ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ಈ ಜಗತ್ತಿನಲ್ಲಿ ದೇವರೊಬ್ಬನೇ, ಆದರೇ ಇಂದು ನಮ್ಮ ಸಮಾಜದಲ್ಲಿ ನಾನು ನೀನೆಂಬ ಶ್ರೇಷ್ಠ ಕನಿಷ್ಠವೆಂಬ ಜಿದ್ದಿಗೆ ಬಿದ್ದು ಮನುಜ ಜಾತಿಗೆ ಕಳಂಕವನ್ನುಂಟು ಮಾಡುತ್ತಿದ್ದೇವೆ ಎಂದು ಸಂಚಾರಿ ಯೋಗಿಗಳಾದ ಶ್ರೀ ನಿರಂಜನ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಾ.2ರಿಂದ 13ರವರೆಗೆ ಪಟ್ಟಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಆಯೋಜಿಸಿರುವ ಐದನೇ ಶರಣ ಸಾಹಿತ್ಯ ಸಮ್ಮೇಳನ ನಿಮಿತ್ಯ ಹಮ್ಮಿಕೊಂಡಿರುವ ಆಧ್ಯಾತ್ಮಿಕ ಪ್ರವಚನದಲ್ಲಿ ಮಾತನಾಡಿದರು.
ಇಂದು ನಾವು ರಾಮನು ನೀನೇ ರಹಿಮನು ನೀನೇ ಎನ್ನುವ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಭಕ್ತ ಸಮೂಹಕ್ಕೆ ಕರೆ ನೀಡಿದರು.
ಪುರಸಭೆ ಸದಸ್ಯರಾದ ಗುರುಶಾಂತಯ್ಯ ಹಿರೇಮಠ, ಸಂತೋಷ ಮಲ್ಲಾಬಾದ ತಾಲೂಕು ಅಬಕಾರಿ ಇಲಾಖೆ ಅಧಿಕಾರಿ ವನಿತಾ ಡಿ.ಬಿ.ಪಾಟೀಲ ಅಧ್ಯಕ್ಷರು ಶರಣ ಸಾಹಿತ್ಯ ಸ್ವಾಗತ ಸಮಿತಿ. ಗಣ್ಯರಾದ ಶರಣಗೌಡ ಪಾಟೀಲ, ಚಂದ್ರಶೇಖರ, ಸುಧೀಂದ್ರ, ವಕೀಲ ಬಸವರಾಜ ಮದರಿ ಇದ್ದರು.