NEWSನಮ್ಮರಾಜ್ಯರಾಜಕೀಯ

ರಾಜ್ಯದಲ್ಲಿ ಗ್ರಾಪಂ ಚುನಾವಣೆ ಫಲಿತಾಂಶ: ಎಲ್ಲೆಲ್ಲಿ ಯಾರ‍್ಯಾರ ಗೆಲುವು

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕರ್ನಾಟಕದ 5,728 ಗ್ರಾಮ ಪಂಚಾಯಿತಿಗಳಿಗೆ ಒಟ್ಟು 2 ಹಂತದಲ್ಲಿ ಮತದಾನ ನಡೆದಿತ್ತು. ಚುನಾವಣೆಯ ಮತ ಎಣಿಕೆ ಜಿಲ್ಲಾ ಮತ್ತು ತಾಲೂಕು ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಸಂಜೆಯ ವೇಳೆಗೆ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ.

ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಕೆ ಮಾಡಲಾಗಿದ್ದು, ಉಳಿದ ಜಿಲ್ಲೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗಿದೆ. ಆದ್ದರಿಂದ, ಫಲಿತಾಂಶ ವಿಳಂಬವಾಗಲಿದೆ.

ಮೊದಲ ಹಂತದಲ್ಲಿ ಒಟ್ಟು 117 ತಾಲೂಕುಗಳ 3019 ಗ್ರಾಮ ಪಂಚಾಯಿತಿಗಳ 43,238 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1,17,383 ಅಭ್ಯರ್ಥಿಗಳು ಕಣದಲ್ಲಿದ್ದರು. ಎರಡನೇ ಹಂತದಲ್ಲಿ 109 ತಾಲೂಕುಗಳ 2,709 ಗ್ರಾಮ ಪಂಚಾಯಿತಿಗಳ 39,378 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1,05,431 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಎಲ್ಲೆಲ್ಲಿ ಅಭ್ಯರ್ಥಿಳ ಗೆಲುವು
ಕೊಡಗು ಜಿಲ್ಲೆಯ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮದ್ರಿರ ಗಿರೀಶ್ ಗಣಪತಿ 217 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಕಡೇಮಾಡ ವಿಜು ಕರುಂಬಯ್ಯ 201 ಮತ ಪಡೆದು ಸೋಲು ಕಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ 25 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ 14 ಅಭ್ಯರ್ಥಿಗಳು ಗೆದ್ದಿದ್ದಾರೆ. ಆಯಾ ಪಕ್ಷಗಳ ಬೆಂಬಲಿಗರು ಮತ ಎಣಿಕೆ ಕೇಂದ್ರದಲ್ಲಿ ಜಮಾಯಿಸಿದ್ದು, ವಿಜಯೋತ್ಸವಕ್ಕೆ ಸಜ್ಜಾಗಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ಮತ ಎಣಿಕೆ ಕೇಂದ್ರದ ಬಳಿ ಸಾವಿರಾರು ಜನ ಸೇರಿದ್ದು, ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿದ್ದಾರೆ. ಮಾಲೂರು ತಹಸೀಲ್ದಾರ್ ಮಂಜುನಾಥ್ ಮನವಿ ಮಾಡಿದ್ರು ಲೆಕ್ಕಕ್ಕೆ ಇಲ್ಲದಂತೆ ಜನ ಸೇರಿದ್ದಾರೆ.

