11 ತಿಂಗಳ ವೇತನ ಹಿಂಬಾಕಿಯಲ್ಲಿ ವ್ಯತ್ಯಾಸದ ಅನುಮಾನ ಹಿನ್ನೆಲೆ ಜೂ.1ರಂದು KSRTC ಎಂಡಿ ಭೇಟಿಗೆ ನೌಕರರು ಸಜ್ಜು
ಹಿಂಬಾಕಿಯಲ್ಲಿ ನೌಕರರಿಗೆ ಆಗಿರುವ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಲು ಡಿಪೋಗಳಿಗೆ ಹೋಗುವ ನೌಕರರಿಗೆ ಸಿಬ್ಬಂದಿಗಳು ಮಾಹಿತಿ ನೀಡಬೇಕು ಎಂದು ಸೂಚನೆ ನೀಡುವಂತೆ ಮನವಿ ಮಾಡಲು ಬೆಂಗಳೂರಿನ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಗೇ ಹೋಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಆಗಬೇಕೆಂದು ಕೆಲ ನೌಕರರು ನಿರ್ಧರಿಸಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಇತ್ತೀಚೆಗೆ ಅವರವರ ಬ್ಯಾಂಕ್ ಖಾತೆಗಳಿಗೆ ಹಾಕಿರುವ ಶೇ.15ರಷ್ಟು ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ನೌಕರರು ಅಸಮಾಧಾನಗೊಂಡಿದ್ದಾರೆ.

ಅಲ್ಲದೆ, ಈ ವ್ಯತ್ಯಾಸ ಆಗಿರುವುದರ ಬಗ್ಗೆ ಸ್ಪಷ್ಟನೆಕೊಡಿ ಎಂದು ಡಿಪೋಗಳಲ್ಲಿನ ಲೆಕ್ಕಪತ್ರ ಶಾಖೆ (ADM) ವಿಭಾಗದಲ್ಲಿ ನೌಕರರು ಕೇಳುತ್ತಿದ್ದಾರೆ. ಆದರೆ, ಇಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಅವರು ಸರಿಯಾದ ಲೆಕ್ಕ ಕೊಡದೆ ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಹೀಗಾಗಿ ಈ ಹಿಂಬಾಕಿಯಲ್ಲಿ ನೌಕರರಿಗೆ ಆಗಿರುವ ವ್ಯತ್ಯಾಸದ ಬಗ್ಗೆ ತಿಳಿದುಕೊಳ್ಳಲು ಡಿಪೋಗಳಿಗೆ ಹೋಗುವ ನೌಕರರಿಗೆ ಸಿಬ್ಬಂದಿಗಳು ಮಾಹಿತಿ ನೀಡಬೇಕು ಎಂದು ಸೂಚನೆ ನೀಡುವಂತೆ ಮನವಿ ಮಾಡಲು ಬೆಂಗಳೂರಿನ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಗೇ ಹೋಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಆಗಬೇಕೆಂದು ಕೆಲ ನೌಕರರು ನಿರ್ಧರಿಸಿದ್ದಾರೆ.
ಜೂನ್ 1ರ ಸೋಮವಾರ ಬೆಳಗ್ಗೆ 11ಗಂಟೆಗೆ ಕೇಂದ್ರ ಕಚೇರಿಗೆ ಬನ್ನಿ ಎಂದು ಕೆಲವರು ವಿನಂತಿ ಮಾಡಿದ್ದಾರೆ. ಇನ್ನು ಕೆಲವರು ಎಂಡಿ ಅವರನ್ನು ಭೇಟಿ ಮಾಡುವುದಕ್ಕಿಂತ ನಿಮ್ಮ ಡಿಪೋಗಳಲ್ಲೇ ಇರುವ ಎಡಿಎಂ ವಿಭಾಗದಲ್ಲಿ ನಿಮಗೆ ಹಿಂಬಾಕಿ ನೀಡಿರುವ ಬಗ್ಗೆ ನಿಮ್ಮ ವಾಟ್ಸ್ಆಪ್ಗೆ ಮಾಹಿತಿ ಹಾಕಿಸಿಕೊಳ್ಳಿ ಇದರಿಂದ ಎ4 ಶೀಟ್ ತೆಗೆಯುವುದು ತಪ್ಪುದೆ ಎಂಬ ಸಲಹೆ ನೀಡಿದ್ದಾರೆ.
ಆದರೆ, ಎಡಿಎಂ ವಿಭಾಗದಲ್ಲಿ ನೌಕರರಿಗೆ ಅಲ್ಲಿ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು ಈ ಬಗ್ಗೆ ಲೆಕ್ಕಪತ್ರ ಶಾಖೆಯ ಮುಖ್ಯ ಲೆಕ್ಕಾಧಿಕಾರಿಗಳು ಮಾಹಿತಿ ನೀಡಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.
Related









