ಬೆಂಗಳೂರು: ಕಾರ್ತಿಕ ಹುಣ್ಣಿಮೆಯ ದಿನವಾದ ಇಂದು ವರ್ಷದ ಕೊನೆಯ ಚಂದ್ರ ಗ್ರಹಣ ನಡೆಯಲಿದೆ. ನಡು ಮಧ್ಯಾಹ್ನ ಗ್ರಹಣ ಸ್ಪರ್ಶ ಕಾಲ ಶುರುವಾಗಲಿದ್ದು, ಸೂರ್ಯ ಅಸ್ತಮಿಸುವ ಮುನ್ನವೇ ಗ್ರಹಣದ ಮೋಕ್ಷಕಾಲ ಸಂಭವಿಸುತ್ತದೆ. ಹೀಗಾಗಿ ಈ ಗ್ರಹಣದಲ್ಲಿ ಚಂದ್ರ ಎಲ್ಲಿಯೂ ಕಪ್ಪು ಆಗುವುದಿಲ್ಲ.
ಭಾರತ ದೇಶದ ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಚಂದ್ರ ಗ್ರಹಣ ಗೋಚರವಾಗಲಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಜಾರ್ಖಂಡ್, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಈಶಾನ್ಯ ರಾಜ್ಯಗಳ ಮಧ್ಯಭಾಗದಲ್ಲಿ ಗೋಚರಿಸಲಿದೆ.
ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಗ್ರಹಣ ಗೋಚರವಾಗುವುದಿಲ್ಲ. ಪಾಕಿಸ್ತಾನ, ಇರಾನ್, ಇರಾಕ್, ಅಫ್ಘಾನಿಸ್ತಾನ, ಅಮೆರಿಕ, ಇಂಗ್ಲೆಂಡ್, ಐರ್ಲೆಂಡ್, ನಾರ್ವೇ, ಸ್ವೀಡನ್, ಫಿನ್‍ಲ್ಯಾಂಡ್‍ನಲ್ಲಿ ಗೋಚರಿಸಲಿದೆ.
ಯಾವ ಸಮಯದಲ್ಲಿ ಏನು?
ಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 1 ಗಂಟೆ 4 ನಿಮಿಷ
ಗ್ರಹಣ ಮಧ್ಯಕಾಲ – ಮಧ್ಯಾಹ್ನ 3 ಗಂಟೆ 13 ನಿಮಿಷ
ಗ್ರಹಣ ಮೋಕ್ಷಕಾಲ – ಸಂಜೆ 5 ಗಂಟೆ 22 ನಿಮಿಷ
ಚಂದ್ರ ಗ್ರಹಣದ ಅವಧಿ – 4 ಗಂಟೆ 21 ನಿಮಿಷ
ಈ ದಿನ ಚಂದ್ರಗ್ರಹಣ ಸಂಪೂರ್ಣ ಗ್ರಹಣವಲ್ಲ. ಹೀಗಾಗಿ ಈ ಗ್ರಹಣವನ್ನು ಋಣಾತ್ಮಕ ಎಂದು ಪರಿಗಣಿಸುವುದಿಲ್ಲ. ಹೀಗಾಗಿ, ಯಾವುದೇ ದೇಗುಲಗಳನ್ನು ಮುಚ್ಚುವುದಿಲ್ಲ. ಎಂದಿನಂತೆ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.