ಬೆಳಗಾವಿಯ ಮತ‌ ಎಣಿಕೆ ಕೇಂದ್ರದ ಹೊರಗೆ ನಡೆದ ಘಟನೆ. ಮುತಗಾ ಗ್ರಾಪಂ ವಾರ್ಡ್ ನಂಬರ್ 4ರಲ್ಲಿ ಶ್ಯಾಮ್ ಮುತಗೇಕರ್ ಗೆಲುವು. ಕಳೆದ 20 ವರ್ಷದಿಂದ ಗ್ರಾಪಂ ಚುನಾವಣೆ ಗೆಲ್ಲಲು ಪ್ರಯತ್ನಿಸಿದ್ದ ಶ್ಯಾಮ್. 36 ಮತಗಳ ಅಂತರದಿಂದ ಗೆಲುವು ಸಾಧಿಸಿದ ಶ್ಯಾಮ್ ಮುತಗೇಕರ್. ಗೆಲುವಿನ ಖುಷಿಯಲ್ಲಿ ಅವರ ಪತ್ನಿ, ಮಕ್ಕಳಿಂದ ಆನಂದ ಬಾಷ್ಪ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ಈರಾಪುರ ವಾರ್ಡ್ ನ ತಿಮ್ಮಣ್ಣ ಭಟ್ಟ, ನಂದೊಳ್ಳಿ ಗ್ರಾಪಂ ಮಾಗೋಡ ವಾರ್ಡ್ ನ ಕಮಲಾ ಸಿದ್ದಿ, ಮದನೂರು ಗ್ರಾಮ ಪಂಚಾಯಿತಿಯ ಕಳಸೂರ ವಾರ್ಡ್ ನ ರೇಷ್ಮಾ ದೇಸಾಯಿ, ಉಮ್ಮಚಗಿ ಗ್ರಾಮ ಪಂಚಾಯತಿಯ ಉಮ್ಮಚಗಿಯ ಗ.ರಾ.ಭಟ್ಟ, ವಜ್ರಳ್ಳಿ ಗ್ರಾಮ ಪಂಚಾಯತಿ ಬೀಗಾರದ ಗಂಗಾ ಕೋಮಾರ, ಹೊನಗದ್ದೆ ವಾರ್ಡ್ ನ ಭಗೀರಥ ನಾಯ್ಕ, ಇಡಗುಂದಿ ಗ್ರಾಮ ಪಂಚಾಯತಿ ಹಂಸನಗದ್ದೆ ವಾರ್ಡ್ ನ ವಿಶ್ವೇಶ್ವರ ಏಕಾನ, ನಂದೊಳ್ಳಿ ಗ್ರಾಮ ಪಂಚಾಯತಿ ಸೂಳಗಾರ ವಾರ್ಡ್ ನ ಟಿ.ಆರ್.ಹೆಗಡೆ ವಿಜೇತರಾಗಿದ್ದಾರೆ.

ಹೊಸಪೇಟೆ ತಾಲೂಕು ಚಿಲಕನಹಟ್ಟಿ ಪಂಚಾಯಿತಿಯ ತಾಳೆಬಸಾಪುರ ತಾಂಡದಲ್ಲಿ ಶೈಲಜಾ ಬಾಯಿ ವಿರುದ್ಧ ಒಂದು ಮತದಿಂದ ಗೆದ್ದ ಹಂಪಿ ಬಾಯಿ. 191 ಹಂಪಿಬಾಯಿ ಪಡೆದರೆ, ಶೈಲಜಾ 190 ಮತಗಳು ಪಡೆದಿದ್ದಾರೆ.

ಸಾಲ್ಕೋಡ್ ಗ್ರಾಮ ಪಂಚಾಯಿತಿ ಕೆರೆಕೋಣ ವಾರ್ಡ್ ನ ಗಣಪತಿ ಭಟ್ ಹಾಗೂ ಆಶಾ ನಾಯಕ್ ಜಯ ಗಳಿಸಿದ್ದಾರೆ. ಭಟ್ಕಳ ತಾಲೂಕು ಬೈಲೂರು ಗ್ರಾಮ ಪಂಚಾಯಿತಿ ಮಾರ್ಕಂಡೇಶ್ವರ ವಾರ್ಡ್ ನ ಗಣಪತಿ ನಾಯ್ಕ ಗೆಲುವು.

