ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ಹದಿನೇಳನೇ ಶತಮಾನದ ಕೊನೆಯ ವಚನಕಾರ ಚರಚಕ್ರವರ್ತಿ ಶ್ರೀ ಷಣ್ಮುಖ ಶಿವಯೋಗಿಗಳು ತಪಸ್ಸುಗೈದ ತಾಲೂಕಿನ ಕೋಳಕೂರ ಗ್ರಾಮದ ಹೊರ ವಲಯದಲ್ಲಿರುವ ಜೋಗಿಕೊಳ್ಳವನ್ನು ಜನಪ್ರತಿನಿಧಿಗಳು ಮತ್ತು ಸರಕಾರ ವಿಶೇಷವಾದ ಆಸಕ್ತಿ ವಹಿಸಿ ಅಭಿವೃದ್ಧಿ ಪಡಿಸಬೇಕೆಂದು ಶ್ರೀ ನಿರಂಜನ ಸ್ವಾಮೀಜಿ ಸಲಹೆ ನೀಡಿದರು.
ಜೋಗಿಕೊಳ್ಳಕ್ಕೆ ಭೇಟಿ ನೀಡಿದ ಅವರು, ಜೇವರ್ಗಿಯ ಷಣ್ಮುಖ ಶಿವಯೋಗಿಗಳು ಖ್ಯಾತ ವಚನಕಾರರಾಗಿದ್ದು ಅವರ ವಚನ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕೆಂದರು.
ಪಿ.ಎಂ. ಮಠ, ಐ.ಎಸ್.ಹಿರೇಮಠ, ಅನೀಲ ರಾಂಪೂರ, ಭಗವಂತರಾಯ ಶಿವಣ್ಣವರ, ಗುರುಲಿಂಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಬಿರಾದಾರ, ಮಹಿಳಾ ಸದಸ್ಯರಾದ ಕಾವೇರಿ ಪಾಟೀಲ, ಗೀತಾ ರಾಜೋಳ್ಳಿ, ಮಹಾನಂದ ಹುಗ್ಗಿ, ಸಾವಿತ್ರಿ ಹಳ್ಳಿ, ಸಂಗೀತಾ ಘಂಟಿಮಠ, ಸರಸ್ವತಿ ಬಿರಾದಾರ, ವಿಜಯಲಕ್ಷ್ಮಿ ಪಾಟೀಲ, ತ್ರಿವೇಣಿ ಕುಳಗೇರಿ ಸೇರಿದಂತೆ ನೂರಾರು ಜನ ಇದ್ದರು.