ಬಳ್ಳಾರಿ – ಶೇಕಡಾ 64.41
* ಚಿತ್ರದುರ್ಗ – ಶೇಕಡಾ 59.87
* ವಿಜಯಪುರ – ಶೇಕಡಾ 58.81
* ರಾಯಚೂರು – ಶೇಕಡಾ 58.75
* ಕಲಬುರಗಿ – ಶೇಕಡಾ 55.70
* ಯಾದಗಿರಿ ಜಿಲ್ಲೆ ಶೇಕಡಾ 48.45
ಕರ್ನಾಟಕದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 18ರಿಂದ ಮಾರ್ಚ್ 17ರ ವರೆಗೆ ನಡೆದವು. ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 5,174 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ
* ವಿಜ್ಞಾನ (Science)- 2,92,645
* ವಾಣಿಜ್ಯ (Commerce) – 2,11,174
* ಆರ್ಟ್ಸ್ (Arts) – 1,42,982
Related