ಹೊನ್ನಾವರ ತಾಲೂಕು ಹಳದಿಪುರ ಪಂಚಾಯಿತಿ ಹಂಸಳ್ಳಿ ವಾರ್ಡ್ ನ ಸತೀಶ ಹೆಬ್ಬಾರ್ 400 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇವರು ಕಾರ್ಮಿಕ ಸಚಿವ ಶಿವಾರಾಮ ಹೆಬ್ಬಾರ್ ಅಣ್ಣನ ಮಗ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ (ಗರ್ತಿಕೆರೆ)ಯಲ್ಲಿ ಬಿಜೆಪಿ ಬೆಂಬಲಿತ ಸಚಿನ್ ಗೌಡ ಎದುರಾಳಿ ರಮೇಶ್ ವಿರುದ್ಧ 38 ಮತಗಳ ಗೆಲುವು ಸಾಧಿಸಿದ್ದಾರೆ. ಒಟ್ಟು 379 ಮತ ಚಲಾವಣೆಯಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಾನಳ್ಳಿ ಗ್ರಾಮ ಪಂಚಾಯಿತಿ ಗೋಣಸರ ವಾರ್ಡ್ ವೀಣಾ ಗೌಡ ತಿರಸ್ಕೃತ ಮತ ಎಣಿಕೆಯಲ್ಲಿ ಗೆಲುವು ಕಂಡರು. ಹಿಂದುಳಿದ ವರ್ಗ ಮಹಿಳೆ ಮೀಸಲು ಸ್ಥಾನಕ್ಕೆ ವೀಣಾ ಗೌಡ ಮತ್ತು ಪಾರ್ವತಿ ಗೌಡ ಅಭ್ಯರ್ಥಿಗಳಾಗಿದ್ದು ಇಬ್ಬರಿಗೂ 127 ಮತ ಬಂದಿತ್ತು. ತಿರಸ್ಕೃತಗೊಂಡ ಮತಗಳ ಎಣಿಕೆ ವೇಳೆ ವೀಣಾ ಅವರ ಆಟೋ ಚಿಹ್ನೆಗೆ ಮತ ಮುದ್ರೆಯ ಅಲ್ಪಭಾಗ ತಾಕಿದ್ದ ಮತವೊಂದು ಪತ್ತೆಯಾಗಿದ್ದು, ಅವರನ್ನು ವಿಜೇತರು ಎಂದು ಘೋಷಣೆ ಮಾಡಲಾಗಿದೆ.

ಕುಮಟಾ ತಾಲೂಕು ಗೋಕರ್ಣ ಪಂಚಾಯಿತಿ ವ್ಯಾಪ್ತಿಯ ಕೋಟಿತೀರ್ಥ ವಾರ್ಡಿನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಭಾಕರ ಭಟ್ಟ ಸತತ 6ನೇ ಬಾರಿಗೆ ಜಯಗಳಿಸಿದ್ದಾರೆ. ಅಲ್ಲದೇ ನಾಗರತ್ನಾ ಹಾವಗೋಡಿ, ವನಿತಾ ಗೌಡ ಕೂಡ ಜಯಗಳಿಸಿದ್ದಾರೆ.

ಭಟ್ಕಳ ತಾಲೂಕು ಮಾವಳ್ಳಿ 2 ಗ್ರಾಮ ಪಂಚಾಯಿತಿಯ ನಾಡವರಕೇರಿ ವಾರ್ಡ್ ನ ಮಹೇಶ ನಾಯ್ಕಗೆ 252 ಮತಗಳಿಂದ, ಕಮಲಾ ಸೀತಾರಾಮ ದೇವಾಡಿಗ 183 ಮತಗಳಿಂದ ಗೆಲುವು

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಿದರಕೆರೆ ಕಾವಲ್‌ ಕ್ಷೇತ್ರದಲ್ಲಿ ಗೌರಮ್ಮ 1 ಮತಗಳ ಅಂತರದಿಂದ ಗೆದ್ದಿದ್ದಾರೆ. ಗೌರಮ್ಮ ಪ್ರತಿಸ್ಪರ್ಧಿ ಮಂಜುಳಾ 114 ಮತಗಳನ್ನು ಪಡೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿ ಭೈರುಂಬೆ ವಾರ್ಡ್‌ನಲ್ಲಿ ಎಂ. ಟೆಕ್ ಪದವೀಧರ ಕಿರಣ್ ಭಟ್ಟ ಗೆಲುವು ಸಾಧಿಸಿದ್ದಾರೆ. ಭಟ್ಕಳ ತಾಲೂಕು ಮಾವಳ್ಳಿ 2 ಗ್ರಾಮ ಪಂಚಾಯಿತಿಯ ನಾಡವರಕೇರಿ ವಾರ್ಡ್ ನ ಮಹೇಶ ನಾಯ್ಕಗೆ 252 ಮತಗಳಿಂದ, ಕಮಲಾ ಸೀತಾರಾಮ ದೇವಾಡಿಗ 183 ಮತಗಳಿಂದ ಗೆಲುವು.

