CRIMENEWSನಮ್ಮಜಿಲ್ಲೆ

SIRಗೆ ತೆರಳುತ್ತಿದ್ದ VAO ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ: ಗ್ರಾಮಾಡಳಿತ ಲೆಕ್ಕಾಧಿಕಾರಿ ಸ್ಥಿತಿ ಗಂಭೀರ- ಆಸ್ಪತ್ರೆ ಮುಂದೆ ಪ್ರತಿಭಟನೆ

ಜಿಲ್ಲಾಧಿಕಾರಿಗಳ ವಿರುದ್ಧ ಭಾವನಾ ಪೋಷಕರು ಆಕ್ರೋಶ ಹೊರಹಾಕಿದ್ದು, ಭಾವನ ಅವರ ತಾಯಿ, ರಾತ್ರಿ 10 ಗಂಟೆವರೆಗೆ ಮೀಟಿಂಗ್ ಮಾಡುತ್ತೀರಿ. ಬೆಳಗ್ಗೆ 6 ಗಂಟೆಗೆ ಮತ್ತೆ ಕೆಲಸಕ್ಕೆ ಕರೆಯುತ್ತೀರಿ. ನಿಮಗೆ ರ‍್ಯಾಂಕಿಂಗ್ ಬೇಕು, ಪ್ರೊಮೋಷನ್ ಬೇಕು. ಅದಕ್ಕೆ ನಮ್ಮ ಮಕ್ಕಳನ್ನು ಬಲಿ ಕೊಡುತ್ತೀರಾ ಎಂದು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೊಂದವರಿಗೆ ಹೆಗಲು

ತುಮಕೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆಗೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಆಡಳಿತ ಲೆಕ್ಕಾಧಿಕಾರಿ (VAO) ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಜಿಲ್ಲೆಯ ಗೂಳೂರಿನಲ್ಲಿ ನಡೆದಿದೆ.

ಈ ಅಪಘಾತದಲ್ಲಿ ಭಾವನಾ (26) ಗಂಭೀರ ಗಾಯಗೊಂಡಿರುವ ಗ್ರಾಮ ಆಡಳಿತ ಲೆಕ್ಕಾಧಿಕಾರಿ. ಗೂಳೂರು ಹೋಬಳಿಯ ಮನೆ ಮನೆಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಭಾವನಾಗೆ ಸಿದ್ದಗಂಗಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ಆಸ್ಪತ್ರೆ ಬಳಿ ಜಮಾಯಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ: ಸಿದ್ದಗಂಗಾ ಆಸ್ಪತ್ರೆ ಬಳಿ ಜಮಾಯಿಸಿರುವ ಗ್ರಾಮಾಡಳಿತ ಲೆಕ್ಕಾಧಿಕಾರಿಗಳು ಬೇಗ ಬೇಗ ಎಸ್‌ಐಆರ್ ಮುಗಿಸುವಂತೆ ಒತ್ತಡ ಹಾಕುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭೇಟಿ ನೀಡಿದ್ದು, ಗ್ರಾಮ ಲೆಕ್ಕಾಧಿಕಾರಿಗಳ ಅಹವಾಲು ಆಲಿಸಿದ್ದಾರೆ.

ಇನ್ನು, ಜಿಲ್ಲಾಧಿಕಾರಿಗಳ ವಿರುದ್ಧ ಭಾವನಾ ಪೋಷಕರು ಆಕ್ರೋಶ ಹೊರಹಾಕಿದ್ದು, ಭಾವನ ಅವರ ತಾಯಿ ಮಾತನಾಡಿ, ರಾತ್ರಿ 10 ಗಂಟೆವರೆಗೆ ಮೀಟಿಂಗ್ ಮಾಡುತ್ತೀರಿ. ಬೆಳಗ್ಗೆ 6 ಗಂಟೆಗೆ ಮತ್ತೆ ಕೆಲಸಕ್ಕೆ ಕರೆಯುತ್ತೀರಿ. ನಿಮಗೆ ರ‍್ಯಾಂಕಿಂಗ್ ಬೇಕು, ಪ್ರೊಮೋಷನ್ ಬೇಕು. ಅದಕ್ಕೆ ನಮ್ಮ ಮಕ್ಕಳನ್ನು ಬಲಿ ಕೊಡುತ್ತೀರಾ ಎಂದು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ನಡುವೆ ಅಪಘಾತದಿಂದ ಭಾರಿ ಪೆಟ್ಟಾಗಿದ್ದು ಗಂಭೀರ ಗಾಯಗೊಂಡಿರುವ ಭಾವನಾ ಅವರ ಸ್ಥಿತಿ ಗಂಭೀರವಾಗಿದೆ. ವೈದ್ಯರು 48 ಗಂಟೆವರೆಗೂ ಏನನ್ನು ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.

