ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ಜೀವನಾಧಾರಿತ ಕೌಶಲ್ಯಗಳು ಜೀವನಕ್ಕೆ ಆಧಾರ ಸ್ತಂಭವಿದಂತೆ ಎಂದು ಯುವ ಸ್ಪಂದನ ಯುವ ಪರಿವರ್ತಕಿ ಮಮತಾ ರಾಜೋಳಕರ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಸ್ಪಂದನ ಹಾಗೂ ಜನ ಆರೋಗ್ಯ ಕೇಂದ್ರ ನಿಮ್ಹಾನ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಒಂದು ದಿನದ ಜೀವನ ಕೌಶಲ್ಯ ಕಾರ್ಯಾಗಾರ”ದಲ್ಲಿ ಮಾತನಾಡಿದರು.
ಸಂವಹನ, ಒತ್ತಡ ನಿವಾರಣೆ, ಸ್ವ ಅರಿವು, ಅಂತರ್ ವ್ಯಕ್ತಿ ಸಂಬಂಧದ ಕೌಶಲ್ಯ, ವಿಮರ್ಶಾತ್ಮಕ, ಸೃಜನಾತ್ಮಕ ಚಿಂತನೆ, ಸಮಸ್ಯೆಯನ್ನು ಪರಿಹರಿಸುವುದು, ಸಹಾನುಭೂತಿ ಮತ್ತು ಇನ್ನಿತರ ವಿಷಯಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಜೀವನ ಕೌಶಲ್ಯಗಳ ಬಗೆಗೆ ಚಟುವಟಿಕೆಗಳ ಮುಖಾಂತರ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಬಸವರಾಜ್ ಕೊಂಬಿನ್, ಆಶಾ ಭಾಗವಾಲೆ, IQAC ಸಂಚಾಲಕರಾದ ಡಾ.ಕರಿ ಘೋಳೇಶ್ವರ, ಡಾ.ಅಂಬಣ್ಣ ಭಾವಿಮನಿ, ಡಾ. ಮಹಾಂತೇಶ್ ಸ್ವಾಮಿ, ಸೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು
ಉಪಸ್ಥಿತರಿದ್ದರು.