ಮಂಗಳೂರಿನ ತಲಪಾಡಿ 3ನೇ ವಾರ್ಡ್‌ನ ಇಸ್ಮಾಯಿಲ್ ಶಾಫಿ ವಿರುದ್ಧ ಸುಮಾಯ್ಯ ಗೆಲುವು ಸಾಧಿಸಿದ್ದಾರೆ. ಭಟ್ಕಳ ತಾಲೂಕು ಹಾಡವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಕ್ಕೋಡ್ ವಾರ್ಡ್ ಅಭ್ಯರ್ಥಿ ನಾರಾಯಣ ಮರಾಠಿ ಮೂರು ಮತಗಳ ಅಂತರದಲ್ಲಿ, ಕಾಯ್ಕಿಣಿ ಪಂಚಾಯಿತಿ ವ್ಯಾಪ್ತಿಯ ಶಬರೀಷ್230 ಮತಗಳ ಅಂತರದಲ್ಲಿ, ಕೋಣಾರ್ ಪಂಚಾಯಿತಿ ವ್ಯಾಪ್ತಿಯ ಹದ್ಲೂರ್ ವಾರ್ಡಿನ ನಾಗಪ್ಪ ಗೊಂಡ 11 ಮತಗಳ ಅಂತರದಲ್ಲಿ ವಿಜಯ ಸಾಧಿಸಿದ್ದಾರೆ.

ಶಿರಸಿ ತಾಲೂಕು ಹುಣಸೆಕೊಪ್ಪ ಗ್ರಾಮ ಪಂಚಾಯಿತಿ ಕಳವೆ ವಾರ್ಡ್‌ನ ಮಂಜುನಾಥ್ ವಿ.ಹೆಗಡೆಗೆ 46 ಮತಗಳ ಅಂತರದಿಂದ ಗೆಲುವು (ಪಡೆದ ಮತ 146) ವಾನಳ್ಳಿ ಪಂಚಾಯಿತಿ ಮಸ್ಕಿ ವಾರ್ಡ್‌ನಿಂದ 172 ಮತಗಳನ್ನು ಪಡೆದ ಗೀತಾ ಸಿದ್ದಿಗೆ ಗೆಲುವು ಬೈರುಂಬೆ ಗ್ರಾಮ ಪಂಚಾಯತಿ ಬೈರುಂಬೆ ವಾರ್ಡ್‌ನಿಂದ ಕಿರಣ್ ಹೆಗಡೆಗೆ 104 ಮತಗಳ ಅಂತರದಿಂದ ಗೆಲುವು (ಪಡೆದ ಮತ 197).

ಹಿರಿಯೂರು ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಬಿಜೆಪಿ 4, ಕಾಂಗ್ರೆಸ್ 4, ಜೆಡಿಎಸ್ 2, ಇತರೆ 5 ಕ್ಷೇತ್ರಗಳಲ್ಲಿ ಗೆಲುವು. ಚಿತ್ರದುರ್ಗದ 1 ಸ್ಥಾನದಲ್ಲಿ ಬಿಜೆಪಿ ಜಯಗಳಿಸಿದೆ. ಕಾರವಾರ ತಾಲೂಕು ವೈಲವಾಡ ಪಂಚಾಯಿತಿ ಖರ್ಗೆಜೂಗಾ ವಾರ್ಡ್ ನಲ್ಲಿ ರಾಜೇಶ್ ನಾಯ್ಕ, ಮೂಡಗೇರಿ ಗ್ರಾಮ ಪಂಚಾಯತಿಯ ಅಂಗಡಿ ವಾರ್ಡ್ ನಲ್ಲಿ ಸುರೇಂದ್ರ ಗಾಂವಕರ್, ಮಲ್ಲಾಪುರ ಗ್ರಾಮ ಪಂಚಾಯತಿಯಲ್ಲಿ ಕೈಗಾ ವಾರ್ಡ್ ನ ಸುಜಾತ ಕುಣಬಿ, ಕುಚೇಗಾರ್ ವಾರ್ಡ್ ನಲ್ಲಿ ಸಂತೋಷ ದೇವಳಿಗೆ ಗೆಲುವು.