Deva
the authorDeva

Leave a Reply

error: Content is protected !!
Latest news
SIRಗೆ ತೆರಳುತ್ತಿದ್ದ VAO ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ: ಗ್ರಾಮಾಡಳಿತ ಲೆಕ್ಕಾಧಿಕಾರಿ ಸ್ಥಿತಿ ಗಂಭೀರ- ಆಸ್ಪತ್ರೆ ... KSRTC: ನಾಲ್ಕೂ ನಿಗಮಗಳ ಬಸ್‌ ಕಿಟಕಿಗಳಿಗೆ ರಾಡ್‌ ಅಳವಡಿಸಿ: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಮೋಹನ್ ಕುಮಾರ್ ದಾನಪ... BMTC: ಕೆ.ಆರ್.ಸರ್ಕಲ್ ಬಳಿ ಹಿಂದಿನಿಂದ ವಜ್ರ ಬಸ್‌ಗೆ ಡಿಕ್ಕಿ ಹೊಡೆದ ಎಲೆಕ್ಟ್ರಿಕ್‌ ಬಸ್‌: 14ಕ್ಕೂ ಹೆಚ್ಚು ಮಂದಿಗೆ ಗ... ಬೆಂಗಳೂರು: ಕ್ಷಣಾರ್ಧದಲ್ಲಿ ಹೊತ್ತಿಉರಿದ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌: ಅದೃಷ್ಟವಶಾತ್‌ ಪ್ರಯಾಣಿಕರು ಪಾರು ಗೃಹ ಜ್ಯೋತಿಗೆ ಜಾತಿ ವಿವರ ನೀಡುವುದು ಕಡ್ಡಾಯವಲ್ಲ: ಸ್ಪಷ್ಟನೆ ನೀಡಿದ ಬೆಸ್ಕಾಂ 4ಸಾರಿಗೆ ನಿಗಮಗಳ ನೌಕರರಿಗೆ ಶೇ.12.5ರಷ್ಟು ಮೂಲ ವೇತನ ಹೆಚ್ಚಳ ಜುಲೈ ವೇತನದಲ್ಲಿ ಅನುಷ್ಠಾನ: KSRTC ಎಂಡಿ ಅಧಿಕೃತ ಆದೇಶ ಹೊಸ EPS ಪಿಂಚಣಿ ಯೋಜನೆ ಜಾರಿ: ಕನಿಷ್ಠ ಪಿಂಚಣಿ 7500ರೂ. ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆ- ಸಿಕ್ಕಿದ್ದು ಅದೇ ಒಂ... ಬಾಡಿಗೆದಾರರಿಗೆ ಗೃಹಜ್ಯೋತಿ' ತಂದ ಟೆನ್ಷನ್​: ಇನ್ನು ಮುಂದೆ ಸಿಗಲ್ವಾ ಫ್ರೀ ಕರೆಂಟ್‌? ಜುಲೈ: ಕರೆಂಟ್‌ ಮೀಟರ್ ರೀಡಿಂಗ್ ಇರಲ್ಲ -ಸರಾಸರಿ ಬಿಲ್‌ SMS ಮೂಲಕ ಬರುತ್ತದೆ! KSRTC: 'ಸಾರಿಗೆ ಮಿತ್ರ' ಆಪ್ ದುರುಪಯೋಗ- ಕರ್ತವ್ಯಕ್ಕೆ ಹಾಜರಾಗದೆ ಸಹೋದ್ಯೋಗಿಗೆ ಫೋನ್‌ ಕೊಟ್ಟು ಹಾಜರಿ ಪಡೆಯುತ್ತಿರುವ...