ವಿಜಯಪಥ ಸಮಗ್ರ ಸುದ್ದಿ
ತಿರುವನಂತಪುರಂ: ಕೇಂದ್ರ ಚುನಾವಣಾ ಆಯೋಗ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ಮಾಡುತ್ತಿರುವುದು ಹೆಚ್ಚಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ
ಒಂದೆಡೆ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎನ್ನುವ ಕೂಗು ಕೇಳಿಬರುತ್ತಿದೆ, ಇನ್ನೊಂದೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಕೇರಳದ ಮೂಲ ಸೌಕರ್ಯ (Infrastructure) ಇನ್ವೆಸ್ಟ್ಮೆಂಟ್ ನಿರ್ನಾಮ ಮಾಡಲು ಪಣತೊಟ್ಟಿದೆ ಎಂದು ಹೇಳಿದ್ದಾರೆ.
ಚುನಾವಣೆಗೆ ಬೆರಳೆಣಿಕೆ ದಿನ ಮಾತ್ರ ಬಾಕಿ ಇರುವಾಗಲೇ ಪಿಣರಾಯಿ ಮೇಲೆ ಆರೋಪ ಕೇಳಿಬಂದಿದ್ದು ವಿಪಕ್ಷಗಳ ಕೈಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಅಲ್ಲದೆ ಇದು ಎಡಪಕ್ಷಗಳ ಚುನಾವಣಾ ಗೆಲುವಿಗೆ ಹಿನ್ನಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಯುಎಇ ಮಾಜಿ ರಾಯಭಾರಿ ಸೇರಿಕೊಂಡು ಹಣ ವರ್ಗಾವಣೆ ಮಾಡಿದ್ದಾರೆ ಎಂದು ಚಿನ್ನಬೆಳ್ಳಿ ಕಳ್ಳಸಾಗಣಿಕೆ ಪ್ರಕರಣದಲ್ಲಿ ಬಂಧನದಲ್ಲಿರುವ ಸ್ವಪ್ನ ಸುರೇಶ್ ಹೇಳಿದ್ದಾರೆ ಕೇರಳ ಹೈಕೋರ್ಟ್ ಗೆ ಸುಮಿತ್ ಮಾಹಿತಿ ನೀಡಿದ್ದಾರೆ.
ಪಿಣರಾಯಿ ವಿಜಯನ್ ಮಾತ್ರವಲ್ಲ ಕೇರಳ ವಿಧಾನಸಭೆಯ ಸ್ಪೀಕರ್, ವಿಜಯನ್ ಸಂಪುಟದ ಇನ್ನೂ ಮೂವರು ಸಚಿವರು ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ವಪ್ನ ಸುರೇಶ ಹೇಳಿದ್ದಾರೆಂದು ಸುಮಿತ್ ಕೋರ್ಟ್ಗೆ ತಿಳಿಸಿದ್ದಾರೆ.
ಅಲ್ಲದೆ ಪಿಣರಾಯಿ ವಿಜಯನ್ ಹಾಗೂ ಅವರ ಮಾಜಿ ಕಾರ್ಯದರ್ಶಿ ಶಿವಶಂಕರ್, ವೈಯಕ್ತಿಕ ಸಿಬ್ಬಂದಿ ಜತೆಗೆ ನಿಕಟ ಸಂಬಂಧ ಇತ್ತು ಎಂದು ಸ್ವಪ್ನ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.