ಹೊನ್ನಾವರ ತಾಲೂಕು ನಗರಬಸ್ತಿಕೇರಿ ಪಂಚಾಯಿತಿಯ ಹಾಡಗೇರಿ ವಾರ್ಡ್ ನ ಶಿವು ಮರಾಠಿ 16 ಮತಗಳ ಅಂತರದಲ್ಲಿ ಗೆಲುವು (ಪಡೆದ ಮತ 146). ಅಂಕೋಲಾ ತಾಲೂಕು ಸುಂಕಸಾಳ ಪಂಚಾಯಿತಿ ರಾಮನಗುಳಿ ವಾರ್ಡ್ ನಲ್ಲಿ ಉಮಾ ಸಿದ್ದಿ 23 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ (ಪಡೆದ ಮತಗಳು 100). ಸುಂಕಸಾಳ ಪಂಚಾಯಿತಿಯ ಹೆಬ್ಬುಳ ವಾರ್ಡ್ ನಲ್ಲಿ ಪ್ರವೀಣ ನಾಯರ 107 ಮತಗಳ ಅಂತರದಲ್ಲಿ ಗೆಲುವು (ಪಡೆದ ಮತ 187).

ಕಾರವಾರ ತಾಲೂಕಿನ ಗ್ರಾಮ ಪಂಚಾಯಿತಿ ಫಲಿತಾಂಶ ಕೆರವಡಿ ಗ್ರಾಪಂನ ಕೆರವಡಿ ವಾರ್ಡ್ ನಲ್ಲಿ ದೀಪಾ ನಾಯ್ಕ 90 ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ (ಪಡೆದ ಮತ 253) ಖಾತರವಾಡದಲ್ಲಿ ವಾರ್ಡ್ ರಾಮಚಂದ್ರ ನಾಯ್ಕ 28 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ (ಪಡೆದ ಮತ 195). ಖಾತರವಾಡದಲ್ಲಿ ಸುಮಂಗಲಾ ಕಾಂಬ್ಳೆ 41 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ (ಪಡೆದ ಮತ 144).

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತ 1, ಬಿಜೆಪಿ ಬೆಂಬಲಿತ 4 ಅಭ್ಯರ್ಥಿಗಳು ಇದುವರೆಗೂ ಗೆಲುವು ಸಾಧಿಸಿದ್ದಾರೆ. ಬ್ರಹ್ಮಾವರದ ಯಡ್ತಾಡಿ 1ನೇ ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತ ಅಮೃತ ಪೂಜಾರಿ ಪ್ರತಿಸ್ಪರ್ಧಿ ರತ್ನಾಕರ ಪೂಜಾರಿ ವಿರುದ್ಧ ಗೆದ್ದಿದ್ದಾರೆ. 553 ಮತಗಳು ಚಲಾವಣೆಗೊಂಡಿದ್ದು, ಅಮೃತ ಪೂಜಾರಿ 321 ಮತಗಳಿಸಿದ್ದಾರೆ. ಬ್ರಹ್ಮಾವರದ ಯಡ್ತಾಡಿ 2ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಲೋಕೇಶ್ ನಾಯಕ್ ಪ್ರತಿಸ್ಪರ್ಧಿ ರಾಮನಾಯಕ್‌ನನ್ನು ಸೋಲಿಸಿದ್ದಾರೆ. 80 ಮತಗಳ ಅಂತರದಿಂದ ಲೋಕೇಶ್ ನಾಯಕ್ ಗೆಲುವು ಕಂಡಿದ್ದಾರೆ.

Leave a Reply

error: Content is protected !!
LATEST
ಬಿಬಿಎಂಪಿ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಮೃತ KSRTC ಚಾ.ನಗರ ವಿ.ಕಾರ್ಯಾಗಾರದಿಂದ ಅಕ್ರಮವಾಗಿ ಖಾಸಗಿಯವರಿಗೆ ರವಾನೆಯಾದ ಇಂಜಿನ್‌ ಟ್ರಾಲಿ, ಸ್ಟ್ಯಾಂಡ್‌ ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!!