ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ಹೆಣ್ಣು ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ ಮತ್ತು ಮಗಳಾಗಿ ಹೀಗೆ ವಿವಿಧ ರೂಪದಲ್ಲಿ ನಮಗೆ ಸದ ಒಳಿತನ್ನೇ ಬಯಸುತ್ತಾಳೆ. ಹೀಗಾಗಿ ಆಕೆಯನ್ನು ನಾವು ಗೌರವಿಸುವುದನ್ನು ಮೊದಲು ಕಲಿಯಬೇಕು ಎಂದು ಸಂಚಾರಿ ಯೋಗಿಗಳಾದ ಶ್ರೀ ನಿರಂಜನ ಸ್ವಾಮೀಜಿ ಹೇಳಿದರು.
ಇಂದು ಪಟ್ಟಣದಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ ಅವರು, ಮಹಿಳಾ ದಿನಾಚರಣೆಯ ಇಂದು ತುಂಬಾ ಅವಶ್ಯ. ಕಾರಣ ಆಕೆ ನಮ್ಮನ್ನು ಎಷ್ಟೇ ಪೊಷಿಸುತ್ತಿದ್ದರೂ ನಾವು ಆಕೆಯನ್ನಿ ಒಂದು ರೀತಿ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಅವಳಿಂದಲೇ ನಾವು ಎಂಬುದನ್ನು ಮರೆತು ಬಿಡುತ್ತೇವೆ. ಹೀಗಾಗಿ ಈ ದಿನವಾದರೂ ಆಕೆಯನ್ನು ನಾವು ಗೌರವಿಸುವ ಬಗ್ಗೆ ತಿಳಿದುಕೊಳ್ಳಬೇಕು. ಹಾಗಾಗಿ ಇಂಥ ಕಾರ್ಯಕ್ರಮಗಳು ಬೇಕು ಎಂದು ಹೇಳಿದರು.
ಹೆಣ್ಣು ತಾಯಿಯಾಗಿ ಮಡದಿಯಾಗಿ ತಂಗಿಯಾಗಿ ಅಕ್ಕನಾಗಿ ತಮ್ಮ ಜೀವನವಿಡೀ ಸಂಸಾರದ ಕಣ್ಣಾಗಿತ್ತಾಳೆ. ಅಷ್ಟೇಅಲ್ಲ ದೇಶದ ಉನ್ನತಿಗೂ ದುಡಿಯುವ ಮೂಲಕ ಮಹಿಳೆಯರು ಆದರ್ಶವಾಗಿದ್ದಾರೆ. ಅವರ ಜ್ಞಾನ ವಿಶಾಲವಾದುದು. ಅದನ್ನು ಯಾವಪದಗಳಿಂದಲೂ ಬಣ್ಣಿಸಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷೆ ಕಾವೇರಿ ಪಾಟೀಲ, ನೀಲಮ್ಮನ ಬಳಗದ ಗೀತಾ ರಾಜೋಳ್ಳಿ, ಮಹಾನಂದಾ ಹುಗ್ಗಿ, ಲೀಲಾವತಿ ಅರಳಿ, ಸಾವಿತ್ರಿ ಹಳ್ಳಿ, ಸಂಗೀತಾ ಘಂಟಿಮಠ, ರಾಜೇಶ್ವರಿ ಹಿರೇಗೌಡ, ನಾಗಮ್ಮ ಬೀಳವಾರ ಸೇರಿ ಅನೇಕರು ಹಾಜರಿದ್ದರು.